Advertisement

ಕೆಂಡಸಂಪಿಗೆ

ಕಪ್ಪು ನೆಲದಲ್ಲಿ ಹುಟ್ಟಿಕೊಂಡಿತು ಚಿನ್ನದ ನಗರ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಎಲ್ಲರೂ ಅವರನ್ನೇ ನೋಡುತ್ತಿದ್ದರು. ಸೆಲ್ವಿಗೆ ಬೇರೆ ದಾರಿ ಕಾಣದೇ ಇನ್ನೊಂದು ಕೈಯಲ್ಲಿದ್ದ ಪುಸ್ತಕಗಳನ್ನು ನೆಲಕ್ಕೆ ಹಾಕಿ ಮಣಿ ಕೆನ್ನೆಗೆ ಜೋರಾಗಿ ಬಾರಿಸಿದಳು. ಬಾರಿಸಿದ ಏಟಿಗೆ ಆ ಮರದಲ್ಲಿದ್ದ ಹಕ್ಕಿಗಳೆಲ್ಲ ಹಾರಿಹೋದವು. ಸುತ್ತಲೂ ನಿಂತು ನೋಡುತ್ತಿದ್ದ ಹುಡುಗರಲ್ಲಿ ಕೆಲವರು ತಮ್ಮ ಕೆನ್ನೆಗಳನ್ನು ಮುಟ್ಟಿನೋಡಿಕೊಂಡು ಕಣ್ಣುಕಣ್ಣುಬಿಟ್ಟರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಮೂರನೆಯ ಕಂತು ನಿಮ್ಮ ಓದಿಗೆ

Read More

ಆರ್ಥಿಕ ಬಿಕ್ಕಟ್ಟಿನ ಆಂತರಿಕ ಗಲಭೆಯಲ್ಲಿ ಶ್ರೀಲಂಕಾ ಪ್ರವಾಸ: ಡಾ. ವೆಂಕಟಸ್ವಾಮಿ ಪ್ರವಾಸ ಕಥನ

ಶ್ರೀಲಂಕಾದಲ್ಲಿರುವ ಪರಿಸ್ಥಿತಿಯಿಂದ ಗೈಡ್ ಬರಲಿಲ್ಲವೇ? ಅಥವಾ ತಪ್ಪಿಸಿಕೊಂಡನೆ? ಸ್ವಲ್ಪ ಗಾಬರಿಯಾಯಿತು. ಮತ್ತೆ ನಾವಿಬ್ಬರು ಸುಶೀಲ ಮತ್ತು ಶಾಂತಮ್ಮ ಹತ್ತಿರಕ್ಕೆ ಹೋದೆವು. ಅಷ್ಟರಲ್ಲಿ ನಮ್ಮ 12 ಜನರ ಗುಂಪಿನ ಒಂದಷ್ಟು ಜನರು ನಮ್ಮಂತೆ ಗೈಡ್‌ಗಾಗಿ ಹುಡುಕಾಡುತ್ತಿದ್ದರು. ಕೊನೆಗೂ ಒಬ್ಬಾತ ತಮಿಳಿನಲ್ಲಿ ಮಾತನಾಡುತ್ತ ಚಾರಿಯಟ್ ವರ್ಲ್ಡ್‌ ಟೂರ್ ಎಂದು ಹತ್ತಿರಕ್ಕೆ ಬಂದ. ನಾನು, `ಏಯ್ ಎಲ್ಲಿ ಹೋಗಿದ್ದೆಯೊ ಮಹರಾಯ ಇಷ್ಟೊತ್ತು? ನಾವೆಲ್ಲ ಹುಡುಕಿ ಹುಡುಕಿ ಸಾಕಾಯಿತು’ ಎಂದೆ. ಆತ ಇಂಗ್ಲಿಷ್ ಮತ್ತು ತಮಿಳು ಮಾತನಾಡತೊಡಗಿದ.
ಶ್ರೀಲಂಕಾ ಪ್ರವಾಸದ ಕುರಿತು ಡಾ. ವೆಂಕಟಸ್ವಾಮಿ ಬರಹ

Read More

ಮಣಿ…: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ನೂರು ವರ್ಷಗಳಿಂದ ಗಣಿ ಸುರಂಗಗಳಿಂದ ತೆಗೆದ ಕಲ್ಲುಗಳ ಅದಿರನ್ನು ಪುಡಿಮಾಡಿ ಚಿನ್ನ ತೆಗೆದುಕೊಂಡು ಬಿಸಾಕಿರುವ ಗಣಿ ತ್ಯಾಜ್ಯದ ಗುಡ್ಡ ಅದು. ನೆಲದ ಮೇಲೆ ಇಷ್ಟು ದೊಡ್ಡ ಗುಡ್ಡ ಬಿದ್ದಿದೆ ಎಂದರೆ ಎಷ್ಟು ಜನರು ಗಣಿ ಸುರಂಗಗಳಲ್ಲಿ ಕೆಲಸ ಮಾಡಿರಬೇಕು? ಎಷ್ಟು ಬೆವರು ಸುರಿದಿರಬೇಕು? ಎಷ್ಟು ಜನರು ಸತ್ತಿರಬೇಕು? ಈ ಗುಡ್ಡಗಳು ಬೀಳಲು ನಮ್ಮ ಪೂರ್ವಜರೆ ಕಾರಣ ಎಂದುಕೊಂಡ. ಮಣಿ ತಂದೆ ಸೆಲ್ವಮ್. ಸೆಲ್ವಮ್ ತಂದೆ ಕುಪ್ಪ ಹೇಳುತ್ತಿದ್ದ ಅನೇಕ ಗಣಿ ದುರಂತಗಳ ಕರಾಳ ಕಥೆಗಳು ಮಣಿ ತಲೆಯಲ್ಲಿ ಹಾವುಗಳಂತೆ ಹರಿದಾಡತೊಡಗಿದವು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಎರಡನೆಯ ಕಂತು ನಿಮ್ಮ ಓದಿಗೆ

Read More

ಭೂಲೋಕದ ಅದ್ಭುತ ಪುಟ್ಟ ದ್ವೀಪ ಸಿಂಗಾಪುರ: ಡಾ. ವೆಂಕಟಸ್ವಾಮಿ ಪ್ರವಾಸ ಕಥನ

ನಮ್ಮ ಜೊತೆಗೆ ಬಂದಿದ್ದ ಮಹಿಳೆಯೊಬ್ಬರು ಹೋಟಲ್‌ನಲ್ಲಿ ಊಟ ಮಾಡುತ್ತಿದ್ದಾಗ ನಮ್ಮ ದೇಶದವರೇ ಆದ ಹೋಟಲ್ ಮಾಲಿಕನಿಗೆ `ಸಿಂಗಾಪುರದಲ್ಲಿ ಕ್ರೈಮ್ ರೇಟ್ ಏನಿದೆ?’ ಎಂದು ಕೇಳಿಬಿಟ್ಟರು. ಆತ, `ಮೇಡಮ್ ಸಿಂಗಾಪುರದಲ್ಲಿ ಕ್ರೈಮ್ ರೇಟ್ ಝೀರೋ. ಅದೆಲ್ಲ ಭಾರತದಲ್ಲಿ’ ಎಂದು ಕೋಪ ಮಾಡಿಕೊಂಡು ಹೇಳಿದರು.
ಡಾ. ವೆಂಕಟಸ್ವಾಮಿ ಪ್ರವಾಸ ಕಥನದಲ್ಲಿ ಸಿಂಗಪೂರ್‌ ಕುರಿತ ಬರಹ ಇಲ್ಲಿದೆ

Read More

ಡಾ. ಎಂ. ವೆಂಕಟಸ್ವಾಮಿ ಕಾದಂಬರಿ “ಒಂದು ಎಳೆ ಬಂಗಾರದ ಕಥೆ” ಶುರು…

ಕೆ.ಜಿ.ಎಫ್‌ ಎಂಬ ನೆಲದಲ್ಲಿ, ಚಿನ್ನದ ಅದಿರಿನ ಶೋಧನೆಯ ಸಮಯದಲ್ಲಿ ಅಲ್ಲಿನ ಜನರು ಹಾಗೂ ಕಾರ್ಮಿಕರು ಅನುಭವಿಸಿದ ತಲ್ಲಣಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” (ಕೆಜಿಎಫ್ ಗಣಿಗಳ ತವಕ ತಲ್ಲಣಗಳು) ಕಾದಂಬರಿ ಪ್ರತಿ ಶನಿವಾರಗಳಂದು‌ ನಿಮ್ಮ ಕೆಂಡಸಂಪಿಗೆಯಲ್ಲಿ ಪ್ರಕಟವಾಗಲಿದೆ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ