ವೈಜ್ಞಾನಿಕ ಕೌತುಕದ ಬೆರಗನ್ನು ಎಚ್ಚರಿಸುವ “ವಿಲಕ್ಷಣ ಜಲಜಾಲ”: ನಾರಾಯಣ ಯಾಜಿ
ನೀರೆನ್ನುವ ಅಪೂರ್ವ ವಸ್ತು ಈ ಪ್ರಕೃತಿಯಲ್ಲಿ ಸೃಷ್ಟಿಯ ಕಾಲದಿಂದಲೂ ಇದೆ. ಮುಂದೆಯೂ ಇರಲಿದೆ. ಆದರೆ ಅದರಗುಣಮಟ್ಟವನ್ನು ಕಾಪಾಡಿ ಬದುಕುವುದು ಮತ್ತು ಭುವಿಯ ಮೇಲಿನ ಜೀವ ಸಂಕುಲನವನ್ನು ಡೈನೋಸಾರಸ್‌ಗಳಂತೆ ನಾಶವಾಗಿ ಹೋಗದಂತೆ ಮಾಡುವಲ್ಲಿ ಮಾನವರ ಪಾತ್ರದ ಕುರಿತು ಅವರು ಈ ಕೃತಿಯ ಮೂಲಕ ಗಮನ ಸೆಳೆಯುತ್ತಾರೆ. ಕೃತಿಯೊಂದು ಜನರನ್ನು ತಲುಪಲು ಭಾಷೆ ಮತ್ತು ಶೈಲಿ ಬಲು ಮುಖ್ಯ. ಈ ಎರಡರಲ್ಲಿಯೂ ಸಾಗರ್ ಅವರದು ಎತ್ತಿದ ಕೈ.
ಡಾ. ಡಿ. ಎಂ. ಸಾಗರ್ ಬರೆದ “ವಿಲಕ್ಷಣ ಜಲಜಾಲ” ಕೃತಿಯ ಕುರಿತು ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ
