ಮಹಾದೇವಿಯಕ್ಕನೆಂಬ ಬೆಳಕು…: ಸುಭದ್ರಾ ಹೆಗಡೆ ಬರಹ
ಅಕ್ಕನ ವಚನಗಳನ್ನು ಉದಾರಿಸುತ್ತ, ಆ ಘಟನೆಗಳಿಗೆ ಪೂರಕವಾಗುವಂತೆ ಕತೆಗಳನ್ನು ಹೇಳುವುದು ಈ ಕೃತಿಯ ಮತ್ತೊಂದು ವಿಶೇಷತೆ. ರಾಜ ಮನೆತನದ ರೀತಿ-ರಿವಾಜುಗಳನ್ನು ಸ್ವತಂತ್ರ ಮನೋಭಾವದ ಅಕ್ಕನಿಗೆ ಸಹಿಸುವುದು ಸಹಜವಾಗಿಯೇ ಕಷ್ಟವಾಗಿ, ಆ ರಾಜ ವೈಭೋಗವನ್ನೆಲ್ಲ ಧಿಕ್ಕರಿಸಿ ಹೊರ ನಡೆಯುತ್ತಾಳೆ. ಅಲ್ಲಿಂದ ಅಕ್ಕನ ಅಪರಿಮಿತ ಹುಡುಕಾಟ ನಿರಂತರವಾಗಿ ಸಾಗುತ್ತದೆ. ಒಂಟಿ ಹೆಣ್ಣು ಅರೆವಸ್ತ್ರ ಧರಿಸಿ ನಡೆವ ದಾರಿಯಲ್ಲಿ ಬರುವ ಅನೇಕ ಸಂಕಷ್ಟಗಳನ್ನು ಮೆಟ್ಟಿ ನಿಲ್ಲುವ ಧೀರೋದ್ಧಾತ ಮನಸ್ಸುಳ್ಳ ಛಲಗಾತಿ ಅಕ್ಕನ ಮೇರು ವ್ಯಕ್ತಿತ್ವವನ್ನು ಅದ್ಭುತವಾಗಿ ಕೆತ್ತಿದ್ದಾರೆ ಲೇಖಕಿಯವರು. ಅಕ್ಕನ ವ್ಯಕ್ತಿತ್ವದ ಅನಾವರಣವಾದ ರೀತಿ ಅಸದೃಶ್ಯವಾಗಿದೆ.
ಡಾ. ಎಚ್.ಎಸ್. ಅನುಪಮಾ ಅವರ “ಬೆಳಗಿನೊಳಗು ಮಹಾದೇವಿಯಕ್ಕ” ಕಾದಂಬರಿಯ ಕುರಿತು ಸುಭದ್ರಾ ಹೆಗಡೆ ಬರಹ
ಕನಸಾಗೇ ಉಳಿದ ಕನಸು: ಫಾತಿಮಾ ರಲಿಯಾ ಅನುಭವ ಕಥನದ ಕೆಲವು ಪುಟಗಳು
ನನ್ನ ಮಾತಲ್ಲಿ ಆತ್ಮವಿಶ್ವಾಸ, ಸತ್ಯ ಇಲ್ಲ ಅನ್ನುವುದು ತುಂಬಾ ಸ್ಪಷ್ಟವಾಗಿ ನನಗೇ ಗೊತ್ತಾಗುತ್ತಿತ್ತು, ಬಹುಶಃ ಅಮ್ಮನಿಗೂ ಗೊತ್ತಾಗಿದೆ. ನಾನು ಮಾತು ಮುಂದುವರೆಸಲಿಲ್ಲ, ಅಮ್ಮನೂ ಮುಂದುವರೆಸಲಿಲ್ಲ. ಇಬ್ಬರ ಮನದೊಳಗೂ ದುಃಖವೊಂದು ಹೊಯ್ದಾಡುತ್ತಿತ್ತು. ಅಲ್ಲಿ ನೆಲೆ ನಿಂತಿದ್ದ ಮೌನ ನಮ್ಮಬ್ಬರಲ್ಲೂ ಉಸಿರುಗಟ್ಟಿಸುವ ಭಾವ ಹುಟ್ಟಿಸುತ್ತಿತ್ತು. ಅಮ್ಮನ ಕಣ್ಣು ತುಂಬಿಕೊಳ್ಳುತ್ತಿತ್ತು. ನಾನು ತೀರಾ ನಿರ್ಭಾವುಕಳಂತೆ ಅಲ್ಲಿಂದ ಎದ್ದು ಹೋದೆ, ನನಗೆ ಹಾಗೆ ಹೋಗದೆ ಬೇರೆ ದಾರಿಯೇ ಇರಲಿಲ್ಲ. ಯಾಕೆಂದರೆ ಇನ್ನೆರಡೇ ಎರಡು ನಿಮಿಷ ನಾನಲ್ಲಿ ನಿಂತಿದ್ದರೂ ಅಳು ಭೋರ್ಗರೆಯುತ್ತಿತ್ತು.
ಫಾತಿಮಾ ರಲಿಯಾ ಅನುಭವ ಕಥನ “ಕೀಮೋ” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ
ನೇತಾಜಿ ಸುಭಾಷರ ಲೋಕದಲ್ಲಿ ನಮ್ಮದೊಂದು ಹೆಜ್ಜೆ: ನಾರಾಯಣ ಯಾಜಿ ಬರಹ
ರಾಮಾಯಣವನ್ನು ಹೊಸ ಇತಿಹಾಸದೊಂದಿಗೆ ನೇತಾಜಿ ಸುಭಾಶ್‌ಚಂದ್ರ ಬೋಸ್ ಅವರು ಇಂಗ್ಲೀಷಿನಲ್ಲಿ ಬರೆದ ಆತ್ಮಕಥೆಯನ್ನು “ಭಾರತೀಯ ಹೋರಾಟ” ಎನ್ನುವ ಹೆಸರಿನಲ್ಲಿ ಹೊರತಂದಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂ, ಗಾಂಧಿ ಒಂದು ಕಡೆ, ಅದಕ್ಕೆ ಪ್ರತಿಯಾಗಿ ನೇತಾಜಿ ಸುಭಾಶ್ ಬಾಬು ಎನ್ನುವ ಸುದ್ದಿ ಯಾವತ್ತಿನಿಂದಲೂ ಕೇಳುತ್ತಲೇ ಇದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ 1915 ರಿಂದ 1921ರ ತನಕ ಮಹತ್ವದ ತಿರುವು ಕಂಡ ದಿನಗಳು.
ಪ್ರೊ. ಕೆ.ಇ. ರಾಧಾಕೃಷ್ಣ ಅನುವಾದಿಸಿರುವ ಸುಭಾಶ್‌ಚಂದ್ರ ಬೋಸರ ಕೃತಿ “ಭಾರತೀಯ ಹೋರಾಟ”ದ ಕುರಿತು ನಾರಾಯಣ ಯಾಜಿ ಬರಹ, ನಿಮ್ಮ ಓದಿಗೆ
ಮುದಿರಾಜ್ ಬಾಣದ್ ಕಾದಂಬರಿ “ಸಿಕ್ಕು” ಕೃತಿಯ ಆಯ್ದ ಭಾಗ
ಅಡಿಗೆಮನೆಯಲ್ಲಿ ಇದ್ದ ಕಾಶಿಬಾಯಿ ಒಮ್ಮೆ ಸೂಕ್ಷ್ಮವಾಗಿ ಲಂಕ್ಯಾನನ್ನು ದಿಟ್ಟಿಸಿದಳು. ಆ ನೋಟಕ್ಕೆ ವಶೀಕರಣಗೊಂಡವನಂತೆ ಎದ್ದವನೇ ಮಗ ಹಾಗೂ ಮಗಳನ್ನು ಎಳೆದೆಳೆದು ಸಿಕ್ಕಸಿಕ್ಕಲ್ಲಿ ಮೈಮೇಲೆ ದೆವ್ವ ಬಂದವನಂತೆ ಬಡಿಯತೊಡಗಿದ. ಆ ಇಬ್ಬರೂ ಮಕ್ಕಳು ಬೆನ್ನನ್ನು ಸವರಿಕೊಳ್ಳುತ್ತ ತನ್ನ ತಂದೆ ಯಾಕೆ ಹೊಡೆಯುತ್ತಿದ್ದಾನೆ ಅನ್ನುವ ಅರಿವಿಲ್ಲದೆ ಅಳುತ್ತ ದಿಕ್ಕಿಗೊಂದು ಓಡತೊಡಗಿದರೆ ಹಿಂದೆ ಹಿಂದೆ ಹೋಗಿ ಮನಸ್ಸೋ ಇಚ್ಛೆ ಬೈಯುತ್ತ ಹೊಡೆಯತೊಡಗಿದ. ತಮ್ಮ ಅಜ್ಜಿಯಾಗಲಿ ಇಲ್ಲ ತಮ್ಮ ತಾಯಿಯಾಗಲಿ ಆ ಮಕ್ಕಳ ಸಹಾಯಕ್ಕೆ ಬರದೆ ಸುಮ್ಮನೆ ತಮ್ಮ ಪಾಡಿಗೆ ತಾವಿದ್ದದು, ತಂದೆಯ ಕೈಯಲ್ಲಿ ಅನಾಮತ್ತಾಗಿ ಸಿಕ್ಕಿ ಹೊಡೆಸಿಕೊಂಡಿದ್ದು ನೆನೆಸಿಕೊಂಡು ದುಃಖಿಸುತ್ತ ಮತ್ತಷ್ಟೂ ಅಳತೊಡಗಿದವು.
ಮುದಿರಾಜ್ ಬಾಣದ್ ಕಾದಂಬರಿ “ಸಿಕ್ಕು” ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ
ನವೀನ ತಂತ್ರಜ್ಞಾನದ ಕುರಿತ ನವೀನ ಮಾದರಿ ಕತೆಗಳು: ಗುರುರಾಜ ಕುಲಕರ್ಣಿ ಕೃತಿಯ ಕುರಿತು ವಸುಮತಿ ಉಡುಪ ಮಾತುಗಳು
ಈ ಕಥಾಸಂಕಲನದ ಕತೆಗಳು ಸಿದ್ಧ ಮಾದರಿಯ ಕತೆಗಳಿಗಿಂತ ವಿಭಿನ್ನವಾಗಿ ಚಿತ್ರಿತಗೊಂಡಿವೆ. ನವೀನ ತಂತ್ರಜ್ಞಾನದ ಕುರಿತು ಹೆಚ್ಚಿನ ಅರಿವಿಲ್ಲದವರಿಗೂ ತಿಳಿಯುವಂತೆ ಸರಳ ಭಾಷೆಯಲ್ಲಿ, ಸರಾಗವಾಗಿ ಕತೆ ಹೇಳಿದ್ದಾರೆ ಕುಲಕರ್ಣಿ, ಕತೆಗಳ ವೈವಿಧ್ಯ, ಭಾಷೆಯನ್ನು ಸಮರ್ಥವಾಗಿ, ಸುಲಲಿತವಾಗಿ ಬಳಸಿಕೊಂಡ ರೀತಿ, ಕತೆ ಹೇಳುವಲ್ಲಿನ ಲವಲವಿಕೆಯ ಗುಣದಿಂದಾಗಿ ಈ ಸಂಕಲನ ಛಂದ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದೆ. ಕನ್ನಡ ಸಾಹಿತ್ಯದ ಮಟ್ಟಿಗೆ ಅಪರೂಪ ಎನಿಸುವಂತಹ ಹಲವು ಕತೆಗಳು ಸಂಕಲನದಲ್ಲಿ ಗಮನ ಸೆಳೆಯುವಂತಿವೆ.
ಗುರುರಾಜ ಕುಲಕರ್ಣಿ ಕಥಾಸಂಕಲನ “ಹ್ಯಾಷ್ ಟ್ಯಾಗ್”ಗೆ ಛಂದ ಪುಸ್ತಕದ ಬಹುಮಾನ ಲಭಿಸಿದ್ದು, ಈ ಕೃತಿಯ ಕುರಿತು ವಸುಮತಿ ಉಡುಪ ಮಾತುಗಳು ನಿಮ್ಮ ಓದಿಗೆ
‘ಗೌರ್ಮೆಂಟ್ ಬ್ರಾಹ್ಮಣ’ನೆಂಬ ಪುಸ್ತಕವೂ ಮತ್ತು ನಾನು ರೂಪುಗೊಂಡ ಬಗೆಯೂ’: ಪ್ರಶಾಂತ್ ಬೆಳತೂರು ಬರಹ
ಚೇಳಿನಿಂದಲೇ ಹುಟ್ಟಿದ ಚೇಳಿನಿಂದಲೇ ಸತ್ತ ಎನ್ನುವ ತನ್ನಜ್ಜಿಯ ಮಾತುಗಳೊಂದಿಗೆ ತನ್ನ ತಂದೆಯನ್ನು ನೆನಪಿಸಿಕೊಳ್ಳುವ, ಪಂದ್ರಾ ಆಗಸ್ಟ್‌ನ ಸ್ವಾತಂತ್ರ್ಯ ನಿಜಕ್ಕೂ ಎಂತಹ ಸ್ವಾತಂತ್ರ್ಯ? ಯಾವ ಬಗೆಯ ಸ್ವಾತಂತ್ರ್ಯ? ಒಂದೇ ಒಂದು ಕೊಡದ ನೀರನ್ನು ಬಾವಿಯಲ್ಲಿ ಮೊಗೆಯಲಾರದೆ ಹೋದ ಕೆಳಗೇರಿಯ ಜನ ಅಂದು ಮೊಗೆಮೊಗೆದು ಸೇದಿದರು, ಮತ್ತೆ ಬಾವಿಗೆ ಸುರವಿದರು, ಮರುದಿನ ಆ ಬಾವಿಗಳಲ್ಲಿ ಇನ್ನಾರು ನೀರು ಮೊಗೆಯಬಾರದಂತೆ ಊರ ಜನರೇ ಶಾಶ್ವತವಾಗಿ ಮುಚ್ಚಿದ್ದರು ಎನ್ನುವಾಗ ಕರುಳು ಹಿಂಡಿದಂತಾಗುತ್ತದೆ.
ಪ್ರೊ. ಅರವಿಂದ ಮಾಲಗತ್ತಿ ಆತ್ಮಕತೆ “ಗೌರ್ಮೆಂಟ್ ಬ್ರಾಹ್ಮಣ”, ಹೇಗೆ ತಮ್ಮ ಬದುಕು ಬದಲಾಯಿಸಿತು ಎನ್ನುವುದರ ಕುರಿತು ಪ್ರಶಾಂತ್ ಬೆಳತೂರು ಬರಹ ಇಲ್ಲಿದೆ
ಬಾವಿಯೊಳಗೆ `ಪುಣ್ಯಕೋಟಿ’: ನಟರಾಜ್ ಅರಳಸುರಳಿ ಕೃತಿಯ ಬರಹ
ತಂಡೋಪತಂಡವಾಗಿ ಜನ ನಮ್ಮ ಮನೆಕಡೆ ಬರುತ್ತಿರುವುದು ಕಾಣಿಸಿತು. ಹಲವಾರು ಬ್ಯಾಟರಿ ಬೆಳಕುಗಳೂ ಒಂದೆರಡು ಪೆಟ್ರೋಮ್ಯಾಕ್ಸ್‌ಗಳೂ ಆ ಗುಂಪಿನಲ್ಲಿದ್ದವು. ಎಲ್ಲರೂ ಮನೆಯಂಗಳಕ್ಕೆ ಬಂದವರೇ ನೇರವಾಗಿ ಬಾವಿಯಕಡೆ ನಡೆದರು. ನೋಡನೋಡುತ್ತಿದ್ದಂತೆ ಮೂರ್ನಾಲ್ಕು ಜನ ಬಾವಿ ಇಳಿದರು. ಕೆಲವರು ಮೇಲಿನಿಂದ ನೇಣು ಇಳಿಬಿಟ್ಟರು. ದನಗಳ ಹೊಟ್ಟೆ ಕೆಳಗೆ ನೇಣು ತೂರಿಸಿ ಬಾವಿಯ ಇನ್ನೊಂದು ಭಾಗದಲ್ಲಿದ್ದವರಿಗೆ ತಲುಪಿಸಿದರು. ನೋಡ ನೋಡುತ್ತಿದ್ದಂತೆಯೇ ಒಂದೊಂದೇ ದನಗಳನ್ನು ಬಾವಿಯಿಂದ ಮೇಲೆತ್ತಿದರು.
ನಟರಾಜ್ ಅರಳಸುರಳಿ ಬರೆದ ತಮ್ಮ ತಂದೆಯವರ ಕುರಿತ ಬರಹಗಳ ಸಂಕಲನ “ಆಕಾಶಬುಟ್ಟಿ” ಕೃತಿಯ ಒಂದು ಬರಹ ನಿಮ್ಮ ಓದಿಗೆ.
ಮುಕ್ತ ಹಾಜರಿ: ಮುಕುಂದ ಜೋಷಿ: ಜಯಂತ ಕಾಯ್ಕಿಣಿ ಕೃತಿಯ ಬರಹ
ಅವರ ಆ ಪುಸ್ತಕಕ್ಕೆ ಅವರ ಹಕ್ಕೊತ್ತಾಯದ ಮೇಲೆ ನಾನು ಬ್ಲರ್ಬ್ ಬರೆದಿದ್ದೆ. ಈ ಬಗ್ಗೆ ನಮ್ಮ ನಡುವೆ ಒಂದು ಜೋಕ್ ಇತ್ತು. ಏನೆಂದರೆ ಆ ಪುಸ್ತಕ ಮುದ್ರಣ ಶುರುವಾಗುವ ಹಂತದಲ್ಲಿದೆ ಎಂದು ತಿಳಿದು ಅಜಿತ್ ಪಂಜಾಬ್‌ನಲ್ಲಿ ಸೇರಿ ನಾವು ಬೀರೋಚಿತವಾಗಿ ಸಿಲೆಬ್ರೇಟ್ ಮಾಡುವಾಗ, ಅವರು ಚೂರು ತೊದಲುತ್ತ, “ಈ ಪುಸ್ತಕ ಯಾವಾಗರೆ ಬರ್ಲಿ, ಅದಕ್ಕೆ ಬಲ್ಬ್ ಮಾತ್ರ ನೀವೇ ಬರೀಬೇಕ್ರಿ’’ – ಎಂದರು. ಅಂದಿನಿಂದ ಬ್ಲರ್ಬ್ ಪದಕ್ಕೆ ಪರ್ಯಾಯವೆಂಬಂತೆ ನಾವು ಬಲ್ಬ್ ಎಂದೇ ಬಳಸುತ್ತಿದ್ದೆವು. ಎಷ್ಟು ಕ್ಯಾಂಡಲಿಂದು ಇತ್ಯಾದಿ ವಿವರಗಳೊಂದಿಗೆ. ಯಾವುದಾದರೂ ಹೊಸ ಪುಸ್ತಕದ ಹಿನ್ನುಡಿಯಲ್ಲಿ ಹುರುಳಿಲ್ಲದಿದ್ದರೆ, ‘‘ಝೀರೋ ಕ್ಯಾಂಡಲ್ ಬಲ್ಬ್ರೀ” ಅಂತಿದ್ರು.
ಜಯಂತ ಕಾಯ್ಕಿಣಿ ಕೃತಿ “ತಾರಿ ದಂಡೆ”ಯ ಮತ್ತೊಂದು ಬರಹ ನಿಮ್ಮ ಓದಿಗೆ
‘ಮಾವಿನ ತುಮಕಿʼ: ಮಾಮಾ ಶಾಂತಾ: ಜಯಂತ ಕಾಯ್ಕಿಣಿ ಕೃತಿಯ ಬರಹ
ಯಾವುದೇ ಬಸ್ಸು ಹಿಡಿಯಲು ಸರಿಯಾದ ಸಮಯಕ್ಕೆ ಅಥವಾ ಚೂರು ಮುಂಚಿತವಾಗಿ ಆಕೆ ಹೋಗಿದ್ದೇ ಇಲ್ಲ. ಬಸ್ಸು ಹೊರಡುವ ಟೈಮಿಗೆ ಆಕೆ ಮಹಾರಾಣಿಯಂತೆ ನಿಧಾನಕ್ಕೆ ಮನೆಯಿಂದ ಹೊರಡುತ್ತಿದ್ದಳು. ಮತ್ತು ಮನೆಯಲ್ಲಿದ್ದ ನನ್ನನ್ನೋ ರಾಜೇಂದ್ರನನ್ನೋ ರಮಾನಂದನನ್ನೋ “ಹೋಗು ಬಸ್ ನಿಲ್ಲಿಸು” ಎಂದು ಬಸ್ ಸ್ಟ್ಯಾಂಡಿಗೆ ಅಟ್ಟುತ್ತಿದ್ದಳು. ನಾವ್ಯಾರೂ ಇರದಿದ್ದರೆ ಹಾದಿಯಲ್ಲಿ ಸಿಗುವ ಯಾವುದಾದರೂ ಸೈಕಲ್ ಸವಾರರನ್ನು ಓಡಿಸುತ್ತಿದ್ದಳು. ಸಣ್ಣ ಊರಿನ ಬಸ್‌ಸ್ಟ್ಯಾಂಡ್ ಕಂಟ್ರೋಲರ್ ಎಲ್ಲರಿಗೂ ಪರಿಚಿತರಾಗಿದ್ದರಿಂದ ಒಮ್ಮೊಮ್ಮೆ ನಿಲ್ಲಿಸುತ್ತಿದ್ದರು. ಕೆಲವೊಮ್ಮೆ ಬಸ್ಸು ಹೋಗಿಬಿಟ್ಟಿರುತ್ತಿದ್ದವು. ಆಗ ಎಲ್ಲರೂ ಬೈಸಿಕೊಳ್ಳುತ್ತಿದ್ದೆವು.
ಜಯಂತ ಕಾಯ್ಕಿಣಿ ಕೃತಿ “ತಾರಿ ದಂಡೆ”ಯ ಬರಹ ನಿಮ್ಮ ಓದಿಗೆ








