ಮುದ ತುಂಬಿದ ಮಲೆನಾಡಿನ ಮದ್ವೆಮನೆ: ಭವ್ಯ ಟಿ.ಎಸ್. ಸರಣಿ
ಗಂಡು ಮತ್ತು ಹೆಣ್ಣಿನ ಮನೆಯ ಒಂದು ಗೋಡೆಯ ಮೇಲೆ ಹಸೆ ಕಲಾವಿದರು ಚಿತ್ತಾರ ಬಿಡಿಸಿ ಗಂಡು ಮತ್ತು ಹೆಣ್ಣಿನ ಹೆಸರು ಬರೆದಿರುತ್ತಾರೆ. ಇದನ್ನು ಹಸೆಗೋಡೆ ಎನ್ನುತ್ತಾರೆ. ಚಪ್ಪರದ ದಿನ, ಮದುವೆ ಮಂಟಪಕ್ಕೆ ಹೊರಡಿಸುವ ಮೊದಲು, ಮದುವೆಯ ನಂತರ ಮದುಮಕ್ಕಳನ್ನು ಈ ಗೋಡೆಯ ಕೆಳಗೆ ಕೂರಿಸಿ ಬಂಧುಗಳೆಲ್ಲರೂ ಅಕ್ಷತೆ ಹಾಕಿ ಹರಸುತ್ತಾರೆ. ಈ ಹಸೆ ಚಿತ್ತಾರವು ಮದುವೆಯ ಸವಿನೆನಪಾಗಿ ಶಾಶ್ವತವಾಗಿ ಆ ಮನೆಯ ಗೋಡೆಯ ಮೇಲೆ ಉಳಿದಿರುತ್ತದೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ
