ಉಪ್ಪನ್ನು ಹೀರಿಕೊಂಡ ನೀರಿನಂಥ ಕತೆಗಳು: ಮುನವ್ವರ್ ಕಥಾಸಂಕಲನಕ್ಕೆ ವಿನಾಯಕ ಅರಳಸುರಳಿ ಮುನ್ನುಡಿ
ಎಲ್ಲರೂ ಅರ್ಥವಾದಂತೆ ನಟಿಸುವ ಆದರೆ ನಿಜದಲ್ಲಿ ಸಂಕೀರ್ಣ ಸಮೀಕರಣದಂತಿರುವ ಬಡತನವೆನ್ನುವ ಬಾಳೆ ದಿಂಡಿನ ತಿರುಳನ್ನು ಪದರ ಪದರವಾಗಿ ಬಿಚ್ಚಿಟ್ಟು ‘ಇದು ಜಗತ್ತು, ಇದೇ ಜಗತ್ತು’ ಎಂದು ದಿಟ್ಟವಾಗಿ ಹೇಳುವ ಗಟ್ಟಿತನ ಇಲ್ಲಿನ ಹಲವು ಕಥೆಗಳಲ್ಲಿದೆ. ಬಲ್ಬಿಗೆ ಬೆಳಕನ್ನು ತಲುಪಿಸುವ ತಂತಿಯ ವಿದ್ಯುತ್ತಿನಲ್ಲೇ ಪ್ರಾಣ ತೆಗೆಯುವ ಕರೆಂಟೂ ಇದೆ. ದುರಂತವೆಂದರೆ ನಮ್ಮ ಸಮಾಜದ ಕತ್ತಲನ್ನು ಹೋಗಲಾಡಿಸಲು ಕಂಡು ಹಿಡಿದ ನಾನಾ ಕರೆಂಟುಗಳು ಇಲ್ಲಿಯ ತನಕ ಬೆಳಕು ಕೊಟ್ಟಿದ್ದಕ್ಕಿಂತ ಪ್ರಾಣ ತೆಗೆದಿದ್ದೇ ಹೆಚ್ಚು ಎನ್ನುವ ಸೂಕ್ಷ್ಮವನ್ನು ಉಪ್ಪನ್ನು ಹೀರಿಕೊಂಡ ನೀರಿನಂತೆ ಇಲ್ಲಿನ ಕಥೆಗಳು ಕರಗಿಸಿಕೊಂಡಿವೆ.
ಮುನವ್ವರ್ ಜೋಗಿಬೆಟ್ಟು ಹೊಸ ಕಥಾಸಂಕಲನ “ಟಚ್ ಮೀ ನಾಟ್”ಕ್ಕೆ ವಿನಾಯಕ ಅರಳಸುರಳಿ ಮುನ್ನುಡಿ
