ಅಣಬೆ ಅಡುಗೆ, ಅಪರಾಧದ ಕತೆ: ಡಾ. ವಿನತೆ ಶರ್ಮಾ ಅಂಕಣ
ನ್ಯಾಯಾಲಯವು ಈ ಕೇಸ್ ಗೆಂದು ಈ ವರ್ಷ ಲಾಟ್ರೋಬ್ ವ್ಯಾಲಿ ಪ್ರದೇಶದ ಸುಮಾರು ಹದಿನೈದು ಸಾವಿರ ಜನರನ್ನು ಸಂಪರ್ಕಿಸಿ ಜ್ಯೂರಿಗಳಾಗುತ್ತೀರಾ ಎಂದು ಕೇಳಿತ್ತು. ಜ್ಯೂರಿಗಳಾಗುವುದಕ್ಕೆ ಒಪ್ಪಿಕೊಂಡರೆ ಅವರು ಸುಮಾರು ನಾಲ್ಕು ತಿಂಗಳ ಕಾಲ ಕೌಂಟಿ ಮತ್ತು ರಾಜ್ಯದ ಸುಪ್ರೀಂ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಸಮಯವನ್ನು ಕೊಡಬೇಕಿತ್ತು. ಅದಲ್ಲದೆ, ಕೇಸ್ ನಡೆಯುವುದನ್ನು ನಿಯಮಿತವಾಗಿ ಗಮನವಿಟ್ಟು ನೋಡಿ, ತಮ್ಮ ತಂಡದಲ್ಲಿ ಚರ್ಚಿಸಿ ವಾರದಿಂದ ವಾರಕ್ಕೆ ಮುನ್ನಡೆಯುವುದಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ವಸ್ತುಗಳ ಸರ್ವಾಧಿಕಾರದಿಂದ ಮುಕ್ತಿ ಪಡೆಯವುದು ಹೇಗೆ?: ಎಲ್.ಜಿ.ಮೀರಾ ಅಂಕಣ
ವಸ್ತುಗಳನ್ನು ವ್ಯವಸ್ಥಿತವಾಗಿ ಇರಿಸಿಕೊಳ್ಳುವ ವಿಷಯದ ಬಂದಾಗ, ಕೊನೆಗೂ ನಾವು ಮನುಷ್ಯರು ಅಭ್ಯಾಸಗಳ ದಾಸರು ಅನ್ನಿಸುತ್ತದೆ. ಚಿಕ್ಕದೋ ದೊಡ್ಡದೋ, ಮುಖ್ಯವೋ, ಅಮುಖ್ಯವೋ ಯಾವುದೇ ವಸ್ತುವನ್ನಾದರೂ ಯಾವಾಗಲೂ ಒಂದೇ ಜಾಗದಲ್ಲಿ ಇಡಲು ಕಲಿತೆವು ಅಂದರೆ ಅಲ್ಲೇ ಇಡುತ್ತೇವೆ, ಅಭ್ಯಾಸ ಆಗಿಬಿಟ್ಟಿತೆಂದರೆ, ಎಷ್ಟೋ ಸಲ ಅನ್ಯಮನಸ್ಕರಾಗಿಯೂ ವಸ್ತುಗಳನ್ನು ಸರಿಯಾದ ಜಾಗದಲ್ಲೇ ಇಟ್ಟುಬಿಡುತ್ತೇವೆ! ಹೀಗಾಗಿ ತುಂಬ ಮುಖ್ಯವಾದ ಸಲಕರಣೆಗಳನ್ನಾದರೂ ಒಂದೇ ಜಾಗದಲ್ಲಿ ಯಾವಾಗಲೂ ಇಡುವ ಅಭ್ಯಾಸವನ್ನು ಮಾಡಿಕೊಂಡೆವೆಂದರೆ ನಮಗೆ ನಾವೇ ದೊಡ್ಡ ಸಹಾಯ ಮಡಿಕೊಂಡೆವು ಎಂದರ್ಥ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ
ಆಸ್ಟ್ರೇಲಿಯಾದ ಐತಿಹಾಸಿಕ ಮೈಲಿಗಲ್ಲು: ಡಾ. ವಿನತೆ ಶರ್ಮಾ ಅಂಕಣ
ಒಂದೆಡೆಯಿಂದ ಇನ್ನೊಂದು ಎಡೆಗೆ ಹೋಗುವ ದಾರಿಯ ಬಗ್ಗೆ ಹೇಳಲು ಕರಾರುವಾಕ್ಕಾದ ಸೂಚನೆಗಳನ್ನು ಹಾಡುಗಳಲ್ಲಿ ಅಡಕಿಸಿದ್ದಾರೆ. ಎಲ್ಲಿ ಕುಡಿಯಲು ನೀರು ಸಿಗುತ್ತದೆ, ತಿನ್ನಲು ಗೆಡ್ಡೆಗೆಣಸು, ತಂಗಲು ಸ್ಥಳ ಸಿಗುತ್ತದೆ, ಅನ್ನುವುದೂ ಈ ಹಾಡುಗಳಲ್ಲಿ ತಿಳಿಯುತ್ತದೆ. ಆಕಾಶದಲ್ಲಿ ಬೆಳಗಿನ ಸೂರ್ಯರಶ್ಮಿ ಇನ್ನೂ ಕೆಳಗಿರುವಾಗ ಈ ನೀರಿನ ತೊರೆಯಿಂದ ನಡೆಯುತ್ತಾ, ಓಡುತ್ತಾ ಹೊರಟು ಆ ದೊಡ್ಡ ಗಮ್ ಮರದ ಉತ್ತರಕ್ಕಿರುವ ಕುರುಚಲು ಪೊದೆಕಾಡು ದಾಟಿ ಬಿಸಿಲು ನಡುನೆತ್ತಿಯ ಮೇಲಿದ್ದಾಗ ಆ ಕಿರುದಿಣ್ಣೆ ಸಿಗುತ್ತದೆ. ಅದೇ ದಾರಿಯಲ್ಲಿ ಸೂರ್ಯನ ಇಳಿಬಿಸಿಲಿನ ಜಾಡನ್ನು ಹಿಂಬಾಲಿಸುತ್ತಾ ಹೋದರೆ ಬಂಡೆರಾಶಿ ಕಾಣುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಹೊಸ ಸಹಸ್ರಮಾನದವರಿಂದ ಹಿರಿಯರು ಕಲಿಯಬೇಕಾದ ಪಾಠಗಳು: ಎಲ್.ಜಿ.ಮೀರಾ ಅಂಕಣ
ಒಂದಂತೂ ನಿಜ. ಅಂತರ್ಜಾಲದಿಂದಾಗಿ ಇಡಿ ಪ್ರಪಂಚವೇ ಇವತ್ತು ಒಂದು ಹಳ್ಳಿಯಾಗಿದೆ. ಯಾವುದನ್ನು ಹಿಂದಿನ ಬಾಗಿಲಿನ ವಸಾಹತೀಕರಣ ಎಂದು ಕರೆಯಲಾಗುವುದೋ ಅಂತಹ ಜಾಗತೀಕರಣದಿಂದಾಗಿ ಪ್ರಪಂಚ ಮಟ್ಟದಲ್ಲಿ ತಮ್ಮ ವ್ಯವಹಾರಗಳನ್ನು, ಉದ್ಯಮಗಳನ್ನು ಸ್ಥಾಪಿಸುವ ದೈತ್ಯ ಬಹುರಾಷ್ಟ್ರೀಯ ಕಂಪೆನಿಗಳು ಚಿಕ್ಕಪುಟ್ಟ ದೇಶಗಳಲ್ಲೂ ತಮ್ಮ ಅಸ್ತಿತ್ವವನ್ನು ಸಾರಿ ಹೇಳುತ್ತಿವೆ. ಇವು ನಮ್ಮ ರಸ್ತೆಗಳ ನೋಟಗಳನ್ನು ಮಾತ್ರವಲ್ಲ, ಬದುಕು, ಹಣಕಾಸು ಮತ್ತು ಸಂಬಂಧಗಳನ್ನು ನಾವು ನೋಡುವ ರೀತಿಯನ್ನು ಸಹ ಬದಲಿಸಿವೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ
ಮನೆಗೆ ಮಾರಿ… ಊರಿಗೆ ಉಪಕಾರಿ: ಎಸ್. ನಾಗಶ್ರೀ ಅಜಯ್ ಅಂಕಣ
ಪ್ರಪಂಚದ ಕಣ್ಣಿಗೆ ಬೀಳುವಾಗಿನ ನಾಟಕವನ್ನಾದರೂ ಸಹಿಸಬಹುದು. ಕುಟುಂಬದೊಳಗೂ ಸಹಜವಾಗಿ ಬೆರೆಯಲಾಗದ ಸ್ಥಿತಿಯೀಗ ಪ್ರತಿ ಮನೆಯ ದುರಂತ. ತೊಟ್ಟಿಲ ಕೂಸು ಕಿಟಾರೆಂದರೆ ಗೂಗಲ್ ರಿಸರ್ಚ್ ಮಾಡುವ, ನಿಂಗೇನ್ಗೊತ್ತು ಈ ಕಾಲದ ಕಷ್ಟಸುಖ ಸುಮ್ಮನಿರಮ್ಮ ಎಂದು ಮೂರು ಮಕ್ಕಳು ಹೆತ್ತಾಕೆಯನ್ನೇ ಮೂಲೆಗೆ ಕೂರಿಸುವ ದಿನ. ಮೊಮ್ಮಕ್ಕಳಿಗೆ ಬಾಯಿಪಾಠ ಹೇಳಿಕೊಡಲು, ಚದುರಂಗ, ಚೌಕಾಬಾರ, ಹುಲಿ ಕರಡಿ ಆಡಿಸಲು, ಅಡುಗೆಯ ಪ್ರಾಥಮಿಕ ತರಬೇತಿ ನೀಡಲು, ರಂಗೋಲಿ, ಕಸೂತಿ, ಹಾಡುಹಸೆ ಕಲಿಸಲು ಹಾತೊರೆಯುವ ಅಜ್ಜ ಅಜ್ಜಿಯರು ಇನ್ನೂ ಇದ್ದಾರೆ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ
ಸತ್ಯ-ಮಿಥ್ಯಗಳ ಲೋಕವಿದು!: ಡಾ. ವಿನತೆ ಶರ್ಮಾ ಅಂಕಣ
ವಿಮಾನ ಡಿಕ್ಕಿ ಹೊಡೆದ ಆಸ್ಪತ್ರೆ, ಮೆಡಿಕಲ್ ಕಾಲೇಜು ಹಾಸ್ಟೆಲ್‌ನಲ್ಲಿದ್ದ ಕೆಲವರು ಏನಾಗುತ್ತಿದೆ ಎಂದು ಕೇಳುತ್ತಾ ಆ ಪ್ರಶ್ನೆಗೊಂದು ಕೊನೆ ಚುಕ್ಕೆ ಇಡದೆಯೆ ಹೋಗಿದ್ದಾರೆ. ರೆಸ್ಟ್ ಇನ್ ಪೀಸ್. ಆತ್ಮಕ್ಕೆ ಶಾಂತಿ ಸಿಗಲಿ. ಕಣ್ಣೀರು, ದಿಗ್ಭ್ರಮೆ, ಪುಂಖಾನುಪುಂಖ ಪ್ರಶ್ನೆಗಳು, ಎಲ್ಲರೂ ಹುಡುಕುತ್ತಿರುವ ಉತ್ತರಗಳ ಸಾಗರ ಅಪ್ಪಳಿಸಿದೆ. ಅದ್ಯಾವುದೊ ಕರುಣಾಳು ಬೆಳಕು ಒಬ್ಬನೇ ಒಬ್ಬ ಪ್ರಯಾಣಿಕನನ್ನು ಕೈಹಿಡಿದು ನಡೆಸಿ ಕಾಪಾಡಿದೆ. ಅವನ ಕಥೆ ಅಪನಂಬಿಕೆಗಳ ಲೋಕದಲ್ಲಿ ಉಳಿದ ಒಂದೇ ಒಂದು ಹುಲ್ಲುಕಡ್ಡಿ ಸತ್ಯವಾಗಿದೆ. ಇದೇನಿದು ಮಿಥ್ಯ-ಸತ್ಯಗಳ ಲೋಕವಿದು!
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ನಾರಿ ಮತ್ತು ವಾಹನ ಸವಾರಿ – ಸಬಲೀಕರಣದ ಪರಿಣಾಮಕಾರಿ ದಾರಿ!: ಡಾ.ಎಲ್.ಜಿ.ಮೀರಾ ಅಂಕಣ
ನಮ್ಮ ಜೀವನವೆಂಬ ವಾಹನದ ಚಾಲಕಪೀಠದಲ್ಲಿ ಯಾರಿದ್ದಾರೆ? ನಾವೋ ಅಥವಾ ಬೇರೆ ಯಾರಾದರೂ ಅಧಿಕಾರಸ್ಥರೋ? ಗಂಡಾಳಿಕೆಯ ಸಮಾಜಗಳಲ್ಲಿ ಹೆಣ್ಣು ತನ್ನ ಜೀವನದ ಚಾಲಕ ಪೀಠದಲ್ಲಿ ಕುಳಿತಿದ್ದು ತೀರಾ ಅಪರೂಪ. ಅವಳು ಏನು ತಿನ್ನಬೇಕು, ಕುಡಿಯಬೇಕು, ಯಾವ ಬಟ್ಟೆ ತೊಡಬೇಕು ಮುಂತಾದ ಸಾಧಾರಣ, ದೈನಿಕ ಸಂಗತಿಗಳಿಂದ ಹಿಡಿದು ಓದು, ಕೆಲಸ, ಮದುವೆ, ಆಸ್ತಿಗಳಿಕೆಗಳಂತಹ ಮುಖ್ಯ ವಿಷಯಗಳ ತನಕ ಮನೆಯ ಗಂಡಸರೋ ಅಥವಾ ಅವರ ಪ್ರತಿನಿಧಿಗಳಾದವರೋ ನಿರ್ಧರಿಸುವ ಕಾಲ ಅನೇಕ ಶತಮಾನಗಳ ತನಕ ಇತ್ತಲ್ಲ?
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ
ತಬ್ಬಿಬ್ಬಿನ ಚಳಿ, ರಾಜಕೀಯ, ಸುಧಾರಣೆ: ಡಾ. ವಿನತೆ ಶರ್ಮ ಅಂಕಣ
ಹೀಗೆಲ್ಲಾ ಚಳಿಯೆನ್ನುವುದು ಮನುಷ್ಯರಿಗೆ ಅನಿಸಿದರೆ ಇನ್ನು ಹೂ, ಹಣ್ಣು, ದುಂಬಿ, ಚಿಟ್ಟೆ ಹಕ್ಕಿಗಳಿಗೆ ಏನನ್ನಿಸಬಹುದು? ನಮ್ಮನೆಯಲ್ಲಿ ತರಾವರಿ ಹೂಗಳು ನಲಿದಾಡುತ್ತಿವೆ. ಇವುಗಳಲ್ಲಿ ಕೆಲವು ಬೇಸಿಗೆಯಲ್ಲಿ ಆ ಬಿರುಬಿಸಿಲಿನ ತಾಪಕ್ಕೆ ಮುದುಡಿ ಅದೆಲ್ಲೂ ಅಡಗಿರುತ್ತವೆ. ಸ್ವಲ್ಪ ಬಿಸಿಲು ಕಡಿಮೆಯಾಗಿ ತಂಪು ಬಂತೆಂದರೆ ಇವಕ್ಕೆ ಬಲು ಖುಷಿ. ಹಾ ನಾವಿದ್ದೀವಿ ಎನ್ನುತ್ತಾ ಗಿಡಗಳ, ಬಳ್ಳಿಗಳ, ಮರಗಳ ಮುಡಿಯೇರುತ್ತವೆ. ಇನ್ನೂ ಕೆಲವು ಹೂ, ಹಣ್ಣುಗಳಿಗೆ ತಬ್ಬಿಬ್ಬು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ಹೆಣ್ಣಿನ ನಾಲ್ಕು ಕಷ್ಟಗಳು – ಅಂದು, ಇಂದು: ಡಾ. ಎಲ್. ಜಿ. ಮೀರಾ ಅಂಕಣ
ಪಿತೃಪ್ರಧಾನ ವ್ಯವಸ್ಥೆಯ ಬೇರುಗಳು ನಾವು ಅಂದುಕೊಂಡದ್ದಕ್ಕಿಂತ ಬಹಳ ಆಳವಾಗಿರುತ್ತವೆ. ಅವು ಗಂಡಸರ ಮನಸ್ಸಿನಲ್ಲಿ ಮಾತ್ರವಲ್ಲ ಹೆಂಗಸರ ಮನಸ್ಸಿನಲ್ಲೂ ಇರುತ್ತವೆ! ಏಕೆಂದರೆ ಸಾಮಾಜಿಕ ಮೌಲ್ಯಗಳ ಅಂತರಂಗೀಕರಣದ ಸ್ವರೂಪ ಹಾಗಿರುತ್ತದೆ. ಹೀಗಾಗಿ `ಉರಿಯದ ಒಲೆ, ಏಳದ ದೋಸೆ, ಬಯ್ಯುವ ಗಂಡ, ಅಳುವ ಮಗು’, ಪದಪುಂಜಗಳು ಇಂದಿನ ಹೆಣ್ಣಿನ ಮಟ್ಟಿಗೆ ಅನ್ವಯಿಸುತ್ತವೆಯೆ?
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಇಪ್ಪತ್ತನೆಯ ಬರಹ








