ವಾತ್ಸಲ್ಯ ಬಿಡದಿರು ನಿನ್ನ ನಂಬಿದೆ ದೇವ…: ತೇಜಸ್ವಿನಿ ಹೆಗಡೆ ಬರಹ
ಮಾತಿನ ನಡುವೆ ವಿಮಲಕ್ಕ ಅಜ್ಜಿಯ ಬಳಿ “ಸರಸು, ಮಕ್ಕನೂ ಅವ್ರಿದ್ದೇ ಪ್ರಪಂಚದಲ್ಲಿ ಮುಳ್ಗಿದ್ದೋ. ಯಾರಿಗೂ ನಾನು ಬೇಡಾಗೋಯ್ದೆ ಅನ್ನಿಸ್ತು. ಬೇರೆಯವ್ಕೆ ನಾ ಇಷ್ಟ ಇದ್ನೋ ಇಲ್ಯೋ ಗೊತ್ತಿಲ್ಯೆ. ನಾ ಮೊದ್ಲಿಂದ್ಲೂ ಆ ದೇವ್ರಿಗೆ ಮಾತ್ರ ಪ್ರೀತಿ. ಅವಂಗೆ ನನ್ನ ಮೇಲೆ ರಾಶಿ ಮುತವರ್ಜಿ ಕಾಣ್ತು. ಅದ್ಕೇ ಯನ್ನ ಕಷ್ಟಕ್ಕೆ ಕೊನೆನೇ ಇಲ್ಲೆ ನೋಡು… ಇದೇ ನನ್ನ ಭಾಗ್ಯ ಅಂದ್ಕತ್ತಿ ಬಿಡು… ಎಲ್ಲ ನನ್ನ ಹಣೆಬಹರ, ಕರ್ಮ” ಎಂದು ಕಣ್ಣೀರಾಗಿದ್ದಳು. ನನಗೆ ಆಗ ಅರ್ಥವೇ ಆಗಿರಲಿಲ್ಲ. ಆದರೆ ಆ ಮಾತು ಮಾತ್ರ ಅದು ಹೇಗೋ ನನ್ನೊಳಗೆ ಇಳಿದು ಬಿಟ್ಟಿತ್ತು.
ತೇಜಸ್ವಿನಿ ಹೆಗಡೆ ಬರಹ ನಿಮ್ಮ ಓದಿಗೆ
