ದರ್ಶನ್ ಜಯಣ್ಣ ಹೊಸ ಸರಣಿ “ಸೌದಿ ಡೇಟ್ಸ್” ಇಂದಿನಿಂದ….
ನಾನಿಲ್ಲಿ ಇಲ್ಲಿಯತನಕ ಆರು ವರ್ಷ ನಾಲ್ಕು ತಿಂಗಳುಗಳನ್ನ ಕಳೆದಿದ್ದೇನೆ. ನನ್ನ ಕುಟುಂಬದ ಜೊತೆ, ಗೆಳೆಯರ ಜೊತೆ ಈ ದೇಶ ಸುತ್ತಾಡಿದ್ದೇನೆ. ಇಲ್ಲಿನ ಬೃಹತ್ ಕಾರ್ಖಾನೆಗಳನ್ನು ಸ್ವತಃ ನೋಡಿದ್ದೇನೆ. ಇಲ್ಲಿನ ರಣ ಬಿಸಿಲಿನ ಜೊತೆಗೆ ತಂಪಾದ ಹವೆಯನ್ನೂ ಅನುಭವಿಸಿದ್ದೇನೆ. ಮರಳ ಮಳೆ, ನಿಜದ ಮಳೆ ಎರಡಕ್ಕೂ ಸಾಕ್ಷಿಯಾಗಿದ್ದೇನೆ. ಅರಬ್ಬರ ಜೊತೆ ಕೆಲಸ ಮಾಡಿ, ಓಡಾಡಿ ಚರ್ಚಿಸಿದ್ದೇನೆ. ಅವರ ಕನಸು, ವಿಚಾರ, ಜೀವನ ಕ್ರಮ, ಸ್ನೇಹವನ್ನು ಅನುಭವಿಸಿದ್ದೇನೆ.
ಸೌದಿ ಅರೇಬಿಯಾದ ವಾಸಿಯಾದ ದರ್ಶನ್ ಜಯಣ್ಣ ಅಲ್ಲಿನ ವಾಸದ ಹಾಗೂ ಆ ದೇಶದ ಕುರಿತು ತಮ್ಮ ಅನುಭವಗಳನ್ನು “ಸೌದಿ ಡೇಟ್ಸ್” ಹೆಸರಿನಲ್ಲಿ ಶನಿವಾರಗಳಂದು, ಹದಿನೈದು ದಿನಗಳಿಗೊಮ್ಮೆ ಬರೆಯಲಿದ್ದಾರೆ
