Advertisement

ಕೆಂಡಸಂಪಿಗೆ

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಯತಿರಾಜ್ ವೀರಾಂಬುಧಿ ಕತೆ

‘ಈ ಮಹಾರಾಯನ ಕೊರೆತದಿಂದ, ನಾನು ಬೇರೆಯವರಿಗೆ ಎಷ್ಟು ಕೊರೆಯುತ್ತಿದ್ದೆ ಎಂಬ ಅರಿವಾಗಿದೆ. ಪಾಪ! ನನ್ನ ಸೊಸೆ ಚಿನ್ನದಂಥಾ ಹುಡುಗಿ. ಎಲ್ಲವನ್ನೂ ಸಹಿಸಿದ್ದಾಳೆ. ಈತನ ಕೊರೆತ ತಪ್ಪಿಸಿಕೊಳ್ಳಲು ಸೊಸೆಯನ್ನೇ ಮೊರೆ ಹೋಗಬೇಕು’ ಎಂದು ಮನದಲ್ಲೇ ನಿರ್ಧರಿಸಿದರು. ಮರುದಿನ ಬೆಳಿಗ್ಗೆ ನಂದಿನಿ ನಿತಿನ್‌ನನ್ನು ಶಾಲೆಗೆ ಒಯ್ಯಲು ಸಿದ್ಧಳಾದಾಗ ರಾಯರು ಅವಳಲ್ಲಿಗೆ ಬಂದರು. ಶಾಸ್ತ್ರಿಗಳು ಎಲ್ಲೂ ಕಾಣಿಸಲಿಲ್ಲ.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಯತಿರಾಜ್ ವೀರಾಂಬುಧಿ ಕತೆ “ಉಭಯ ಸಂಕಟ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಬೇಸಿಗೆ ತರಲಿರುವ ಅಸಹನೆ, ಆಕಾಂಕ್ಷೆ: ಡಾ. ವಿನತೆ ಶರ್ಮಾ ಅಂಕಣ

ಕ್ರಿಸ್ಮಸ್ ಲಂಚ್ ಮುಗಿಸಿಕೊಂಡು ವಾಪಸ್ ಬರುವಾಗ ನಾವು ‘ಕಂಟ್ರಿ ಸೈಡ್’ ದಾರಿ ಹಿಡಿದಿದ್ದೆವು. ನನಗೆ ಅದಾವುದರ ತಲೆಬುಡ ಗೊತ್ತಿರಲಿಲ್ಲ. ಕರೆದುಕೊಂಡು ಹೋದವರು ವಾಪಸ್ ಮನೆ ಸೇರಿಸುತ್ತಾರೆ ಎಂದು ನಿಶ್ಚಿಂತೆಯಿಂದ ಕಿಟಕಿಯಿಂದ ಕಾಣುತ್ತಿದ್ದ ಆಸ್ಟ್ರೇಲಿಯನ್ ಪೊದೆಕಾಡನ್ನು ನೋಡುತ್ತಾ ಕಳೆದುಹೋಗಿದ್ದೆ. ಇದ್ದಕ್ಕಿದ್ದಂತೆ ಕಾರಿನಲ್ಲಿ ತಾಪಮಾನ ಏರಿದಂತಾಯ್ತು. ಮುಖ ತಿರುಗಿಸಿದಾಗ ಆ ಕಡೆ ಕಂಡಿದ್ದು ಉದ್ದಾನುದ್ದಕ್ಕೆ ಹರಡಿಕೊಂಡು ಉರಿಯುತ್ತಿದ್ದ ಬೆಂಕಿಜ್ವಾಲೆ. ನಾನಿದ್ದ ಕಾರಿನಿಂದ ಸ್ಪಷ್ಟವಾಗಿ ಕಾಣುತ್ತಿದ್ದು, ಶಾಖದ ಅನುಭವವೂ ಚೆನ್ನಾಗಾಗುತ್ತಿತ್ತು. ಅಂದರೆ ಅಷ್ಟು ಹತ್ತಿರದಲ್ಲಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

 ಕನ್ನಡ ಕಲಿಕೆಯ ಮೂರು ಪ್ರಸಂಗಗಳು: ಎಲ್.ಜಿ.ಮೀರಾ ಅಂಕಣ

ನಾನು ಈ ಹುಡುಗಿಗೆ “ನಿನ್ನ ಗುರುತಿನ ಚೀಟಿ ಕೊಡಮ್ಮ” ಅಂದೆ. ಅವಳು ಗಾಬರಿಯಿಂದ “ಅದು ಇಲ್ಲ ಮ್ಯಾಮ್” ಅಂದಳು. ಪಾಪ, ಅದು ಅವಳ ಕುತ್ತಿಗೆಯಲ್ಲೇ ತೂಗುತ್ತಿತ್ತು. ಈ ಘಟನೆಯು ಘಟಿಸುತ್ತಿದ್ದಾಗ ನಮ್ಮ ಕೋಣೆಯಲ್ಲೇ ಕುಳಿತಿದ್ದ ಇಂಗ್ಲಿಷ್ ಅಧ್ಯಾಪಕಿಯೊಬ್ಬರು ಮುಗುಳ್ನಗುತ್ತಾ “ಅದು ನಿನ್ನ ಮೈಮೇಲೇ ಇದೆಯಲ್ಲಮ್ಮ” ಅಂದರು. ಆದರೂ ಆ ಹುಡುಗಿಗೆ ಗುರುತಿನ ಚೀಟಿ ಅಂದರೆ ಏನೆಂದು ಗೊತ್ತಾಗಲಿಲ್ಲ. ಏನು ಒತ್ತಡ ಇತ್ತೋ ಏನೋ ಪಾಪ ಅವಳಿಗೆ!
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ತನೆಯ ಬರಹ

Read More

ರಮ್ಯಾ ಶ್ರೀಹರಿ ಬರೆದ ಈ ದಿನದ ಕವಿತೆ

“ಮಾತು ಮಾತಿನ ನಡುವಿನ ಮೌನ
ಕ್ರಿಯೆಯ ನರನಾಡಿಗಳಲ್ಲಿ
ಹರಿಯುವ ನಿಷ್ಕ್ರಿಯೆ
ರಾತ್ರಿಗಳಲ್ಲೇ ಆಳವಾಗಿ ಬೇರು ಬಿಡುವ
ಕಣ್ಣ ನೋಟದ ಬೀಜ
ಅಪ್ಪಳಿಸುವ ಮುಂಚೆ
ಹಿಂದೆ ಸರಿಯುವ ತೆರೆ
ಎಲ್ಲವೂ ನೀರವತೆಯ ಮಿಂಚುಹುಳುಗಳಾಗಿ
ಗಾಜಿನ ಡಬ್ಬಿಯಲ್ಲಿ ಕೂತು
‘ಈ ಸಂಜೆಯೂ ಅಷ್ಟೇ
ಎಲ್ಲ ಸಂಜೆಗಳಂತೆ
ಕಳೆದುಹೋಗುತ್ತದೆ’-ರಮ್ಯಾ ಶ್ರೀಹರಿ ಬರೆದ ಈ ದಿನದ ಕವಿತೆ

Read More

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಹೊಸ ಅಂಕಣ “ಇನ್ನೊಂದು ಬದಿ” ಇಂದಿನಿಂದ

ನಮ್ಮ ಪುರಾಣಗಳನ್ನು ಕೆದಕುತ್ತಾ ಹೋದರೆ ಇಂತಹ ಬಹಳಷ್ಟು ಮಾದರಿಗಳು ಸಿಗಬಹುದು. ಪ್ರತಿಯೊಬ್ಬರ ಪರಿಸ್ಥಿತಿಗಳು ಪ್ರತಿಯೊಬ್ಬರ ಋಣದ ಬೇರುಗಳು ಭಿನ್ನವಾಗಿರಬಹುದು. ಆದರೆ ಧರ್ಮಸಂಕಟದ ಆ ಉತ್ಕಟ ಕ್ಷಣಗಳಲ್ಲಿ ಅವರು ತೆಗೆದುಕೊಂಡ ನಿರ್ಧಾರಗಳು ಖಂಡಿತವಾಗಿಯೂ ನಮ್ಮ ಬದುಕಿನ ಸಮಸ್ಯೆಗಳಿಗೂ ಒಂದು ದಾರಿಯನ್ನು ತೋರಿಸಬಹುದು. ಬದುಕಿನ ಅನಾಮಿಕ ತಿರುವಿನಲ್ಲಿ ಎದುರಾಗುವ ದ್ವಂದ್ವಗಳಲ್ಲಿ ಇಲ್ಲಿದ್ದು ಇಲ್ಲಿಲ್ಲ; ಅಲ್ಲಿದ್ದು ಅಲ್ಲಿಲ್ಲ ಅನ್ನುವಂತಾಗಿ ಇದು ಅಥವಾ ಅದು ಅನ್ನುವ ಆಯ್ಕೆ ಮಾಡಲೇಬೇಕಾದ ಪರಿಸ್ಥಿಗಳಲ್ಲಿ ನಮ್ಮ ಮುಂದೆ ಇವರು ಕೊಟ್ಟು ಹೋದ ಮಾದರಿಗಳಿವೆ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಹೊಸ ಅಂಕಣ “ಇನ್ನೊಂದು ಬದಿ” ಇಂದಿನಿಂದ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ