Advertisement

ಕೆಂಡಸಂಪಿಗೆ

ಸುಕನ್ಯಾ ಕನಾರಳ್ಳಿ ಹೊಸ ಅಂಕಣ “ಕಡೆಗಣ್ಣಿನ ಬಿಡಿನೋಟ” ಇಂದಿನಿಂದ

‘ನಿಮ್ಮ ಮನೆಯಲ್ಲೂ ಪಾತಿ ಮಾಡಿದಾರಾ?’ ಎಂದು ಸುಮ್ಮನೆ ಮಾತಿಗೆ ಒಮ್ಮೆ ಕೇಳಿದ್ದೆ. ‘ನಮ್ಮನೆ ಮುಂದೆ ಲಾಲ್ ಬಾಗೇ ಇದೆಯಲ್ಲ?’ ಎಂದು ಫಟ್ಟನೆ ಹೇಳಿದಾಗ ಬೆಚ್ಚಿಬೀಳುವ ಹಾಗಾಯಿತು. ಅದೊಂದು ಮಹಾವಾಕ್ಯದಂತೆ ಕೇಳಿಸಿತ್ತು. ಲಾಲ್ ಬಾಗಿನ ಎದುರು ಇರುವ ಸ್ಲಮ್ಮಿನಲ್ಲಿ ಅವರದ್ದು ಜೋಪಡಿ ವಾಸ. ಹೈದರ್ ಅಲಿ ಟಿಪ್ಪು ಸುಲ್ತಾನರು ದೇಶ ವಿದೇಶಗಳಿಂದ ತರಿಸಿ ಬೆಳೆಸಿರುವ ಅಪರೂಪದ ವೃಕ್ಷಗಳ ನಡುವೆಯೇ ಬೆಳೆಯುತ್ತಿರುವ ಮಗು ಅವಳು.
ಖ್ಯಾತ ಲೇಖಕಿ, ಅನುವಾದಕಿ ಸುಕನ್ಯಾ ಕನಾರಳ್ಳಿ ಹೊಸ ಅಂಕಣ “ಕಡೆಗಣ್ಣಿನ ಬಿಡಿನೋಟ” ಇಂದಿನಿಂದ ಪ್ರತಿ ಬುಧವಾರಗಳಂದು ನಿಮ್ಮ ಓದಿಗೆ…

Read More

ನಾಯಿಕುರ್ಕನ ನೆರಳಿನಲ್ಲಿ: ವಿಜಯಶ್ರೀ ಹಾಲಾಡಿ ಕೃತಿಯ ಒಂದು ಪ್ರಬಂಧ

ಎಲ್ಲರೂ ಒಟ್ಟಾಗಿ ಅನ್ನ, ತಿಂಡಿ ತಿನ್ನುವಾಗ ಕರಿಯನ ಗಲಾಟೆಯೇ ಗಲಾಟೆ. ಯಾರಿಗೂ ತಿನ್ನಲು ಬಿಡದೆ ತಾನೇ ಎಲ್ಲವನ್ನೂ ಮುಕ್ಕಬೇಕೆನ್ನುವುದು ಅವಳ ಆಸೆ. ಎಂಥಾ ಬೊಬ್ಬೆ! ನನಗೆ ಏನು ಮಾಡಬೇಕೆಂಬುದೇ ತಿಳಿಯುತ್ತಿರಲಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಕಡೆ ಊಟ ಹಾಕುವ ವ್ಯವಸ್ಥೆ ಮಾಡಿಕೊಂಡೆ. ಆದರೆ ಎಲ್ಲ ಕಡೆಯೂ ಹೋಗಿ ತಾನೇ ಬಾಯಿಹಾಕಿ ಯಾರಿಗೂ ಸರಿಯಾಗಿ ತಿನ್ನಲು ಬಿಡದೆ, ಕರಿಯ ಅವಸ್ಥೆ ಕೊಡುತ್ತಿದ್ದಳು. ಕೊನೆಕೊನೆಗೆ ಕೋಲು ಹಿಡಿದು ಊಟ ಹಾಕುವ ಪರಿಸ್ಥಿತಿ ಬಂದಿತು. ಈ ನಡುವೆ ಪಾಪದ್ದು ದಾಸುಮರಿ ತುಂಬಾ ಕಷ್ಟ ಅನುಭವಿಸಿತು. ಅದಕ್ಕೆ ಬೇಗ ಬೇಗ ತಿನ್ನಲು ಆಗುತ್ತಿರಲಿಲ್ಲ. ಎಲ್ಲವನ್ನೂ ಕರಿಯನೇ ತಿಂದುಹಾಕುತ್ತಿತ್ತು. ಇಷ್ಟೇ ಆಗಿದ್ದರೆ ಹೋಗಲಿ ಅನ್ನಬಹುದಿತ್ತು.
ವಿಜಯಶ್ರೀ ಹಾಲಾಡಿ ಪ್ರಬಂಧಗಳ ಸಂಕಲನ “ಕಾಡಿನ ಸಂಗೀತ” ಕೃತಿಯ ಒಂದು ಪ್ರಬಂಧ ನಿಮ್ಮ ಓದಿಗೆ

Read More

ಹುಳಿ ಹಿಂಡುವವರ ಮಧ್ಯೆ ನಾವು ಹೇಗಿರಬೇಕು??: ಬಸವನಗೌಡ ಹೆಬ್ಬಳಗೆರೆ ಸರಣಿ

ನ್ಯಾಯಾಧೀಶರು ತಮ್ಮ ಮಾತನ್ನು ಮುಂದುವರೆಸಿ “ನೀನು ಹೇಗೆ ಕಿತ್ತ ಚೂರುಗಳನ್ನು ವಾಪಸ್ ತರಲು ಸಾಧ್ಯವಿಲ್ಲವೋ ಅದೇ ರೀತಿ ನೀನು ಮತ್ತೊಬ್ಬನ ಬಗ್ಗೆ ಹರಡಿದ ಸುಳ್ಳು ಸುದ್ದಿಯು ಹಲವರ ಕಿವಿ ತಲುಪಿ ಅವರು ಅದನ್ನೇ ಸತ್ಯವೆಂದು ನಂಬಿದ್ದಾರೆ. ಈ ರೀತಿ ನಂಬಿದವರೆಲ್ಲರಿಗೂ ಇದು ಸುಳ್ಳು ಎಂದು ಹೇಳಲು ಸಾಧ್ಯವಿಲ್ಲ ತಾನೇ?!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ತೆಂಟನೆಯ ಕಂತು ನಿಮ್ಮ ಓದಿಗೆ

Read More

ಬಲ್ಗೇರಿಯಾ ದೇಶದ ಕವಿ ಗ್ಯೋರ್ಗಿ ಗೊಸ್ಪೊಡಿನೊವ್ ಕಾವ್ಯ ಪರಿಚಯ: ಎಸ್. ಜಯಶ್ರೀನಿವಾಸ ರಾವ್ ಸರಣಿ

“ಗ್ಯೋರ್ಗಿ ಗೊಸ್ಪೊಡಿನೊವ್ ಅನೇಕ ವಿಧಗಳಲ್ಲಿ ಒಬ್ಬ ವಿಶಿಷ್ಟ ಬರಹಗಾರ. ನಾನು ಅವರ ಬರಹಗಳನ್ನು ಮೊದಲಿನಿಂದಲೂ ಓದುತ್ತಿದ್ದೇನೆ ಹಾಗೂ ಕುತೂಹಲಕಾರಿ ಪರಿಕಲ್ಪನೆ, ಅದ್ಭುತ ಕಲ್ಪನೆ ಮತ್ತು ನಿಖರವಾದ ಬರವಣಿಗೆಯ ತಂತ್ರವನ್ನು ಅವರ ಹಾಗೆ ಬೇರೆ ಯಾರಿಂದಲೂ ಸಂಯೋಜಿಸಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಬಲ್ಗೇರಿಯಾ ದೇಶದ ಕವಿ ಗ್ಯೋರ್ಗಿ ಗೊಸ್ಪೊಡಿನೊವ್-ರವರ(Georgi Gospodinov) ಕಾವ್ಯದ ಕುರಿತ ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ