Advertisement

ಕೆಂಡಸಂಪಿಗೆ

ಗೋಬಿ ಮರುಭೂಮಿ ಡೈನೋಸಾರ್ ತೊಟ್ಟಿಲು: ಡಾ. ವೆಂಕಟಸ್ವಾಮಿ ಪ್ರವಾಸ ಕಥನ

ದಿಢೀರನೆ ನನ್ನಲ್ಲಿ ಆರನೇ ಪ್ರಜ್ಞೆ ಎಚ್ಚೆತ್ತುಕೊಂಡಿತು, ಬಾಗಿಲು ಮುಚ್ಚಲು ಒಂದೆಜ್ಜೆ ಹಿಂದಕ್ಕೆ ಸರಿದಿದ್ದೆ ಆಕೆ ಒಳಗೆ ಬರಲು ಒಂದೆಜ್ಜೆ ಮುಂದಕ್ಕಿಟ್ಟಳು. ನಾನು ಎಡಗೈಯನ್ನು ಅಡ್ಡವಿಟ್ಟಿದ್ದೆ ಆಕೆ ನ್ನ ಕೈಕೆಳಗೆ ನುಗ್ಗಲು ಬಗ್ಗಿದಳು. ಬಾಗಿಲು ಮುಚ್ಚಿಬಿಟ್ಟೆ. ಅಬ್ಬಾ! ತಪ್ಪಿಸಿಕೊಂಡೆ ಎಂದುಕೊಂಡೆ.
ಚೀನಾ ದೇಶದ ಓಡಾಟದ ಕುರಿತು ಡಾ. ವೆಂಕಟಸ್ವಾಮಿ ಬರಹದ ಮುಂದುವರಿದ ಭಾಗ

Read More

ದಾರಿ ತಪ್ಪಿದ ಪ್ರೀತಿ ಬದುಕು ಕಟ್ಟಿಕೊಳ್ಳುವುದನ್ನು ತಪ್ಪಿಸುವುದೇ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಕಾಲಿನ ಹೆಬ್ಬೆರಳಲ್ಲಿ ರಕ್ತ ಒಸರುತ್ತಿದೆ. ಕನಕ, “ಅಯ್ಯೋ ಏನ್ರಿ ಇದು?” ಎಂದಳು. ಸೆಲ್ವಮ್, “ಏನೂ ಇಲ್ಲ. ಅಲ್ಲೊಂದು ಕಲ್ಲು ಹೊಡೆದುಬಿಟ್ಟಿತು. ಒಂದಷ್ಟು ಅರಿಶಿನ, ಒದ್ದೆಬಟ್ಟೆ ತೆಕೊಂಡು ಬಾ” ಎಂದ. ಕನಕ ಮನೆ ಒಳಕ್ಕೆ ಹೋಗಿ ಚೆಂಬಿನಲ್ಲಿ ನೀರು ತಂದು “ಸುಮತಿ ನೀರಾಕು ನಿಮ್ಮಪ್ಪ ಬೆರಳುಗಳನ್ನು ತೊಳೆದುಕೊಳ್ಳಲಿ. ನಾನು ಅರಿಶಿನ ಬಟ್ಟೆ ತರ್ತೀನಿ” ಎಂದು ಮತ್ತೆ ಮನೆ ಒಳಕ್ಕೆ ಹೋದಳು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಐದನೆಯ ಕಂತು ನಿಮ್ಮ ಓದಿಗೆ

Read More

ಪೀಪಲ್ಸ್ ರಿಪಬ್ಲಿಕ್ ಚೀನಾದಲ್ಲಿ….: ಡಾ. ವೆಂಕಟಸ್ವಾಮಿ ಪ್ರವಾಸ ಕಥನ

ಸುತ್ತಲೂ ಆಕಾಶದ ಒಳಗೆ ಮೋಡಗಳ ಜೊತೆಗೆ ಸಾಗರದ ಅಲೆಗಳಂತೆ ಕಣ್ಣು ಹಾಯುವವರೆಗೂ ಬೆರೆತುಹೋಗಿರುವ ಅನಂತ ಗಿರಿ ಶಿಖರ ಶ್ರೇಣಿಗಳು. ತಣ್ಣನೆ ರಾತ್ರಿಯಲ್ಲಿ ಚಳಿಯ ರಗ್ಗನ್ನೊದ್ದು ಕಣ್ಣುಜ್ಜಿಕೊಂಡು ಪೂರ್ವದಲ್ಲಿ ಬೆಟ್ಟಗಳ ಕಡೆಗೆ ಸೂರ್ಯನು ನೋಡುತ್ತಿದ್ದನು. ನಡುವೆ ಬಿಳಿ ಮುಗಿಲು ಮತ್ತು ಮಂಜಿನ ತೆರೆಗಳ ಸರಸ. ಎಲ್ಲವನ್ನು ಸೀಳಿಕೊಂಡು ಆಕಾಶವನ್ನೇ ಮೆಟ್ಟಿಲು ಮಾಡಿಕೊಂಡು ಗಿರಿ ಶಿಖರಗಳ ಮೇಲೆ ಎದ್ದು ಬಿದ್ದು ಚಾಚಿ ಮಲಗಿರುವ ಡ್ರ್ಯಾಗನ್ ಮಹಾಗೋಡೆಗಳು.
ಚೀನಾ ಪ್ರವಾಸದ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ

Read More

ಕೆನ್ನೆಮೇಲೆ…. ಕೆಂಪು ಬಾಸುಂಡೆ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಸ್ವಲ್ಪ ಹೊತ್ತಾದ ಮೇಲೆ ಏನೋ ಜ್ಞಾಪಕ ಬಂದಂತೆ ಎದೆಯ ಮೇಲಿನ ಶರ್ಟ್ ನೋಡಿಕೊಂಡ. ಶರ್ಟ್ ಮೇಲೆ ಎರಡು ತೊಟ್ಟ ರಕ್ತ ಬಿದ್ದಿರುವುದು ಕಾಣಿಸಿತು. ಈಗ ಏನು ಮಾಡುವುದು? ಮನೆಗೋದರೆ ಅಮ್ಮ ಇಲ್ಲ ಸುಮತಿ ನೋಡೇನೋಡುತ್ತಾರೆ. ಮೂಗು ಊದಿಕೊಂಡಿದೆಯೇನೊ ಎನ್ನುವ ಅನುಮಾನ ಬಂದು, ಗುಡಿಯ ಒಳಗಡೆ ಹೋಗಿ ಕನ್ನಡಿಯಲ್ಲಿ ನೋಡಿದರೆ ಹೇಗೆ ಎನ್ನುವ ಆಲೋಚನೆ ಬಂದರೂ ಗುಡಿಯಲ್ಲಿ ಸಾಕಷ್ಟು ಜನರಿದ್ದು ಹೋಗುವುದು ಸರಿಇಲ್ಲ ಎಂದು ಅಲ್ಲೇ ಕುಳಿತುಕೊಂಡ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿ

Read More

ದುಬೈನ ಬುರ್ಜ್ ಖಲೀಫಾ ಎಂಬ ಸ್ಕೈಸ್ಕ್ರಾಪರ್: ಡಾ. ಎಂ. ವೆಂಕಟಸ್ವಾಮಿ ಬರಹ

ವಾಸ್ತುಶಿಲ್ಪ ಮತ್ತು ಎಂಜಿನಿಯರಿಂಗ್ ಪ್ರಕ್ರಿಯೆಯ ಒಂದು ನಿರ್ದಿಷ್ಟ ಹಂತದಲ್ಲಿ, ಮೂಲ ಎಮಾರ್ ಡೆವಲಪರ್‌ಗಳಿಗೆ ಹಣಕಾಸಿನ ಸಮಸ್ಯೆ ಎದುರಾಗಿ ಹೆಚ್ಚಿನ ಹಣದ ಅಗತ್ಯಬಿದ್ದಾಗ ಆಗಿನ ಯುಎಇ’ಯ ಆಡಳಿತಗಾರ ಶೇಖ್ ಖಲೀಫಾ ಅವರು ಹಣದ ನೆರವು ನೀಡಿದರು. ಆದ್ದರಿಂದ ಕಟ್ಟಡದ ಮೊದಲ `ಬುರ್ಜ್ ದುಬೈ’ ಹೆಸರನ್ನು `ಬುರ್ಜ್ ಖಲೀಫಾ’ ಎಂದು ಬದಲಾಯಿಸಲಾಯಿತು.
ದುಬೈ ಪ್ರವಾಸದ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ