‘ಮಾವಿನ ತುಮಕಿʼ: ಮಾಮಾ ಶಾಂತಾ: ಜಯಂತ ಕಾಯ್ಕಿಣಿ ಕೃತಿಯ ಬರಹ
ಯಾವುದೇ ಬಸ್ಸು ಹಿಡಿಯಲು ಸರಿಯಾದ ಸಮಯಕ್ಕೆ ಅಥವಾ ಚೂರು ಮುಂಚಿತವಾಗಿ ಆಕೆ ಹೋಗಿದ್ದೇ ಇಲ್ಲ. ಬಸ್ಸು ಹೊರಡುವ ಟೈಮಿಗೆ ಆಕೆ ಮಹಾರಾಣಿಯಂತೆ ನಿಧಾನಕ್ಕೆ ಮನೆಯಿಂದ ಹೊರಡುತ್ತಿದ್ದಳು. ಮತ್ತು ಮನೆಯಲ್ಲಿದ್ದ ನನ್ನನ್ನೋ ರಾಜೇಂದ್ರನನ್ನೋ ರಮಾನಂದನನ್ನೋ “ಹೋಗು ಬಸ್ ನಿಲ್ಲಿಸು” ಎಂದು ಬಸ್ ಸ್ಟ್ಯಾಂಡಿಗೆ ಅಟ್ಟುತ್ತಿದ್ದಳು. ನಾವ್ಯಾರೂ ಇರದಿದ್ದರೆ ಹಾದಿಯಲ್ಲಿ ಸಿಗುವ ಯಾವುದಾದರೂ ಸೈಕಲ್ ಸವಾರರನ್ನು ಓಡಿಸುತ್ತಿದ್ದಳು. ಸಣ್ಣ ಊರಿನ ಬಸ್‌ಸ್ಟ್ಯಾಂಡ್ ಕಂಟ್ರೋಲರ್ ಎಲ್ಲರಿಗೂ ಪರಿಚಿತರಾಗಿದ್ದರಿಂದ ಒಮ್ಮೊಮ್ಮೆ ನಿಲ್ಲಿಸುತ್ತಿದ್ದರು. ಕೆಲವೊಮ್ಮೆ ಬಸ್ಸು ಹೋಗಿಬಿಟ್ಟಿರುತ್ತಿದ್ದವು. ಆಗ ಎಲ್ಲರೂ ಬೈಸಿಕೊಳ್ಳುತ್ತಿದ್ದೆವು.
ಜಯಂತ ಕಾಯ್ಕಿಣಿ ಕೃತಿ “ತಾರಿ ದಂಡೆ”ಯ ಬರಹ ನಿಮ್ಮ ಓದಿಗೆ
