ಶತಾಯುಷಿ ಸಾಧಕಿಗೆ ಶತಕೋಟಿ ಪ್ರಣಾಮ!: ಕ್ಷಮಾ ವಿ. ಭಾನುಪ್ರಕಾಶ್ ಬರಹ
ಅನೇಕ ಸಂದರ್ಶನಗಳಲ್ಲಿ ಅವರೇ ಹೇಳಿದಂತೆ, ತಿಮ್ಮಕ್ಕ, ಗಿಡ-ಮರಗಳಲ್ಲಿ ಮಕ್ಕಳನ್ನು ಕಂಡು ಸಂತಸಪಟ್ಟವರು. ಪಾತಿ ಮಾಡಿ ಗಿಡ ನೆಡುವುದು, ಅವುಗಳೊಂದಿಗೆ ಮಾತಾಡುತ್ತಾ ನೀರುಣಿಸಿ, ತಲೆಸವರಿ ಅವುಗಳನ್ನು ಹೆಮ್ಮರವಾಗಿಸುವುದು – ತಿಮ್ಮಕ್ಕನವರ ಹವ್ಯಾಸವಲ್ಲ, ಅದು ಅವರ ಬದುಕಿನ ಸಾರ. ಹುಲಿಕಲ್ ಮತ್ತು ಕುಡೂರಿನ ನಡುವಿನ ಹೆದ್ದಾರಿಯ ಅಕ್ಕಪಕ್ಕ ೩೮೫ ಆಲದ ಮರಗಳನ್ನು ಹೀಗೆ ಬೆಳೆಸಿದ ಶ್ರೇಯವೇ, ತಿಮ್ಮಕ್ಕನನ್ನು ‘ಸಾಲುಮರದ ತಿಮ್ಮಕ್ಕ’ನನ್ನಾಗಿಸಿತು, ಗೌರವಾದರಗಳನ್ನು ಮನೆಬಾಗಿಲಿಗೆ ಬರಮಾಡಿಸಿತು!
ನೆನ್ನೆ ತೀರಿಕೊಂಡ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ಕುರಿತು ಕ್ಷಮಾ ವಿ. ಭಾನುಪ್ರಕಾಶ್ ಬರಹ
