ಕಾಫಿ ಮತ್ತು ಕಾಫಿರರ ಕಥೆ!: ದರ್ಶನ್ ಜಯಣ್ಣ ಸರಣಿ
ಕ್ರಿಶ್ಚಿಯನ್ ದೇಶವಾದ ಇಥಿಯೋಪಿಯಾದಲ್ಲಿ ಕಾಫಿ ಉಗಮವಾದರೂ ಅದು ಪ್ರವರ್ಧಮಾನಕ್ಕೆ ಬಂದದ್ದು ಇಂದಿನ ಕಾಫಿಯಾಗಿ ರೂಪುಗೊಂಡಿದ್ದು ಮಾತ್ರ ಇಸ್ಲಾಮಿಕ್ ದೇಶಗಳಲ್ಲಿ ಅಂದರೆ ದಕ್ಷಿಣ ಅರೇಬಿಯಾ ಇಂದಿನ ಯೆಮೆನ್, ಸೌದಿಯ ದಕ್ಷಿಣನ ಅಭಾ ಪ್ರಾಂತ್ಯಗಳಲ್ಲಿ. ಒಟ್ಟೋಮನ್ ಸುಲ್ತಾನ ಕಾಫಿಯ ಶಕ್ತಿಯನ್ನು ಬಲ್ಲವನು ಈ ಬೀಜಗಳನ್ನು ರಫ್ತು ಮಾಡಬೇಕಾದರೆ ಹುರಿದೇ ಮಾಡಬೇಕೆಂಬ ಗಟ್ಟಿ ಫರ್ಮಾನು ಹೊರಡಿಸಿದ್ದ ಮತ್ತದು ಶತಮಾನಗಳ ಕಾಲ ಚಾಲ್ತಿಯಲ್ಲಿತ್ತು. ಇದಕ್ಕೆ ಕಾರಣ ಕಾಫಿ ಬೇರೆಲ್ಲೂ ಬೆಳೆಯಲು ಆಗಬಾರದು ಎಂಬ ಆಲೋಚನೆ.
ದರ್ಶನ್ ಜಯಣ್ಣ ಬರೆಯುವ “ಸೌದಿ ಡೇಟ್ಸ್” ಸರಣಿಯ ಹನ್ನೆರಡನೆಯ ಕಂತು
