Advertisement

ಕೆಂಡಸಂಪಿಗೆ

‘ಗೌರ್ಮೆಂಟ್ ಬ್ರಾಹ್ಮಣ’ನೆಂಬ ಪುಸ್ತಕವೂ ಮತ್ತು ನಾನು ರೂಪುಗೊಂಡ ಬಗೆಯೂ’: ಪ್ರಶಾಂತ್‌ ಬೆಳತೂರು ಬರಹ

ಚೇಳಿನಿಂದಲೇ ಹುಟ್ಟಿದ ಚೇಳಿನಿಂದಲೇ ಸತ್ತ ಎನ್ನುವ ತನ್ನಜ್ಜಿಯ ಮಾತುಗಳೊಂದಿಗೆ ತನ್ನ ತಂದೆಯನ್ನು ನೆನಪಿಸಿಕೊಳ್ಳುವ, ಪಂದ್ರಾ ಆಗಸ್ಟ್‌ನ ಸ್ವಾತಂತ್ರ್ಯ ನಿಜಕ್ಕೂ ಎಂತಹ ಸ್ವಾತಂತ್ರ್ಯ? ಯಾವ ಬಗೆಯ ಸ್ವಾತಂತ್ರ್ಯ? ಒಂದೇ ಒಂದು ಕೊಡದ ನೀರನ್ನು ಬಾವಿಯಲ್ಲಿ ಮೊಗೆಯಲಾರದೆ ಹೋದ ಕೆಳಗೇರಿಯ ಜನ ಅಂದು ಮೊಗೆಮೊಗೆದು ಸೇದಿದರು, ಮತ್ತೆ ಬಾವಿಗೆ ಸುರವಿದರು, ಮರುದಿನ ಆ ಬಾವಿಗಳಲ್ಲಿ ಇನ್ನಾರು ನೀರು ಮೊಗೆಯಬಾರದಂತೆ ಊರ ಜನರೇ ಶಾಶ್ವತವಾಗಿ ಮುಚ್ಚಿದ್ದರು ಎನ್ನುವಾಗ ಕರುಳು ಹಿಂಡಿದಂತಾಗುತ್ತದೆ.
ಪ್ರೊ. ಅರವಿಂದ ಮಾಲಗತ್ತಿ ಆತ್ಮಕತೆ “ಗೌರ್ಮೆಂಟ್ ಬ್ರಾಹ್ಮಣ”, ಹೇಗೆ ತಮ್ಮ ಬದುಕು ಬದಲಾಯಿಸಿತು ಎನ್ನುವುದರ ಕುರಿತು ಪ್ರಶಾಂತ್‌ ಬೆಳತೂರು ಬರಹ ಇಲ್ಲಿದೆ

Read More

ಪ್ರಶಾಂತ್ ಬೆಳತೂರು ಬರೆದ ಈ ದಿನದ ಕವಿತೆ

“ಆದರೆ… ಅದೆಂತಹ ವಿಪರ್ಯಾಸ
ಘನಿಸುವ ಪ್ರೇಮಭಾವಗಳ ನಡುವೆಯೂ
ಗಡಿಯ ದಾಟಲಾರದೆ ಹೋದ
ಚಾಂಡಲ ಹಕ್ಕಿಯ ಪಡಿಯಚ್ಚು ನಾನು..!
ಬೆನ್ನಿಗಂಟಿಕೊಂಡೇ ಬಂದಿದೆ
ಮೈಯ ಮೇಲಣ ಬಣ್ಣ
ಗಡಿಗಳ ಕೊರೆದು ನಿಲ್ಲಿಸಿದೆ
ಅಸ್ಪೃಶ್ಯನೆಂಬ ಕಾರಣ..!”- ಪ್ರಶಾಂತ್ ಬೆಳತೂರು ಬರೆದ ಈ ದಿನದ ಕವಿತೆ

Read More

ಪ್ರಶಾಂತ್ ಬೆಳತೂರು ಬರೆದ ಈ ದಿನದ ಕವಿತೆ

“ನಾವೋ…
ಮಹಾತಾಯ ಗರ್ಭದಲ್ಲಿ
ಎಂದೋ ಉದುರಿ ಬಿದ್ದು
ಅವಳ ನಿರ್ಲಕ್ಷ್ಯಕ್ಕೆ ಒಳಪಟ್ಟ
ಅಸ್ಪೃಶ್ಯ ಮಕ್ಕಳು
ಮುಟ್ಟಲಾರೆವು
ಅವಳ ಮೊಲೆ ಹಾಲನ್ನು
ಎಲ್ಲರಂತೆ ಆಡಲಾಗದ
ಎಲ್ಲರಂತೆ ಕುಣಿಯಲಾಗದ
ಧರೆಯ ಹೆಳವರು
ಭೂತ ವರ್ತಮಾನದ ಹಾದಿ
ಅನಾದಿಗಳನ್ನು ಕಾಣದೆ
ಭವಿಷ್ಯದ ಹೆಜ್ಜೆ ಗುರುತುಗಳನ್ನು
ಮೂಡಿಸಲು
ಅಜ್ಜ ಬಿಟ್ಟು ಹೋದ
ಊರುಗೋಲನ್ನೇ ನಂಬಿ
ಕುಂತಲ್ಲೇ ಕೂತಿದ್ದೇವೆ…!”- ಪ್ರಶಾಂತ್ ಬೆಳತೂರು ಬರೆದ ಈ ದಿನದ ಕವಿತೆ

Read More

ಪ್ರಶಾಂತ್‌ ಬೆಳತೂರು ಬರೆದ ಈ ದಿನದ ಕವಿತೆ

“ಬದುಕಿದ್ದಷ್ಟು ದಿವಸ
ದುಡಿಮೆಗಾಗಿಯೇ ಹುಟ್ಟಿದ್ದವಳು..!
ಹೋಗುವ ಕೊನೆಯ ಗಳಿಗೆಯಲ್ಲೂ
ರಾಶಿಬಿದ್ದ ಬಟ್ಟೆಗಳನ್ನು
ಸೋಲೊಪ್ಪದ ನಿತ್ರಾಣ ರಟ್ಟೆಗಳಲ್ಲಿ
ಒಗೆದು ಸ್ವಚ್ಛಗೊಳಿಸಿ ಸುಮ್ಮನಾಗದೆ”- ಪ್ರಶಾಂತ್‌ ಬೆಳತೂರು ಬರೆದ ಈ ದಿನದ ಕವಿತೆ

Read More

ಪ್ರಶಾಂತ್ ಬೆಳತೂರು ಬರೆದ ಈ ಭಾನುವಾರದ ಕತೆ

ಲೋಲಿ ಮಾತ್ರ ತನ್ನ ಭಾವ ದೇವರೆಂದು ಅವನಿಲ್ಲದಿದ್ದರೆ ಈ ಮನೆ ಎಂದೋ ಸರ್ವನಾಶವಾಗಿ ಬಿಡುತ್ತಿತ್ತೆಂದೂ, ಮನೆಗೆ ಕೊಡಲಿ ಮಿತ್ತಾದ ಗಂಡನ ಹಾವಳಿಯಿಂದ ತಾನು ಪಟ್ಟ ಪರಿಪಾಟಲುಗಳನ್ನೆಲ್ಲಾ ಹೇಳುತ್ತಾ ಗಂಡ ತೀರಿ ಹೋದ ಮೇಲೆ ಹೆಣ್ಣೆಂಗಸು ಹೇಗೆ ತಾನೇ ಮನೆಯೊಗೆತನ ಮಾಡುತ್ತಾಳೆ?
ಪ್ರಶಾಂತ್‌ ಬೆಳತೂರು ಬರೆದ ಈ ಭಾನುವಾರದ ಕತೆ “ಹಂದಿಕಾಳನ ಸಿಂಗಿಯೂ..ಮತ್ತವನ ರಾಜಪರಿವಾರವೂ..!”

Read More
  • 1
  • 2

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ