Advertisement

ಕೆಂಡಸಂಪಿಗೆ

ಅಮ್ಮನ ದ್ಯಾವ್ರು: ಸುಮಾ ಸತೀಶ್ ಸರಣಿ

ಅವು ಈಗಿನ್ ಕಾಲುದ್ ಗುಲಾಬಿ ಅಲ್ಲ್ ಕಣೇಳಿ. ರೋಜಾ ಬಣ್ದವು. ತೆಳ್ಳುಗಿರಾ ರೆಕ್ಕೆಗ್ಳು. ಬಲ್ ನಾಜೂಕು. ಗಟ್ಟಿಯಾಗಿ ಒತ್ತಿದ್ರೆ ಬಾಡೋಗೋಂತವು. ಚಿಕ್ಕದಾದ್ರೆ ಐದು ಪೈಸಾ. ದೊಡ್ಡವು ಹತ್ತು ಪೈಸಾ. ಸ್ಯಾನೇ ದೊಡ್ಡವು ನಾಕಾಣೆ. ಮನ್ಯಾಗೆ ಇರಾ ಚಿಲ್ರೆ ಹುಡುಕೀ ಹುಡುಕೀ ಅಮ್ಮ‌ ರಾತ್ರೀನೇ ರೆಡಿ ಇಕ್ಕಿರ್ತಿತ್ತು. ಮದ್ಲೇ ಗೊತ್ತಿರ್ತಿತ್ತಲ್ಲ. ಆದ್ರೂ ಸತ ಗುಲಾಬಿ ಸ್ಯಾನೆ ಇದ್ರೆ ಆಸೆ. ಅವುನ್ ತಾವ ಕೊಸರಾಡೋದು. ಇನ್ನೊಂದು ಹಾಕು, ಇದು ಚಿಕ್ದು, ಇದು ರೆಕ್ಕೆ ಕಿತ್ತೋಗದೆ, ಬಾಡೋಗದೆ, ಸಿಕ್ಕಾಪಟ್ಟೆ ಕಾಸು ಯೋಳ್ತೀಯಾ. ನಾಳಿಂದ ಬ್ಯಾಡಾಕ್ಕೆ ಬ್ಯಾಡ ಇಂಗೆ ನಮ್ಮಮ್ಮುನ್ ಕೂಗಾಟ. ಅವ್ನೂ ಕಮ್ಮಿ ಇರ್ತಿರ್ಲಿಲ್ಲ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ ಬರಹ ನಿಮ್ಮ ಓದಿಗೆ

Read More

ನಮ್ಮಮ್ಮ ನಾಗಮ್ಮ: ಸುಮಾ ಸತೀಶ್ ಸರಣಿ

ಒಟ್ನಾಗೆ ಅಮ್ಮ ದೋಡ್ಡ ಸಂಸಾರದಾಗೆ ಸೈ ಅನ್ನುಸ್ಕಂಡಿದ್ದು ಸಣ್ದೇನಲ್ಲ. ಅಪ್ಪ ರಾಜಕೀಯದಾಗಿತ್ತು. ಮನೇನಾಗೆ ಇರ್ತಾ ಇರ್ಲಿಲ್ಲ. ಮಾತುಕತೆಗೆ ಸಿಗುತ್ಲೇ ಇರ್ಲಿಲ್ಲ. ಮನ್ ತುಂಬಾ ಜನ. ಕೆಲ್ಸ. ಮದಮದಲು ಅತ್ತೆದೀರ್ಗೆ ಬಿಗುಮಾನ ಇತ್ತು. ನಮ್ಮ ದೊಡ್ಡತ್ತೆ ಮಾತೂ ಅಂದ್ರೆ ಮನ್ಯಾಗೆ ವೇದವಾಕ್ಯ. ಅವ್ರೂ ಒಂದಿನ ನಾವು ಎಂಟು ಜನ ಯಾವತ್ತಿದ್ರೂ ಒಂದೇನೇಯಾ ಅಂತ ಯೋಳ್ದಾಗ ಅಮ್ಮುಂಗೆ ನಾನೊಬ್ಳೇ ಅಲ್ವಾ ಅಂಗಾರೆ ಹೊರುಗ್ನೋಳು ಅಂತ ಸಂಕಟ ಆಗಿ ಮರೇನಾಗೆ ಕಣ್ಣಾಗೆ ನೀರು ಹಾಕ್ಕಂಡಿದ್ದ್ರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮ ತಾಯಿಯ ಕುರಿತ ಬರಹ ನಿಮ್ಮ ಓದಿಗೆ

Read More

ಮಹಾಮಾತೆ ನನ್ನತ್ತೆ: ಸುಮಾ ಸತೀಶ್ ಸರಣಿ

ಅವರ ಜೀವನ ಪ್ರೀತಿ ಬಲು ಹಿತವಾಗಿತ್ತು.‌ ಮನೆತುಂಬ ಮಕ್ಕಳಿದ್ದಾಗ ತರಾವರಿ ಅಡುಗೆ ಮಾಡುತ್ತಿದ್ದರು.‌ ಕೊನೆಗೆ ತಾವಿಬ್ಬರೇ ಇರುವಾಗಲೂ ಯಾವೊಂದು ತಿಂಡಿಯನ್ನೂ ಬಿಡದೆ ಮಾಡುತ್ತಿದ್ದರು. ಇಡ್ಲಿ, ದೋಸೆ, ಕಡುಬು, ಒಬ್ಬಟ್ಟು ಊಹೂ ಯಾವುದೂ ಬಿಡುತ್ತಿರಲಿಲ್ಲ. ಸೋಮಾರಿತನ ಇವರನ್ನು ಕದ್ದು ನೋಡಲೂ ಹೆದರಿ ಓಡುತ್ತಿತ್ತು. ಕೊನೆಗೆ ಮಾಮ ಹೋದ ಮೇಲೆ ಸುಮಾರು ವರ್ಷಗಳು ಒಬ್ಬರೇ ಇದ್ದಾಗಲೂ ಅದೇ ಆಹಾರ ಪದ್ಧತಿಯಿತ್ತು. ತಾವೊಬ್ಬರೇ ತಿನ್ನದೆ ಅಕ್ಕಪಕ್ಕದವರಿಗೆ, ಹತ್ತಿರದ ಬಡಮಕ್ಕಳಿಗೆ, ಕೂಲಿ ಕೆಲಸದವರಿಗೆ‌ ಕೊಟ್ಟು ತಿನ್ನುತ್ತಿದ್ದರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ ಬರಹ

Read More

ನನ್ನ ಯಶೋಧೆ ನಾಗಮ್ಮ: ಸುಮಾ ಸತೀಶ್ ಸರಣಿ

ಇದು ನಂಗೆ ಬುದ್ಧಿ ಬಂದ ಮ್ಯಾಗ್ಳ ಕತೆ. ಅದ್ಕೂ ಮುಂಚೆ, ಐದಾರು ವರ್ಷ ಆದ್ರೂ ಎಳೆ ಕೂಸಿಗೆ ಕಾಲು ಮೇಲೆ ಅಡ್ಡಾಕ್ಕಂಡು ನೀರು ಹುಯ್ಯಲ್ವೇ ಅಂಗೇ ಮಾಡೋಳು. ನಮ್ಮಮ್ಮ ‌ಅಯ್ಯೋ ಅದೇನು ಸಣ್ಣ ಮಗೀನೆ ಬಿಡು ಅಂದ್ರೂ ಬಿಡವಲ್ಲಳು. ಮಗೀಗೆ ಮೈನೋವು ಅಂತ ಕಾಲಿನ ಮ್ಯಾಗಾಕ್ಕಂಡು ಕೈಕಾಲು ಹಿಸುಕಿ ಹಿಸುಕಿ, ಅಮ್ಮುಂಗೆ ನೀರು ಹುಯ್ಯೋಕೆ ಏಳೋಳು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ ಬರಹ

Read More

ಚಂದ್ರಮ್ಮನ್ನ ಹುಯ್ಯೋದು: ಸುಮಾ ಸತೀಶ್ ಸರಣಿ

ಏಸೊಂದು ಸೆಂದಾಕಿ ಪದ ಬಿಡುತ್ತಿದ್ದರು. ‘ಏಳ್ರಮ್ಮಣ್ಣಿದೀರಾ ನಿದ್ದೆ ಬತ್ತಾ ಐತೆ’ ಅಂಬ್ತ ಗಂಡಸರು ಯೋಳೋತಂಕ ಅಲ್ಲಿಂದ ಅಲ್ಲಾಡಿದ್ರೆ ಸೈ. ತಂಬಿಟ್ಟು ನಂಗೆ ಇಷ್ಟ ಅಂತ ವಸಿ ತುಪ್ಪ ಜಾಸ್ತಿ ಹಾಕಿ ಉಂಡೆ ಕಟ್ಟಿ ನಂಗೇಂತ ಮನೆಯ ನಿಲುವಿನಲ್ಲಿ ಮಕ್ಕಳಿಗೂ ಕಾಣದಂಗೆ ಬಚ್ಚಿಕ್ಕಿ ತಿನ್ನಿಸುತ್ತಿದ್ದ ನಾಗಮ್ಮ ನನ್ನ ಪಾಲಿನ ಯಶೋದೆಯೇ ಸೈ. ಎಡವಿ ಬಿದ್ದರೆ ಮನೆ ಸಿಗುತ್ತಿದ್ದರೂ ನಡುರಾತ್ರಿ ಮಗೀನ ಒಂದುನ್ನೇ ಕಳಿಸಕಾಯ್ತದಾ ಅಂತ ಕರೆತಂದು, ಮನೆ ಬಾಗಿಲು ತೆರೆದು, ‘ಅಮ್ಮಣ್ಣಿ, ಬಿಡ್ಡ ವಚ್ಚಿಂದಿ, ಪಂಡೇಯಮ್ಮೋ’ ಅಂತ ಹೇಳಿಯೇ ಹೋಗುತ್ತಿದ್ದಳು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ