Advertisement

ಎಸ್. ಜಯಶ್ರೀನಿವಾಸ ರಾವ್

ಅರ್ಧ ಶತಮಾನದ ರಾಜಕೀಯ ಅರಿವು: ರಂಜಾನ್‌ ದರ್ಗಾ ಸರಣಿ

ಚುನಾವಣೆಯ ದಿನ ವಿಜಾಪುರದ ಒಂದು ಹಳ್ಳಿಯಲ್ಲಿ ನಡೆದ ಘಟನೆಯೊಂದು ನೆನಪಿಗೆ ಬರುತ್ತಿದೆ. ಆಗ ಹತ್ತಿ ಬಿಡಿಸುವ ಕಾಲವಾಗಿತ್ತು. ಜಮೀನುದಾರರು ಚುನಾವಣೆಯ ಹಿಂದಿನ ದಿನ ಆ ಹಳ್ಳಿಯಲ್ಲಿ ಘೋಷಣೆ ಮಾಡಿದ್ದು ಬಹಳ ಹೊಸದಾಗಿತ್ತು. ಚುನಾವಣೆ ದಿನ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತಮ್ಮ ಹೊಲಗಳಲ್ಲಿ ಬೇಕಾದಷ್ಟು ಹತ್ತಿ ಬಿಡಿಸಿಕೊಂಡು ಹೋಗಬಹುದೆಂದು ಘೋಷಿಸಿದರು. ಆದರೆ ಹಳ್ಳಿಗರು ಹತ್ತಿಯ ಆಸೆಗಾಗಿ ಮತ ಚಲಾಯಿಸುವುದನ್ನು ಬಿಡಲಿಲ್ಲ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 66ನೇ ಕಂತು ನಿಮ್ಮ ಓದಿಗೆ

Read More

ಕಣ್ಣ ಮುಂದೆ ಕುಳಿತ ಸಾವು ಕರಗಿತ್ತು..: ರಂಜಾನ್‌ ದರ್ಗಾ ಸರಣಿ

ರಹಮಾನ್ ಖಾನ್ ಅದೇನೋ ಹೇಳಿದ. ನಂತರ ನನಗೆ ಮಾತನಾಡಲು ತಿಳಿಸಿದ. ಅದು ನನ್ನ ಕೊನೆಯ ಭಾಷಣ ಎಂದು ಭಾವಿಸಿದೆ. ಬದುಕುಳಿಯುವ ಯಾವ ಸಾಧ್ಯತೆಯೂ ಇಲ್ಲ ಎನಿಸಿತು. ಅವರೆಲ್ಲ ‘ಏನು ಮಾತನಾಡ್ತಿಯೋ ನೋಡೋಣ’ ಎಂದು ಅಂದುಕೊಂಡವರ ಹಾಗೆ ಕುಳಿತಿದ್ದರು. ಅಂದೇ ಪ್ರಕಟವಾದ ಸಾಪ್ತಾಹಿಕ ಪುರವಣಿಯ ಪ್ರತಿ ಕೈಯಲ್ಲಿತ್ತು. ಆ ನನ್ನ ಲೇಖನ ಇಡೀ ಮುಖಪುಟ ತುಂಬಿತ್ತು. ಮೇಲೆ ಕೆಂಪು ಬಣ್ಣದಲ್ಲಿ ಕಲಾವಿದ ಸೂರಿ ಬರೆದ ಮುಸ್ಲಿಂ ಮಹಿಳೆಯ ಚಿತ್ರ ಲೇಖನದಲ್ಲಿನ ನೋವಿಗೆ ಪೂರಕವಾಗಿದ್ದು ಹೃದಯಸ್ಪರ್ಶಿಯಾಗಿತ್ತು.  ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ಸರಣಿ

Read More

ಕತ್ತಲಲಿ ಕಂಡ ಮಿನುಗುವ ಕಣ್ಣುಗಳು….

ಆ ಹಾಳು ಗುಡಿಯ ಮುಂದೆ ಹೋದೆವು. ಒಬ್ಬರೂ ಕಾಣಲಿಲ್ಲ. ಅಷ್ಟೊತ್ತಿಗೆ ಒಳಗಿನಿಂದ ಒಬ್ಬ ಯುವಕ ಬಂದ. ದೇವಾಲಯದೊಳಗೆ ಸಂಪೂರ್ಣ ಕತ್ತಲು ಕವಿದಿತ್ತು. ಇದೇನು ಹೀಗೆ ಎಂದಾಗ, ಆತ ‘ಇರುವುದೊಂದೇ ಮೋಂಬತ್ತಿ ನಿಮ್ಮ ಬರುವಿಗೆ ಕಾಯುತ್ತಿದ್ದೆವು’ ಎಂದ. ಒಳಗೆ ಕಾಲಿಟ್ಟಕೂಡಲೆ ಆತ ಮೋಂಬತ್ತಿ ಹಚ್ಚಿದ. ಅಲ್ಲಿ ಕುರ್ಚಿ ಟೇಬಲ್ ಏನೂ ಇರಲಿಲ್ಲ. ಆ ಮೋಂಬತ್ತಿಯ ಬೆಳಕಲ್ಲಿ ನೂರಾರು ಯುವಕರು ಕುಳಿತಿದ್ದು ಮಸುಕು ಮಸುಕಾಗಿ ಕಾಣುತ್ತಿತ್ತು. ಅವರ ಕಣ್ಣುಗಳು ಮಾತ್ರ ನಕ್ಷತ್ರಗಳ ಹಾಗೆ ಹೊಳೆಯುತ್ತಿದ್ದವು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 64ನೇ ಕಂತು ನಿಮ್ಮ ಓದಿಗೆ

Read More

ಬಾಂಬುದಾಳಿಗೀಡಾಗಿ ಬಾನುಲಿ ಬರಿದಾಗಿದೆ ಮೌನವಾಗಿದೆ…

ಭಾಷಣ ಸ್ಪರ್ಧೆಯ ದಿನ ಬಂದಿತು. ಹೈಸ್ಕೂಲು ಕಟ್ಟಡದ ಹಿಂದಿನ ಗೋಡೆಯ ಮೇಲೆ ಹೋಗಿ ಕುಳಿತೆ. ಗೋಡೆ ಜಿಗಿದು ಸಭಾಭವನಕ್ಕೆ ಹೋಗಬೇಕೆಂದರೆ ಧೈರ್ಯ ಸಾಲದು. ಹಾಫ್ ಪ್ಯಾಂಟ್ ಹರಿದಿತ್ತು. ಷರ್ಟ್ ಗಲೀಜಾಗಿತ್ತು. ಕ್ಷೌರಿಕರಿಗೆ ಕೊಡಲಿಕ್ಕೆ ಹಣವಿಲ್ಲದ್ದಕ್ಕಾಗಿ ಕೂದಲು ಬೆಳೆದಿತ್ತು. ಕೊಬ್ಬರಿ ಎಣ್ಣೆ ಇಲ್ಲದ್ದಕ್ಕಾಗಿ ಕೂದಲು ಒಣಗಿದ್ದರಿಂದ ಕಾಡು ಮನುಷ್ಯನ ಹಾಗೆ ಕಾಣುತ್ತಿದ್ದೆ. ಭಾಷಣ ಮಾಡುವ ಸ್ಫೂರ್ತಿಗೆ ಪೂರಕವಾಗಿರುವಂಥ ಯಾವುದೂ ಇರಲಿಲ್ಲ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 63ನೇ ಕಂತು ನಿಮ್ಮ ಓದಿಗೆ

Read More

ಸೀರೆಯ ಸೆರಗಿನಲ್ಲಿ ಅನ್ನ-ಸಾರು….!

ಹೊಸಪೇಟೆಯ ಬಡತನ ನನ್ನನ್ನು ದಿಗಿಲು ಬಡಿಸಿತು. ಬೆಳಗಿನ ನಾಷ್ಟಾ ಮತ್ತು ಮಧ್ಯಾಹ್ನದ ಊಟದ ವೇಳೆ, ತಂತಿಬೇಲಿಯ ಆಚೆ ಬಡವರು ಅನ್ನಕ್ಕಾಗಿ ಕಾಯುತ್ತಿದ್ದರು. ನಮಗೆ ಇಲ್ಲಿ ಬೇಕಾದಷ್ಟು ಆಹಾರ ನೀಡುತ್ತಿದ್ದರು. ನನ್ನ ಕೆಲವರು ಗೆಳೆಯರಿಗೆ ಆ ನಿರ್ಗತಿಕರ ಬಗ್ಗೆ ತಿಳಿಸಿ ಒಂದು ಯೋಜನೆ ರೂಪಿಸಿದೆ. ನಾವೆಲ್ಲ ಹೆಚ್ಚಿಗೆ ಅನ್ನ ಹಾಕಿಸಿಕೊಳ್ಳುವುದು. ಸ್ವಲ್ಪ ತಿಂದ ಹಾಗೆ ಮಾಡಿ ಅವರ ಬಳಿ ಹೋಗುವುದು. ಆ ಬಡ ಹೆಣ್ಣುಮಕ್ಕಳು ಸೆರಗೊಡ್ಡುವುದು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 62ನೇ ಕಂತು ನಿಮ್ಮ ಓದಿಗೆ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ