ದುಡ್ಡು ಬರ್ಲಿ ಐಸಾ… ಇನ್ನೂ ಕೊಡಿ ಐಸಾ…!: ಎಚ್. ಗೋಪಾಲಕೃಷ್ಣ ಸರಣಿ
ಅದರ ಮಾರನೇ ದಿವಸ ಹೋಗಿ ಭರಮಪ್ಪನ ಎದುರು ನಿಂತೆ. ಒಂದು ಗಂಟೆ ಕಾದೆ. ನನ್ನ ಕಡೆ ತಿರುಗಿ ನೋಡಲು ಸಹ ಅವರಿಗೆ ಪುರುಸೊತ್ತು ಇಲ್ಲರ. ಐದನೇ ದಿವಸವೂ ಇದೇ ರಿಪೀಟ್ ಆಯ್ತು. ಆರನೇ ದಿವಸ ಭಾನುವಾರ. ತೆಪ್ಪಗೆ ಮನೇಲೆ ಇದ್ದು ನನ್ನ ಅದೃಷ್ಟಕ್ಕೆ ಗಂಟೆ ಗಂಟೆಗೂ ಕೋಲಿನಿಂದ ಬಾರಿಸುತ್ತಾ ಕಳೆದೆ. ಸೋಮವಾರ ಬೆಳಿಗ್ಗೆ ಮತ್ತೆ ಕೆಇಬಿ ಆಫೀಸಿಗೆ ದಂಡ ಯಾತ್ರೆ ಮಾಡಿದೆ. ಜಗನ್ನಾಥ, ಅದೇ ಲೈನ್ ಮ್ಯಾನ್ ದಾರೀಲಿ ಸಿಕ್ಕಿದ. ನನ್ನನ್ನು ನೋಡಿ ಅವನ ಲೂನಾ ನಿಲ್ಲಿಸಿದ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಅರವತ್ತೈದನೆಯ ಕಂತು
