Advertisement

Category: ವ್ಯಕ್ತಿ ವಿಶೇಷ

ಕರೆಯ ನಡುವೆ ನಿಂತು ಹೋದ ದೂರವಾಣಿ

ವಿಜ್ಞಾನ ಬರಹಗಾರ ಡಾ. ಹಾಲ್ದೊಡ್ಡೇರಿ ಸುಧೀಂದ್ರ ಹೊಸ ವಿಷಯಗಳನ್ನು ಕಲಿಯಲು ಸದಾ ಉತ್ಸುಕರಾಗಿರುತ್ತಿದ್ದರು. ಹೊಸತನ್ನು ತಿಳಿಯುವುದಷ್ಟೇ ಅಲ್ಲ, ಅನ್ವಯಿಸಿ ಅದರ ಫಲಿತಾಂಶ ಗಮನಿಸುವ, ಕುತೂಹಲದ ಮನಸ್ಸು ಅವರದ್ದು. ತಾವು ಕಂಡುಕೊಂಡ ವಿಚಾರಗಳನ್ನು ಹಂಚಿಕೊಳ್ಳುವುದರಲ್ಲಿಯೂ ಅವರಿಗೆ ಬಹಳ ಆಸಕ್ತಿ. ಅವರೊಡನೆ ಒಡನಾಡಿದ ಕ್ಷಣಗಳನ್ನು ನೆನಪು ಮಾಡಿಕೊಂಡು, ಬರಹಗಾರ ಟಿ.ಜಿ. ಶ್ರೀನಿಧಿ..”

Read More

ಹಾಲ್ದೊಡ್ಡೇರಿ ತೀರಿಹೋದರು…

ಕನ್ನಡದ ಅಗ್ರಗಣ್ಯ ವಿಜ್ಞಾನ ಬರಹಗಾರ ಹಾಲ್ದೊಡ್ಡೇರಿ ಸುಧೀಂದ್ರ ಇಂದು ನಿಧನರಾಗಿದ್ದಾರೆ. ವಿಜ್ಞಾನದಷ್ಟೇ ಬರವಣಿಗೆಯನ್ನೂ ಅಪಾರವಾಗಿ ಪ್ರೀತಿಸುತ್ತಿದ್ದ ಸುಧೀಂದ್ರ ಅವರಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಅನುಪಮ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ ಪ್ರಕಟಿಸಿತ್ತು. ಆದರೆ ಪ್ರಶಸ್ತಿಯ ಸಂಭ್ರಮಕ್ಕೆ ಕಾಯದೇ ಅವರು ತೆರಳಿದರು. ತೀವ್ರ ಹೃದಯಾಘಾತಕ್ಕೆ ಒಳಗಾದ…”

Read More

ತಿರುಗಿ ಬಾರದ ಸಂಚಾರಿಯ ಕುರಿತು

ಏನೇ ಆದರೂ ಒಂದು ವಿಚಾರವಂತೂ ಸ್ಪಷ್ಟ ಮತ್ತು ವ್ಯಕ್ತ. ವಿಜಯ್ ಅವರ ಗೆಳೆಯರೊಬ್ಬರು ವಿಜಯ್ ಅವರನ್ನು ‘ಮಗು’ ಅಂತ ಕರೆದಾಗ ಅದು ನನಗೆ ಉತ್ಪ್ರೇಕ್ಷೆ ಅನಿಸಿತ್ತು. ಆದರೆ ವಿಜಯ್ ಫೋನಲ್ಲಿ ನನ್ನ ದೀರ್ಘ ಪ್ರಶ್ನೆಗಳಿಗೆ ನಗುತ್ತಿದ್ದ ಬಗೆ ನೆನೆಸಿಕೊಂಡರೆ ಮಗುವಿನ ನಗೆಯ ಶಬ್ದವೇ ತಾಳೆಯಾಗುತ್ತಿದೆ. ನಾನು ಬಿಲ್ಲು ಬಾಣ ಕೆಳಗಿರಿಸಿ ನಮ್ರತೆಯಿಂದ ಕೈ ಮುಗಿಯುತ್ತಿದ್ದೇನೆ.
ಅಗಲಿದ ಮೇರು ನಟ ಸಂಚಾರಿ ವಿಜಯ್ ಕುರಿತು..

Read More

ಮೊಗಳ್ಳಿ ನೆನಪಿನಲ್ಲಿ ಸಿದ್ಧಲಿಂಗಯ್ಯ

‘ಚಾಪ್ಸ್ ಅಂದ್ರೆನೇ ಅಂಗೆ.. ಬೋನ್ ಬಿಡಿಸಿಕೊಂಡು ತಿನ್ನಬೇಕೂ’ ಎನ್ನುತ್ತ, ಮೊಮ್ಮಕ್ಕಳನ್ನು ಕೂರಿಸಿಕೊಂಡು ತಾತ ಒಂದೇ ತಟ್ಟೆಯಲ್ಲಿ ಮಕ್ಕಳಿಗೆ ತಿನ್ನುವುದನ್ನು ಕಲಿಸುವಂತೆ ಆ ದಪ್ಪ ಚಾಪ್ಸ್ ಎತ್ತಿಕೊಂಡು ಬಿಡಿಸಿ ಬಿಡಿಸಿ ದವಡೆಯಲ್ಲಿಟ್ಟು ಗಸಗಸನೇ ಅಗಿದು ಮಸೆದು ನುಂಗಿ, ‘ಹೀಗೆ ತಿನ್ನಬೇಕು’ ಎಂದರು. ನಿಷ್ಕಲ್ಮಷವಾದ ಅವರ ಪ್ರೀತಿ, ಅಂತಃಕರಣ, ಸಜ್ಜನಿಕೆ, ಪ್ರಾಮಾಣಿಕತೆ ಬಹಳ ಅಪರೂಪವಾದುದು. ಡಾ. ಸಿದ್ಧಲಿಂಗಯ್ಯ ಅವರೊಂದಿಗಿನ ಒಡನಾಟದ ಕುರಿತು ಕಥೆಗಾರ ಮೊಗಳ್ಳಿ ಗಣೇಶ್ ಆಪ್ತ ಬರಹ.  

Read More

ಸಿದ್ಧಲಿಂಗಯ್ಯ ನೆನಪಿಗೆ ಊರುಕೇರಿಯ ಪುಟಗಳು

ಕನ್ನಡದ ಊರು ಕೇರಿಯ ಕವಿ ಸಿದ್ದಲಿಂಗಯ್ಯ ತೀರಿಹೋಗಿದ್ದಾರೆ. ತಾನೊಬ್ಬ ಖ್ಯಾತ ಕವಿ ಎಂಬ ಯಾವ ಹಮ್ಮೂ ಇಲ್ಲದೆ ಸಹಜವಾಗಿ ಜೋಕುಗಳನ್ನು ಹಾರಿಸುತ್ತಾ ಬದುಕಿದ್ದ ಸಿದ್ದಲಿಂಗಯ್ಯ ಅಧಿಕಾರಗಳನ್ನು ಅನುಭವಿಸಿದಷ್ಟೇ ಸಹಜವಾಗಿ ಸರಳತೆಯನ್ನೂ ರೂಡಿಸಿಕೊಂಡಿದ್ದರು. ಬೆಂಗಳೂರಿನ ದಲಿತ ಕೇರಿಯೊಂದರ ಸ್ಮಶಾನದ ಕಲ್ಲುಗಳನ್ನೇ ತನ್ನ ಕಾವ್ಯಕೃಷಿಯ ಸೋಪಾನಗಳಂತೆ ಬಳಸಿಕೊಳ್ಳಬಲ್ಲ ಹುಟ್ಟಾ ಸೃಜನಶೀಲತೆಯ ಜೊತೆಜೊತೆಗೇ ಸಿಟ್ಟನ್ನು, ಪ್ರತಿಭಟನೆಯನ್ನು…”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ