ಕಾಡು, ಪುಸ್ತಕ, ಅಭಿಮಾನ ಹಾಗೂ ಅಂತರ್ಜಾಲ ಸಮುದಾಯಗಳ ಆಹ್ಲಾದಕರ ಲೋಕ: ಎಲ್.ಜಿ.ಮೀರಾ ಅಂಕಣ
ಮನುಷ್ಯ ಎಂಬ ಜೀವಿ ಈ ಭೂಮಿಯ ಮೇಲೆ ವಿಕಾಸಗೊಂಡಾಗಿನಿಂದ ಒಂದಲ್ಲ ಒಂದು ರೀತಿಯ ಸಮುದಾಯಗಳನ್ನು ಕಟ್ಟಿಕೊಂಡು ಬದುಕುತ್ತಿದ್ದಾನೆ. ಎಷ್ಟೇ ಜಗಳ, ಭಿನ್ನಾಭಿಪ್ರಾಯ, ಇರಿಸುಮುರಿಸು, ವೈಯಕ್ತಿಕ ಇಚ್ಛೆಗಳ ಬಲ್ಮೆ ಇದ್ದರೂ ನೆರೆಹೊರೆಯೋ, ವೃತ್ತಿ ಸಮುದಾಯವೋ, ಸ್ನೇಹಿತರ ಬಳಗವೋ, ನೆಂಟರಿಷ್ಟರ ಜೊತೆಗಾರಿಕೆಯೋ, ವಠಾರವೋ, ಅನೇಕ ಮನೆಘಟಕಗಳಿರುವ ಸಮುಚ್ಚಯಗಳೋ(ಅಪಾರ್ಟ್ಮೆಂಟ್)… ಒಟ್ಟಿನಲ್ಲಿ ಮನುಷ್ಯರಿಗೆ ಮನುಷ್ಯರ ಸಂಗ-ಸಹವಾಸ ಬೇಕು ಅಷ್ಟೆ. ಇದನ್ನು ಹೆಚ್ಚು ವಿವರಿಸುವ ಅಗತ್ಯ ಇಲ್ಲ ಅನ್ನಿಸುತ್ತೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಇಪ್ಪತ್ನಾಲ್ಕನೆಯ ಬರಹ
