Advertisement

ಕೆಂಡಸಂಪಿಗೆ

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

ಅದರೊಳಗೇನಿದೆ ಎನ್ನುವುದು ಒಳಹೋದವರಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ. ಒಳಗೆ ಹೋದವರು ಎಬ್ಬಿಸುತ್ತಿದ್ದ ನಗು ಹೊರಗೆ ಕೂತ ಹೊಸಬರಲ್ಲಿ ಮೂಡಿಸುತ್ತಿದ್ದದ್ದು ವಿಸ್ಮಯವನ್ನು, ಕುತೂಹಲವನ್ನು. ನಟರಾಜ ಕೊಟ್ಟಿದ್ದ ಐಡಿಯಾ ಫಲ ಕೊಡುವುದಕ್ಕೆ ಹೆಚ್ಚು ಸಮಯವೇನೂ ಬೇಕಾಗಲಿಲ್ಲ. ಮಹಾನಗರದ ಮರಿಮೊಮ್ಮಗನಂತಿತ್ತು ಭರತಪುರ. ಅಂಥ ಪುಟ್ಟ ಪಟ್ಟಣದ ಜನರನ್ನಷ್ಟೇ ನಗಿಸಿ, ಇದ್ದ ಸಾಲವನ್ನು ಏಳೆಂಟು ತಿಂಗಳುಗಳಲ್ಲಿಯೇ ತೀರಿಸಿ, ಸ್ಮೈಲು ಬೀರಿದ್ದ ಇಸ್ಮಾಯಿಲ.
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಇಸ್ಮಾಯಿಲನ ಸ್ಮೈಲಿಂಗು ಮಹಲು”

Read More

ಕನ್ನಡದ ಹೆಣ್ಮನಗಳ ಕನ್ನಡಾಭಿಮಾನ: ರೂಪಶ್ರೀ ಕಲ್ಲಿಗನೂರ್ ಬರಹ

ಕನ್ನಡ ನಾಡಿನ ಮಕ್ಕಳು ಇಡೀ ಜಗತ್ತಿನ ತುಂಬಾ ಓಡಾಡಿದರೂ, ಮನೆಗೆ ಬಂದು ಅಮ್ಮನೊಟ್ಟಿಗೆ ಕನ್ನಡ ಮಾತನಾಡಿದಾಗಲೇ ಅವರಿಗೂ ಸಮಾಧಾನ. ಯಾಕೆಂದರೆ ಅವರೆಲ್ಲ ಮೊದಲು ಕಲಿತ ಪದವೇ “ಅಮ್ಮ” ಅಲ್ಲವೇ! ಜಗತ್ತಿನ, ಬೆಳವಣಿಗೆಯೆಂಬ ಸಂಕೀರ್ಣತೆಯ ಸಂದಿಗ್ಧತೆಯಲ್ಲಿ ಕನ್ನಡ ಭಾಷೆ ಚೂರು ನಲುಗುತ್ತಿದೆ ಎನ್ನಿಸುತ್ತಿದೆಯಾದರೂ ದೊಡ್ಡಮಟ್ಟದಲ್ಲಿಯಲ್ಲವಾದರೂ, ತಮಗೆ ಸಿಕ್ಕ ಅವಕಾಶಗಳಲ್ಲಿ ಕನ್ನಡದ ಬೆಳವಣಿಗೆಗೆ, ಉಳಿವಿಗೆ ಶ್ರಮಿಸುವ ಹಲವು ಶ್ರೀಸಾಮಾನ್ಯರಿದ್ದಾರೆ. ಕರ್ನಾಟಕದಲ್ಲಿ ಅಲ್ಲದೇ ಬೇರೆಡೆಗಳಲ್ಲಿ ನೆಲೆಸಿರುವ, ಕನ್ನಡದ ಅಸ್ಮಿತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಹಲವು ಕನ್ನಡದ ಹೆಣ್ಮಗಳ ಮಾತುಗಳು…

Read More

ಅರ್ಧ ಕತೆಯೇ ಪ್ರಕಟಗೊಂಡಿತ್ತು: ಎಚ್. ಗೋಪಾಲಕೃಷ್ಣ ಸರಣಿ

ಆ ಗುಂಪಿನ ತಮಿಳರನ್ನು ನೋಡಿ ಕೆಲವು ಸಲ ಹೊಟ್ಟೆ ಉರಿಯೋದು. ಆ ಭಾಷೆಯಲ್ಲಿ ಬರುವ ಎಲ್ಲಾ ಪತ್ರಿಕೆಗಳನ್ನು ತರಿಸೋರು ಮತ್ತು ಹತ್ತು ಹದಿನೈದು ಜನ ಗ್ರೂಪ್ ಮಾಡಿಕೊಂಡು ಅದರ ಖರ್ಚು ಶೇರ್ ಮಾಡುತ್ತಿದ್ದರು. ಇನ್ನೂ ವಿಶೇಷ ಅಂದರೆ ಡಿ ಎಂ ಕೆ ಅವರು ತರಿಸುತ್ತಿದ್ದ ಪತ್ರಿಕೆ ಡಿ ಎಂ ಕೆ ವಿರೋಧಿಗಳು ತರಿಸುತ್ತಾ ಇರಲಿಲ್ಲ. ಅವರು ಇವರು ಪರಸ್ಪರ ಮಾತು ಕತೆ ಸಹ ಇಲ್ಲ! ಕೆಲವು ಸಲ ಇದೇ ವಿಷಯವಾಗಿ ತಮಿಳಿನಲ್ಲಿ ಜೋರು ಜೋರು ಮಾತುಕತೆ ಜಗಳ ಆಗುತ್ತಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೧ನೇ ಬರಹ ನಿಮ್ಮ ಓದಿಗೆ

Read More

ಮಧು ವೈ.ಎನ್.‌ ಹೊಸ ಕಾದಂಬರಿ “ಇಂತಿ, ಪೂರ್ವಿ”ಯ ಕೆಲವು ಪುಟಗಳು

ಆ ಪದ ಕಿವಿಗೆ ಬೀಳುತ್ತಿದ್ದಂತೆ ಸೈಫೈ ಸಿನಿಮಾಗಳಲ್ಲಿ ರೋಬೋಗಳು ಬ್ಯಾಟರಿ ಡೌನಾಗಿ ತಾನಾಗೆ ಕುಸಿದಂತೆ ಶರತ್ ಕುಸಿದ. ಅವಳು ಹಂಗೇ, ಹಿಂದೆ ಮುಂದೆ ನೋಡದೇ ಅಂದುಬಿಡ್ತಿದ್ದಳು. ಜ್ಯಾಮಿಟ್ರಿ ಬಾಕ್ಸ್‌ ಮುಚ್ಚಳವನ್ನು ಹಲ್ಲುಗಳನ್ನೆಟ್ಟಿ ತೆಗೆಯುತ್ತಿದ್ದಳು. ಅಸೆಂಬ್ಲಿನಲ್ಲಿ ಆಕಳಿಸುವಾಗ ತುಟಿ ಹರಿಯುವಷ್ಟು ಅಗಲ ಬಾಯಿ ತೆರೆಯುತ್ತಿದ್ದಳು. ಕಿರುನಾಲಗೆಯಿಂದ ಎಂಜಲನ್ನು ಮೋಟಾರಿನಂತೆ ಹಾರಿಸುತ್ತಿದ್ದಳು. ಇಡೀ ಕ್ಲಾಸಿಗೆ ರಾಣಿ, ರೌಡಿ ಎರಡೂ ಆಗಿದ್ದಳು. ಶರತ್‌ಗೆ ಆಳದಲ್ಲಿ ಅವಳೆಂದರೆ ಭಯ. ತಾನು ಸುಮ್ಮನಿದ್ದರೂ ಆಗಿತ್ತು; ಇಂಥಾ ಬಜಾರ್‌ಗಿತ್ತಿಯನ್ನು ಕೆಣಕಿ ʼಕಳ್ಳʼ ಅನ್ನಿಸ್ಕೊಳಂಗಾಯ್ತಲ್ಲ ಎಂದು ಕೈಹಿಸುಕಿಕೊಂಡ.
ಮಧು ವೈ.ಎನ್.‌ ಹೊಸ ಕಾದಂಬರಿ “ಇಂತಿ, ಪೂರ್ವಿ”ಯ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಚಿತ್ರಾ ವೆಂಕಟರಾಜು ಅನುವಾದಿಸಿದ ಅಮೃತಾ ಪ್ರೀತಂ ಎರಡು ಕವಿತೆಗಳು

“ಬೆಳ್ಳಂಬೆಳಗ್ಗೆ ನಾವು
ಕಾಗದದ ಚೂರುಗಳಂತೆ
ಸಂಧಿಸಿದೆವು
ನನ್ನ ಕೈಗಳಿಂದ ಅವನ ಕೈಗಳನ್ನು
ಹಿಡಿದೆ
ಅವನು ತನ್ನ ತೋಳುಗಳಿಂದ
ನನ್ನ ಭುಜಗಳನ್ನು ಬಳಸಿದ” -ಚಿತ್ರಾ ವೆಂಕಟರಾಜು ಅನುವಾದಿಸಿದ ಅಮೃತಾ ಪ್ರೀತಂ ಎರಡು ಕವಿತೆಗಳು

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ