ಕೆ. ಸತ್ಯನಾರಾಯಣ ಪ್ರವಾಸ ಪ್ರಬಂಧಗಳ ಹೊಸ ಸರಣಿ “ನೆದರ್‌ಲ್ಯಾಂಡ್ಸ್ ಬಾಣಂತನ” ಆರಂಭ
ವಿದೇಶಿ ಪ್ರವಾಸದ ಅನುಭವ ಅಂದರೇನು? ನಾವು ಅಲ್ಲಿ ಕಂಡ ಪ್ರಕೃತಿಯ ದೃಶ್ಯಗಳೇ? ಜನಜೀವನದ ರೀತಿಯೇ? ವಿಚಿತ್ರ, ಅಸಂಗತ ಅನುಭವಗಳೇ? ನಮ್ಮ ಒಡನಾಟಕ್ಕೆ ಸಿಗುವ ವಿದೇಶೀಯರ ವರ್ತನೆಯೇ? ಈ ಕುರಿತು ನಾನು ಯೋಚಿಸಿರಲಿಲ್ಲ. ಯೋಚಿಸುವ ಸಂದರ್ಭ ಕೂಡ ಬಂದಿರಲಿಲ್ಲ. ವಿಮಾನದಲ್ಲಿ ಹಾರಾಡುವುದು, ಅಮೆರಿಕ, ಯುರೋಪು ಸುತ್ತುವುದು, ಪ್ರವಾಸದ ಸಮಯದಲ್ಲಿ ಪಡೆದ ಅನುಭವಗಳನ್ನು ಕುರಿತು ಬರೆಯುವುದು, ಮಾತನಾಡುವುದು, ಇಷ್ಟೇ ವಿದೇಶಿ ಪ್ರವಾಸದ ಅನುಭವ ಎಂಬ ತಪ್ಪು ಕಲ್ಪನೆ ನನ್ನಲ್ಲಿತ್ತು.
ಹಿರಿಯ ಕತೆಗಾರ ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ ಸರಣಿ “ನೆದರ್‌ಲ್ಯಾಂಡ್ಸ್ ಬಾಣಂತನ”
