ನನಸಾಗದ ಕನಸುಗಳು: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ
ವಿಜಯ ಮತ್ತು ಅಯ್ಯಪ್ಪನಿಗೆ ವಿಷಯದ ಗಾತ್ರ ಅರ್ಥವಾಯಿತು. ಕನಕ ಟೀ ಮಾಡಿಕೊಟ್ಟು ಕುಡಿದರು. ಅಷ್ಟರಲ್ಲಿ ಮಣಿ ಬಂದ. ಸಮತಿಯನ್ನು ಕರೆದು ಒಂದು ತಟ್ಟೆಯಲ್ಲಿ ತೆಂಗಿನಕಾಯಿ ಜೊತೆಗೆ ಎಲ್ಲವನ್ನು ಇಟ್ಟು ಕೊಟ್ಟಳು. ವಿಜಯ ತೆಗೆದುಕೊಳ್ಳುತ್ತ ಈಹೊತ್ತಿನಿಂದ “ನೀವು ನಾವು ನೆಂಟರಾದೆವು” ಎಂದಳು. ಸುಮತಿ ಎಲ್ಲವನ್ನೂ ಒಂದು ಸಣ್ಣ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಟ್ಟಳು. ವಿಜಯ, ಸುಮತಿಯನ್ನು ನೋಡುತ್ತ ಮನಸ್ಸಿನಲ್ಲಿ ಏನೋ ಲೆಕ್ಕಾಚಾರ ಹಾಕಿಕೊಳ್ಳುತ್ತಾ ಹಾಗೇ ಕುಳಿತುಕೊಂಡಿದ್ದಳು. ಅಯ್ಯಪ್ಪ, “ಹೋಗೋಣವ?” ಎಂದ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಹದಿನೈದನೆಯ ಕಂತು ನಿಮ್ಮ ಓದಿಗೆ
