ಬನ್ನಿ ನಾವೆಲ್ಲರೂ ಕಾಣೆಯಾಗೋಣ…: ಕನ್ನಡಕ್ಕೆ ಬಂದ ಮೇರಿ ಆಲಿವರ್ ಕವಿತೆಗಳು
“ನನ್ನ ಚಿತ್ತವನ್ನ ಅನಂತದ ಮೇಲೆ ಇರಿಸಲಿಲ್ಲವೆಂದಾದರೆ ಏನೋ ಸರಿ ಇಲ್ಲ ಅಂತ ಅನ್ನಿಸುವುದು. ಲೋಕದಲ್ಲಿ ನಾನೊಂದು ಪುಟಾಣಿ ಮೊಳೆಯಾಗಬೇಕು, ಪುಟ್ಟದಾದರೂ ಉಪಯೋಗಕ್ಕೆ ಬರುವಂಥದ್ದು. ಎಂದೆಂದಿಗೂ ಈ ತೊರೆಯಲ್ಲಿಯೇ ಇದ್ದು ಬಿಡಬೇಕೆನಿಸುತ್ತದೆ. ಗಾಳಿಮಡಿಲ ಹೂ, ಮುಳ್ಳು ಕಂಟಿಯ ಹೂ, ಬೇಲಿ ಹೂಗಳನ್ನ ತುಂಬು ಗೌರವದಿಂದ ಕಾಣಬೇಕೆನಿಸಿದೆ.”
ಅಮೆರಿಕದ ಕವಯತ್ರಿ ಮೇರಿ ಆಲಿವರ್ ಅವರ ಕೆಲವು ಕವಿತೆಗಳನ್ನು ಚೈತ್ರಾ ಶಿವಯೋಗಿಮಠ ಕನ್ನಡಕ್ಕೆ ತಂದಿದ್ದು “ಆಕಾಶ ನದಿ ಬಯಲು” ಶೀರ್ಷಿಕೆಯಡಿಯಲ್ಲಿ ಸಂಗ್ರಹ ಪ್ರಕಟವಾಗಿದೆ. ಈ ಕೃತಿಯ ಒಂದಷ್ಟು ಕವಿತೆಗಳು ಹಾಗೂ ಮೇರಿ ಆಲಿವರ್ ಪರಿಚಯಾತ್ಮಕ ಪುಟಗಳು ನಿಮ್ಮ ಓದಿಗೆ
