ಶ್ರಾವಣ ಸಂಜೆಯ ಮಳೆಯಂಥ ಪ್ರೀತಿ: “ದಡ ಸೇರದ ದೋಣಿ” ಸರಣಿಯಲ್ಲಿ ಮಾರುತಿ ಗೋಪಿಕುಂಟೆ ಬರಹ
ಪರೀಕ್ಷೆಯ ವಿಚಾರ ಮಾತಾಡುವಷ್ಟರಲ್ಲಿ ಅವರ ಸಂಬಂಧಿ ಪ್ರತ್ಯಕ್ಷವಾಗಿದ್ದ. ಗೇಟಿನಲ್ಲೆ ನಮ್ಮಿಬ್ಬರನ್ನು ನೋಡಿರಬೇಕು. ಈಗಾಗಲೆ ಪರಿಚಯವಿದ್ದುದರಿಂದ ನನ್ನನ್ನು ಮಾತಾಡಿಸಿದ. ಮಾತಾಡಿಸಿ ‘ನೀವೇಕೆ ಬಂದಿದ್ದೀರಿ’ ಅಂದ. ನಾನು ಅದೆ ‘ಕ್ಯಾಸ್ಟ್ ಇನ್ಕಮ್’ ನೆಪ ಹೇಳಿದೆ ನನ್ನ ಸ್ನೇಹಿತರು ಬಂದಿದ್ದಾರೆ ಅವರನ್ನು ಮಾತಾಡಿಸುವ ಸಲುವಾಗಿ ಬಂದಿದ್ದೆ’ ಅಂದೆ ಅನುಮಾನ ಪಡುವ ಯಾವ ಘಟನೆಯೂ ನಮ್ಮಿಬ್ಬರ ವಿಷಯದಲ್ಲಿ ನಡೆದಿರಲಿಲ್ಲ. ನನಗೆ ಒಳ್ಳೆಯವನೆಂಬ ಪಟ್ಟ ಊರಲ್ಲಿತ್ತು. ಹಾಗಾಗಿ ಮಾತಾಡಿಸಿದವಳು ಇವಳ ಪರೀಕ್ಷೆ ಮುಗಿದ ಮೇಲೆ ಊರಿಗೆ ಕರೆದುಕೊಂಡು ಹೋಗಲು ಬಂದಿದ್ದೇನೆ ಅಂದ. ನನಗೆ ಏನು ಹೇಳಲು ಮಾತೆ ಇರಲಿಲ್ಲ.
“ದಡ ಸೇರದ ದೋಣಿ” ಸರಣಿಯಲ್ಲಿ ಮಾರುತಿ ಗೋಪಿಕುಂಟೆ ಬರಹ
