ಬರವಣಿಗೆಯ ಹುಚ್ಚು ಹತ್ತಿದ್ದ ದಿನಗಳು…: ಎಚ್. ಗೋಪಾಲಕೃಷ್ಣ ಸರಣಿ
ಪತ್ರಿಕೆಗಳಿಗೆ ಬರಹ ರವಾನೆ ಆದಾಗ ಅಸ್ವೀಕೃತ ಆದರೆ ವಾಪಸ್ ಕಳಿಸಲು ಅಂಚೆ ಚೀಟಿ ಹಚ್ಚಿದ ಕವರ ಸಂಗಡ ಹೋಗುತ್ತಿತ್ತು. ಆಗ ಅರವತ್ತು ಎಪ್ಪತ್ತರ ದಶಕದಲ್ಲಿ “ಅಸ್ವೀಕೃತ ಲೇಖನಗಳನ್ನು ವಾಪಸ್ ಪಡೆಯಲು ಅಂಚೆ ಚೀಟಿ ಹಚ್ಚಿದ ಸ್ವ ವಿಳಾಸದ ಕವರ್ ಸಂಗಡ ಇರಲಿ” ಎಂದು ಎಲ್ಲಾ ಪತ್ರಿಕೆಗಳೂ ಬರಹಗಾರ ಪ್ರಭುಗಳಿಗೆ ವಿನಂತಿ ಮಾಡುತ್ತಿದ್ದರು. ಅದರಂತೆ ನಾವು ಬರಹಗಾರ ಪ್ರಭುಗಳು ಅವರ ವಿನಂತಿಯನ್ನು ಶಿರಸಾ ವಹಿಸಿ ಪಾಲಿಸುತ್ತಿದ್ದೆವು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೨ನೇ ಬರಹ ನಿಮ್ಮ ಓದಿಗೆ
