ಹೇಗೆ ಸಾಗಲಿ?
ಸಾಗರದ ಅಲೆಗಳು ಹಾಗೆ,
ಅಲೆಯುವವು ಎಡಬಿಡದೇ,
ಹಿಂದೂ – ಮುಂದೂ…
ನಿಲ್ಲದ ಈ ಓಡಾಟ,
ಸಮಯದೊಂದಿಗಿನ ಈ
ನಿಲ್ಲದ ಸೆಣೆಸಾಟ.
ದೀರ್ಘ ವಿರಾಮ,
ಪ್ರಕೃತಿ ಬರೆದ ನೀತಿ,
ಅನ್ವಯಿಸದು ಅಲೆಗಳಿಗೆ?
ಏನಿದರ ಉದ್ದೇಶ?
ಸಾಗರ ಸಾಧಿಸಿದ್ದೇನು,
ನಿರಂತರ ಯಾನದಲಿ?
ನಿರಂಜನ ಕೇಶವ ನಾಯಕ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಗ್ರಾಮದವರು. ಪ್ರಸ್ತುತ ಮಂಗಳೂರಿನಲ್ಲಿ ವಾಸ.
ಸರ್ಕಾರಿ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಕ್ಕಳ ಕಥೆಗಳು ಅವ್ವ ಪುಸ್ತಕಾಲಯ ಹಾಗೂ ಕರ್ನಾಟಕ ರಾಜ್ಯ ಮಕ್ಕಳು ಸಾಹಿತ್ಯ ಪರಿಷತ್ತು ಶಿವಮೊಗ್ಗ ಇವರ ಸಂಪಾದಿತ ಪುಸ್ತಕಗಳಲ್ಲಿ ಪ್ರಕಟಗೊಂಡಿವೆ ಹಾಗೂ ಕೆಲವು ಕವನಗಳು ಅನೇಕ ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

ಒಳ್ಳೆಯ ಕವನ