Advertisement

Category: ವ್ಯಕ್ತಿ ವಿಶೇಷ

ಗಿರೀಶ್ ಪರಂಗೋಡು ಇನ್ನಿಲ್ಲ…

ಹವ್ಯಾಸಿ ತಾಳಮದ್ದಲೆ ವಾದಕರಾಗಿ ಪ್ರಸಿದ್ಧರಾಗಿದ್ದ ಗಿರೀಶ್‌ ಪರಂಗೋಡು ಎರಡು ದಿನಗಳ ಹಿಂದಷ್ಟೇ ನಿಧನ ಹೊಂದಿದರು. ಅವರೊಂದಿಗಿನ ಒಡನಾಟದ ಕುರಿತು ಅವರ ಆಪ್ತ ಸ್ನೇಹಿತರಾದ ಗಣೇಶ್ ಭಟ್ ಬಾಯಾರು ಬರಹ…

Read More

ಮೆಲ್ಲಗೆ ಗದರುವ ನನ್ನ ಅಪರ್ಣೇ…: ನಾಗರಾಜ ವಸ್ತಾರೆ ಬರಹ

ಸಮಾರಂಭದ ಬಳಿಕ ಇವಳ ಬದಿಯಲ್ಲಿ ನಾನು ಕಾರಿನತ್ತ ಸರಿಯುತ್ತಿರುವಾಗ ಮುಖ್ಯಮಂತ್ರಿಗಳ ಕಾರು ನಮ್ಮನ್ನು ಬಳಸಿತು. ಇವಳನ್ನು ನೋಡಿದ್ದೇ ಅವರು ಕಾರು ನಿಲ್ಲಿಸಲು ಹೇಳಿ, ಇಳಿದು ಅವತ್ತಿನ ನಿರೂಪಣೆಯನ್ನು ಹೊಗಳಿದರು. ಸುಮಾರು ಹತ್ತು ನಿಮಿಷ. ಸುಮ್ಮನೆ ಶ್ರೋತೃವಾದೆ. ಬೀಳ್ಕೊಡುವಾಗ- ಸರ್, ಇವರು ನನ್ನ ಹಸ್ಬೆಂಡ್ ಅಂತ ಪರಿಚಯಿಸಿದಳು.
ನೆನ್ನೆ ರಾತ್ರಿ ತೀರಿಕೊಂಡ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಕುರಿತು ಅವರ ಪತಿ, ಕತೆಗಾರ ನಾಗರಾಜ ವಸ್ತಾರೆ ಬರೆದಿದ್ದ ಬರಹವೊಂದು ನಿಮ್ಮ ಓದಿಗೆ

Read More

ಶ್ರುತಿ ಬಿ.ಆರ್. ಗೆ ಲಭಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ‘ಯುವ ಪುರಸ್ಕಾರ’

ಚಿಕ್ಕಂದಿನಿಂದ ಅಮ್ಮ ತರೀಕೆರೆಯ ಸಾರ್ವಜನಿಕ ಗ್ರಂಥಾಲಯದಿಂದ ತಂದು ಕೊಡುತ್ತಿದ್ದ ಮಕ್ಕಳ ಪುಸ್ತಕಗಳನ್ನು, ಮನೆಗೆ ತರಿಸುತ್ತಿದ್ದ ಚಂಪಕ, ಬಾಲಮಂಗಳ ಮಾಸಿಕಗಳು, ಪ್ರಜಾವಾಣಿ ಮತ್ತು ಮಯೂರದಲ್ಲಿ ಬರುತ್ತಿದ್ದ ಮಕ್ಕಳ ಕತೆಗಳು, ಪುಟ್ಟಿ ರಾಮನ್ ಮುಂತಾದ ಕಾರ್ಟೂನ್‌ಗಳನ್ನು ನಾನು ನನ್ನ ಅಕ್ಕ ಪೈಪೋಟಿಯಲ್ಲಿ ಓದುತ್ತಿದ್ದೆವು, ಅದೇ ಪೈಪೋಟಿ ಮುಂದುವರೆದು ಸುಧಾದಲ್ಲಿ ಬರುತ್ತಿದ್ದ ಧಾರಾವಾಹಿಗಳು ಮತ್ತು ಹೊಸ ಪುಸ್ತಕಗಳನ್ನು ಮೊದಲು ಓದಲು ಜಗಳವಾಡುತ್ತಿದ್ದೆವು.

Read More

ಪಂ. ರಾಜೀವ ತಾರಾನಾಥರ ಬದುಕಿನ ಕೆಲವು ಪುಟಗಳು…

ಇನ್ನೊಮ್ಮೆ ಗುರುಗಳನ್ನು ಗರುಡನಿಗೆ ಹೋಲಿಸಿದ್ದರು. “ಆಕಾಶದಲ್ಲಿ ಗರುಡ ಒಂದೇ ಮೇಲೆ ಹಾರ್ತಾ ಇರುತ್ತದೆ. ಅದಕ್ಕೆ ತಾನು ಎಲ್ಲರಿಗಿಂತ ಮೇಲೆ ಹಾರ‍್ತೀನಿ ಅಂತಿಲ್ಲ ಅಥವಾ ಹಾಗೆ ಹಾರಬೇಕೆಂಬ ಸ್ಪರ್ಧೆಯೂ ಇಲ್ಲ. ಎಲ್ಲ ಹಕ್ಕಿಗಳಿಗಿಂತ ಮೇಲೆ ಹಾರೋದು ಅದರ ಸಹಜ ಗುಣ…
ಪಂಡಿತ್‌ ರಾಜೀವ ತಾರಾನಾಥರ ಸಂಗೀತ-ಜೀವನದ ಕುರಿತು ಕತೆಗಾರ್ತಿ ಸುಮಂಗಲಾ ಬರಹ

Read More

ಅಪ್ಪಯ್ಯ ಎಂದರೆ….: ಇಂದಿರಾ ಜಾನಕಿ ಎಸ್. ಶರ್ಮ ಬರಹ

ಒಂದುದಿನ ಅಪ್ಪಯ್ಯ ‘ಚಂದಮಾಮ’ ಪುಸ್ತಕ ಓದುತ್ತಿದ್ದಾಗ ಬಂದ ಪರಿಚಿತರೊಬ್ಬರು …… ನೀವೂ ಚಂದಮಾಮ ಓದ್ತೀರಾ…?” ಎಂದು ಆಶ್ಚರ್ಯದಿಂದ ಕೇಳಿದ್ದರು. ಆಗ ಅಪ್ಪಯ್ಯ …. ಯಾರ ಮನೆ ಹಾಳುಮಾಡುವುದು… ಎಂದು ಯೋಚಿಸುವುದಕ್ಕಿಂತ ಚಂದಮಾಮ ಓದುವುದೇ ಒಳ್ಳೆದಲ್ವೋ…..!” ಅಂತ ಹೇಳಿದ್ದರು.
ಲೇಖಕ-ಪ್ರವಚನಕಾರ-ಯಕ್ಷಗಾನ ಕಲಾವಿದರೂ ಆಗಿದ್ದ ದೇರಾಜೆ ಸೀತಾರಾಮಯ್ಯನವರ ಮಗಳು ಇಂದಿರಾ ಜಾನಕಿ ಎಸ್. ಶರ್ಮ ತಮ್ಮ ತಂದೆಯ ಕುರಿತು ಹಂಚಿಕೊಂಡ ಕೆಲವು ನೆನಪುಗಳು…

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ