Advertisement

Category: ದಿನದ ಅಗ್ರ ಬರಹ

ರಾಜ್ಕುಮಾರ್ ಅಂದ್ರ ಏನಂದ್ಕಂಡೆ?: ಎಂ. ಜವರಾಜ್‌ ಹೊಸ ಕಾದಂಬರಿಯ ಆಯ್ದ ಭಾಗ

ಪಂಚಾಯ್ತಿ ಆಫೀಸ್ ಮಗ್ಗುಲು ಬೀದಿಲಿದ್ದ ಕುಂಟ ಸಿದ್ದಪ್ಪನ ಮನೆಯ ಅಂಗಳದಲ್ಲಿ ಒಂದಷ್ಟು ಜನ ಮಾತಾಡ್ತ ನಿಂತಿದ್ದರು. ಅಲ್ಲಿಗೆ ನಾಕಾರು ಪೇಪರು ಬರುತ್ತಿದ್ದವು. ಕುಂಟ ಸಿದ್ದಪ್ಪ ಬಿಳಿಪಂಚೆ ಬಿಳಿ ಶರ್ಟು ಹಾಕೊಂಡು ಕ್ರಾಪ್ ತಲೆ ಬಾಚ್ಕೊಂಡು ಕಾಲಿನ ಮೇಲೆ ಕಾಲು ಹಾಕಿಕೊಂಡು “ಇದು ಗೋಕಾಕ್ ಚಳುವಳಿ ಅಂತ. ಅವ್ರೊಬ್ಬ ದೊಡ್ ಕವಿ. ಅವ್ರು ಸರ್ಕಾರಕ್ಕೆ ಬರ್ದ ಪತ್ರನ ಇಟ್ಕೊಂಡು ನಡಿತಿರ ಹೋರಾಟ ಇದು. ಏಯ್‌ ನೋಡ್ರಪ್ಪ, ಬಾಯಿಲ್ಲಿ” ಅಂತ ಕರೆದು, “ನೀನು ಐದ್ನೆ ಕ್ಲಾಸಾ? ನಾಕ್ನೆ ಕ್ಲಾಸಾ?” ಅಂದ. ನಾನು, ʼಹುʼ” ಎನ್ನುವವನಂತೆ ತಲೆದೂಗಿದೆ. “ಹೌದಾ? ಹೋಗು, ಇನ್ಮೇಲ ಇಂಗ್ಲಿಸ್ ಗಿಂಗ್ಲಿಸ್ ಓದಂಗಿಲ್ಲ, ಬರೀ ಕನ್ನಡ. ನಿನ್ತವು ಇಂಗ್ಲಿಸ್ ಬುಕ್ಸ್ ಇದ್ರ ತೂದು ಬಿಸಾಕಿ ಕನ್ನಡ ಇಟ್ಗ” ಅಂದ. ಅಲ್ಲೊಬ್ಬ ಕೇಳ್ತಿದ್ದವನು “ಇದ್ಕ ರಾಜ್ಕುಮಾರ್ ಯಾಕ್ ಮದ್ಯಕ್ ಬಂದ?” ಅಂತ ಕೇಳಿದ.
ಎಂ. ಜವರಾಜ್‌ ಹೊಸ ಕಾದಂಬರಿ “ಪೋಸ್ಟ್‌ಮ್ಯಾನ್‌ ಗಂಗಣ್ಣ” ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ

Read More

ಲಕ್ಷ್ಮಣ ಶರೆಗಾರ ಬರೆದ ಈ ಭಾನುವಾರದ ಕತೆ

ಎಲ್ಲ ಧರ್ಮಗಳಾಚೆ ಮನುಷ್ಯರ ಮನಸ್ಸುಗಳು ಒಂದೇ ಆಗಿರುತ್ತವೆ! ಒಡವೆಗಳು ಸಂಕೋಲೆಗಳಾಗುವ ಹೊತ್ತಿಗೆ ಇಷ್ಟಪಟ್ಟು ಜೀಕಿದ ಜೋಕಾಲಿಯೇ ಎತ್ತಿ ದೂರ ಚಲ್ಲಿಬಿಡುತ್ತದೆ. ಇಷ್ಟೆಲ್ಲದರಾಚೆ ಹೊಂದಿಕೊಂಡು ಅವನೊಂದಿಗೆ ಸುಖವಾಗಿ ಎರಡು ಹೊತ್ತು ಉಂಡು ಆಕಾರವನ್ನೇ ಕಳೆದುಕೊಂಡು ನೆರಳಿನಂತೆ ಇದ್ದುಬಿಡುವುದು ನನಗೆ ಅಸಹ್ಯವೆನ್ನಿಸಲು ಶುರುವಾಗಿ ಎದ್ದು ತೌರುಮನೆಗೆ ತೌರು ಮನೆಯ ದಾರಿ ತುಳಿದಿದ್ದೆ. ನನ್ನ ಮಕ್ಕಳನ್ನು ತನ್ನ ಮಕ್ಕಳಂತೆ ಅವಳು ನೋಡಿಕೊಳ್ಳುತ್ತಾಳೆಂಬ ನಂಬುಗೆ ನನಗೆ.
ಲಕ್ಷ್ಮಣ ಶರೆಗಾರ ಬರೆದ ಈ ಭಾನುವಾರದ ಕತೆ “ಬಿಡುಗಡೆ”

Read More

ವಾತ್ಸಲ್ಯ ಬಿಡದಿರು ನಿನ್ನ ನಂಬಿದೆ ದೇವ…: ತೇಜಸ್ವಿನಿ ಹೆಗಡೆ ಬರಹ

ಮಾತಿನ ನಡುವೆ ವಿಮಲಕ್ಕ ಅಜ್ಜಿಯ ಬಳಿ “ಸರಸು, ಮಕ್ಕನೂ ಅವ್ರಿದ್ದೇ ಪ್ರಪಂಚದಲ್ಲಿ ಮುಳ್ಗಿದ್ದೋ. ಯಾರಿಗೂ ನಾನು ಬೇಡಾಗೋಯ್ದೆ ಅನ್ನಿಸ್ತು. ಬೇರೆಯವ್ಕೆ ನಾ ಇಷ್ಟ ಇದ್ನೋ ಇಲ್ಯೋ ಗೊತ್ತಿಲ್ಯೆ. ನಾ ಮೊದ್ಲಿಂದ್ಲೂ ಆ ದೇವ್ರಿಗೆ ಮಾತ್ರ ಪ್ರೀತಿ. ಅವಂಗೆ ನನ್ನ ಮೇಲೆ ರಾಶಿ ಮುತವರ್ಜಿ ಕಾಣ್ತು. ಅದ್ಕೇ ಯನ್ನ ಕಷ್ಟಕ್ಕೆ ಕೊನೆನೇ ಇಲ್ಲೆ ನೋಡು… ಇದೇ ನನ್ನ ಭಾಗ್ಯ ಅಂದ್ಕತ್ತಿ ಬಿಡು… ಎಲ್ಲ ನನ್ನ ಹಣೆಬಹರ, ಕರ್ಮ” ಎಂದು ಕಣ್ಣೀರಾಗಿದ್ದಳು. ನನಗೆ ಆಗ ಅರ್ಥವೇ ಆಗಿರಲಿಲ್ಲ. ಆದರೆ ಆ ಮಾತು ಮಾತ್ರ ಅದು ಹೇಗೋ ನನ್ನೊಳಗೆ ಇಳಿದು ಬಿಟ್ಟಿತ್ತು.
ತೇಜಸ್ವಿನಿ ಹೆಗಡೆ ಬರಹ ನಿಮ್ಮ ಓದಿಗೆ

Read More

ಚಿತ್ರಾ ವೆಂಕಟರಾಜು ಹೊಸ ಸರಣಿ “ಚಿತ್ತು-ಕಾಟು” ಇಂದಿನಿಂದ

ಇದರೊಳಗೆ ಒಂದು ತಮಾಷೆಯೆಂದರೆ ಪಾತ್ರದ ಜತೆಗೆ ನಟನೂ ಇರುತ್ತಾನೆ. ಪರಸ್ಪರ ಒಬ್ಬರಿಗೊಬ್ಬರನ್ನು ಕಂಡರೆ ಆಗದ ನಟರು ರಂಗದ ಮೇಲೆ ಪ್ರೇಮಿಸುತ್ತಾರೆ‌. ಪ್ರೀತಿಸಿದ ಹುಡುಗಿ ಅಜ್ಜಿಯೋ, ಸನ್ಯಾಸಿಯೋ ಆಗಿಬಿಟ್ಟಿರುತ್ತಾಳೆ. ಪ್ರೀತಿಸಿದ ನಟ ಇನ್ನೊಬ್ಬಳೊಂದಿಗೆ ಡಾನ್ಸ್ ಮಾಡ್ತಿರೋದನ್ನ ಅವನ ಪ್ರೇಯಸಿ ಸೈಡ್ ವಿಂಗಿನಲ್ಲಿ ಕೂತು.. ‘ಇದು ನಾಟಕ ಇದು ನಾಟಕ’ ಅಂತ ತನ್ನನ್ನೇ ಸಮಾಧಾನಪಡಿಸಿಕೊಳ್ಳುತ್ತಾಳೆ. ಹೀಗೆ ರಂಗದ ಮೇಲೆ ನಡೆಯುವ ನಾಟಕಕ್ಕಿಂತ ಹೆಚ್ಚು ರೋಚಕವಾದ ಅನೇಕ ನಾಟಕಗಳು ಈ ಪ್ರಕ್ರಿಯೆಯಲ್ಲಿ ನಡೆಯುತ್ತಲೇ ಇರುತ್ತದೆ. ಕಲಾಲೋಕದ ಕುರಿತು ಚಿತ್ರಾ ವೆಂಕಟರಾಜು ಹೊಸ ಸರಣಿ “ಚಿತ್ತು-ಕಾಟು” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ