Advertisement

ಕೆಂಡಸಂಪಿಗೆ

ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಿಧನ

ಸಾವಿರಾರು ಮರಗಳ ನೆಟ್ಟು, ಅವುಗಳನ್ನು ಪೋಷಿಸಿ, ಅದರಿಂದಲೇ ಖ್ಯಾತರಾದ ಶತಾಯುಷಿ ಸಾಲುಮರದ ತಿಮ್ಮಕ್ಕ (೧೧೪) ಇಂದು ನಿಧನರಾದರು.  ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ  ಜನಿಸಿದ್ದ  ಅವರು, ಪರಿಸರದ ಪಾಠಗಳನ್ನು ಶಾಲೆಯಲ್ಲಿ ಕಲಿತವರಲ್ಲವಾದರೂ, ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ, ಅವುಗಳ ಪೋಷಣೆಯಲ್ಲಿ ತಮ್ಮ ಜೀವನವನ್ನು ಕಳೆದವರು. ಇಂಥ ನಿಸ್ವಾರ್ಥ ಕಾರ್ಯಕ್ಕಾಗಿ ಅವರಿಗೆ ಹಲವು ಪ್ರಶಸ್ತಿಗಳು ಲಭಿಸಿದ್ದವು. 

Read More

ಕನ್ನಡ ಪ್ರಜ್ಞೆ: ಸುಕನ್ಯಾ ಕನಾರಳ್ಳಿ ಅಂಕಣ

ನನ್ನ ಮನೆಗೆ ಯಾವ ಮಕ್ಕಳು ಬಂದರೂ ಕನ್ನಡದಲ್ಲಿ ಮಾತಾಡೋದಾದ್ರೆ ಮಾತ್ರ ಒಳಗೆ ಬನ್ನಿ ಅಂತ ಯಾವ ಮುಲಾಜಿಲ್ಲದೆ ಹೇಳಿಬಿಡ್ತೀನಿ. ಮೊನ್ನೆ ಮಹಾ ತರಾತುರಿಯಲ್ಲಿ ನಾಲ್ಕು ಮಕ್ಕಳು ಬಾಗಿಲು ಬಡಿದ್ರು. ಎಲ್ರೂ ಇಂಗ್ಲೀಶಲ್ಲಿ ಒಟ್ಟಿಗೆ ಮಾತಾಡ್ತಾ ಇದ್ರು. ಅವರನ್ನ ತಡೆದು ನಿಲ್ಲಿಸಿ ‘ಕನ್ನಡದಲ್ಲಿ ಹೇಳಿ’ ಅಂದೆ. ತಟ್ಟನೆ ಮೌನ. ಅರೆ ಗಳಿಗೆಯ ನಂತರ ಒಂದು ಮಗು ಧೈರ್ಯ ಮಾಡಿ ‘ನಾವು ಪ್ಲೇ ಮಾಡ್ತಾ ಇದೀವಿ. ಅಲ್ಲಿ ಅಭಿ ಕೌಂಟ್ ಮಾಡ್ತಾ ಇದಾನೆ. ಅದಕ್ಕೆ ನಾವೆಲ್ಲ ರನ್ ಮಾಡಿಕೊಂಡು ಬಂದ್ವಿ. ನಿಮ್ಮನೇಲಿ ಹೈಡ್ ಮಾಡಿಕೊಬಹುದಾ?ʼನಾನು ಕೇಳಿದ್ದು ಕನ್ನಡದಲ್ಲಿ ಹೇಳಿ ಅಂತ, ಕಿಚಡಿಯಲ್ಲಿ ಅಲ್ಲ ಎಂದಿದ್ದು ಪಾಪ ಮಕ್ಕಳಿಗೆ ಅರ್ಥ ಆಗಲಿಲ್ಲ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಎರಡನೆಯ ಬರಹ

Read More

ಅವಳ ಹೆಸರು ಗೀತ…: ವಿನಾಯಕ ಅರಳಸುರಳಿ ಅಂಕಣ

ಇದೊಂದು ಚಿಕ್ಕ ಕಾಳಜಿ, ಉಳಿದವರೆಲ್ಲರ ಉಪೇಕ್ಷೆಯ ನಡುವೆ ಆಕೆ ಮೆರೆದ ಸಣ್ಣ ಸಮಯ ಪ್ರಜ್ಞೆ ಎಂದು ಅನಿಸಬಹುದೇನೋ? ಆದರೆ ನೂರಾರು ಕೆಲಸಗಳ ನಡುವೆ ಮುಳುಗಿದಾಕೆ ತನ್ನದಲ್ಲದ ಧಾವಂತಕ್ಕಾಗಿ ಅವನ್ನೆಲ್ಲ ಬದಿಗಿಟ್ಟು ಸ್ವತಃ ಆಕ್ಸಿಜನ್ ಅಳವಡಿಸಿದ ಬೆಡ್ಡನ್ನು ದೂಡಿಕೊಂಡು ಬರುವುದು ಎಷ್ಟು ವಿರಳ ಹಾಗೂ ದೊಡ್ಡ ಮಾನವೀಯತೆಯೆನ್ನುವುದು ತಿಂಗಳಾನುಗಟ್ಟಲೆ ಆಸ್ಪತ್ರೆಯಲ್ಲಿ ಕಳೆದ ಬಳಿಕವಷ್ಟೇ ಅರ್ಥವಾಗುವ ಸೂಕ್ಷ್ಮ ಸತ್ಯ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

Read More

ಕರ್ವಾಲೋ ಮರು ಓದು, ಒಂದು ಧ್ಯಾನ: ದೇವಿಕಾ ನಾಗೇಶ್‌ ಬರಹ

ಇರುವೆಯಿಂದ ರಕ್ಷಿಸಿಕೊಳ್ಳಲು ಆ ಪ್ರಾಣಿ ಇದ್ದಕ್ಕಿದ್ದಂತೆ ಪಕ್ಕದ ದೊಡ್ಡ ಮರಕ್ಕೆ ಹಾರಿ ಮರ ಕೂತು ತನ್ನ ದೇಹಕ್ಕೆ ಅಂಟಿಕೊಂಡಿದ್ದ ಕೆಂಪಿರುವೆಗಳನ್ನು ತಿನ್ನತೊಡಗಿತು. ಇದು ಕಂಡು ಆಶ್ಚರ್ಯ ಚಕಿತರಾದ ಲೇಖಕರು ಹಾರೋ ಓತಿಕ್ಯಾತ ಇದು ಎಂದು ಖಾತ್ರಿಯಾದ ಖುಷಿಯಲ್ಲಿ ತನ್ನ ತಂಡದವರನ್ನು ಕೂಗಿ ಕರೆದರು. ಆದರೆ ಹಾರುವ ಓತಿಕ್ಯಾತ ಇದ್ದಲ್ಲಿ ನಿಲ್ಲುತ್ತದೆಯೇ? ಲೇಖಕರು ಅದನ್ನೇ ತದೇಕ ಚಿತ್ತರಾಗಿ ಕಣ್ಣಲ್ಲೇ ಹಿಂಬಾಲಿಸುತ್ತ ತಾವು ಕಂಡ ಈ ಅದ್ಭುತ ಸರೀಸೃಪವನ್ನು ತನ್ನ ತಂಡದವರಿಗೆ ಪರಿಚಯಿಸುವ ಆತುರದಲ್ಲಿದ್ದರು…
ಪೂರ್ಣಚಂದ್ರ ತೇಜಸ್ವಿಯವರ ಪ್ರಮುಖ ಕಾದಂಬರಿ “ಕರ್ವಾಲೋ”ದ ಮರು ಓದು, ದೇವಿಕಾ ನಾಗೇಶ್ ಬರಹ

Read More

ಅರಳುವ ಭಾವಲೋಕ: ದೀಪಾ ಗೋನಾಳ ಕವನ ಸಂಕಲನಕ್ಕೆ ಓ.ಎಲ್. ನಾಗಭೂಷಣ ಸ್ವಾಮಿ ಮಾತುಗಳು

ಪ್ರೇಮವೇ ಗೆಲುವುದು ಅನ್ನುವ ಶೀರ್ಷಿಕೆಯನ್ನೇ ನೋಡಿ. ಪ್ರೇಮ ಗೆಲ್ಲುವುದು ʻನಾನುʼ ನೋತಾಗ ಅಲ್ಲವೇ!. ಪ್ರೇಮ ಗೆದ್ದಿತು ಅನ್ನುವುದು ಬರಿಯ ಒಬ್ಬರ, ಪುಣ್ಯವಿದ್ದರೆ ಪಾಲ್ಗೊಂಡ ಇಬ್ಬರ ಮೈಮನಸುಗಳಿಗೆ ಮಾತ್ರ ಗೊತ್ತಿರುವ ಸಂಗತಿಯಾಗಬಹುದು, ಭಾಷೆಯನ್ನು ಬಲ್ಲ ಎಲ್ಲರಿಗೂ ಇದನ್ನು ಮನದಟ್ಟು ಮಾಡಿಸುವುದು ಎಷ್ಟು ಕಷ್ಟ. ಪ್ರೀತಿ ಶೃಂಗಾರದ ಬಯಕೆ, ತವಕ, ನೆನಪು, ಅವನ್ನೆಲ್ಲ ನುಡಿಯಾಗಿ ಕಾಣುವ ಹಂಬಲ ಇವೆಲ್ಲವೂ ಓದುಗರಲ್ಲೂ ಇರಬೇಕು. ಅಂದರೆ ಪ್ರೇಮವನ್ನು ಬಯಸುವ ಓದುಗ ಮನಸೂ ಬೇಕು.
ದೀಪಾ ಗೋನಾಳ ಕವನ ಸಂಕಲನ “ನಿನ್ನ ನೆನಪ ಕುಡಿದವಳು” ಕುರಿತು ಓ.ಎಲ್.‌ ನಾಗಭೂಷಣ ಸ್ವಾಮಿ ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ