Advertisement

Category: ಸಾಹಿತ್ಯ

ಕೂರಾಪುರಾಣ ೧೨: ಹಿಡಿ ಪ್ರೀತಿಗೆ ಹಂಬಲಿಸುತ್ತ, ಹೃದಯ ಕರಗುವಷ್ಟು ಪ್ರೀತಿಸುತ್ತ..

ಬೆನ್ನು ಸವರತೊಡಗಿದರೆ ಅಡ್ಡ ಬಿದ್ದು ಹೊಟ್ಟೆಯನ್ನು ಕೆರೆ ಎಂಬಂತೆ ಮುಂದಿನ ಎರಡು ಕಾಲುಗಳನ್ನು ಮಡಚಿದಾಗ ಮುದ್ದುಕ್ಕದೇ ಹೇಗೆ ಸಾಧ್ಯ? ಒಂದು ವೇಳೆ ನಾನು ಏಳುವುದು ತಡವಾದರೆ ನನ್ನ ಹಾಸಿಗೆಯ ಪಕ್ಕದಲ್ಲಿ ಬಂದು ಬಾಲ‌ ಅಲ್ಲಾಡಿಸುತ್ತ ಕೂತು ಬಿಡುತ್ತಿದ್ದ. ಬೆಳಿಗ್ಗೆ ಎದ್ದ ಕೂಡಲೇ ಇವನದೇ ದಿವ್ಯದರ್ಶನ. ಈಗ ಹಾಗಿಲ್ಲ, ದೊಡ್ಡವನಾಗಿದ್ದಾನೆ. ಎದ್ದು ತನ್ನ ಕೆಲಸಗಳತ್ತ ಗಮನ ಕೊಡುತ್ತಾನೆ. ಆದರೆ ಆಗಾಗ ಮೈ ಕೆರೆಸಿಕೊಳ್ಳುವುದು, ಕಿವಿಗಳನ್ನು ಮಸಾಜ್ ಮಾಡಿಸಿಕೊಳ್ಳುವುದನ್ನು ಬಿಟ್ಟಿಲ್ಲ. ನಾವಷ್ಟೇ ಅಲ್ಲ, ನಮ್ಮ ಮನೆಗೆ ಯಾರೇ ಬಂದರೂ ಅವರು ಸಹ ಅದನ್ನೆಲ್ಲ ಮಾಡಲೇಬೇಕು.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿ

Read More

ವೀರೇಶ ಶಿವಲಿಂಗಪ್ಪ ಸಜ್ಜನ ಬರೆದ ಈ ಭಾನುವಾರದ ಕತೆ

ವೃದ್ಧಾಶ್ರಮದ ಅಂಗಳ ತಮ್ಮ ಮನೆ. ಆವತ್ತು ಭಾವನಾಳೊಡನೆ ಮನೆ ಬಿಟ್ಟು ಹೋಗುವಾಗ ಅಪ್ಪ ಆರಾಮ ಕುರ್ಚಿಯ ಮೇಲೆ ನಿರ್ಲಿಪ್ತವಾಗಿ ಕೂತಿದ್ದರು. ಅಮ್ಮ ಕಣ್ಣಿನಲ್ಲಿ ನೀರು ತುಂಬಿಕೊಂಡು ನೋಡುತ್ತ ನಿಂತಿದ್ದರು. ಹದಿಮೂರು ಜನ ವೃದ್ಧ-ವೃದ್ಧೆಯರೂ ನಮ್ಮನ್ನೆ ನೋಡುತ್ತ ನಿಂತಿದ್ದರು. ಏಕೋ ನನ್ನಲ್ಲಿ ಅಳುಕು. ಭಾವನಾ ಸರಸರನೇ ಹೆಜ್ಜೆ ಹಾಕಿ ಕಾರಿನಲ್ಲಿ ಕುಳಿತುಬಿಟ್ಟಿದ್ದಳು. ಲಚ್ಚಿ ಆಗ ಗರ್ಭಿಣಿ. ನನ್ನೆಡೆಗೆ ದುರದುರನೆ ದಿಟ್ಟಿಸುತ್ತಿದ್ದಳು.
ವೀರೇಶ ಶಿವಲಿಂಗಪ್ಪ ಸಜ್ಜನ ಬರೆದ ಈ ಭಾನುವಾರದ ಕತೆ “ಕ್ಕೊ ಕ್ಕೊ ಕ್ಕೊ…” ನಿಮ್ಮ ಓದಿಗೆ

Read More

ಸ್ಫೋಟಕ್ಕೆ ಬಲಿಯಾದ ಬದುಕು..: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಸೆಲ್ವಮ್ ದೇಹದ ಹತ್ತಿರ ಕನಕ, ಮಣಿ ಮತ್ತು ಸುಮತಿ ನಿಂತುಕೊಂಡು ರೋದನೆ ಮಾಡುತ್ತಿದ್ದರು. ಸಾರ್ವಜನಿಕರು, ಕಾರ್ಮಿಕರು, ಅಧಿಕಾರಿಗಳು ಎಲ್ಲರೂ ಬಂದು ಸತ್ತವರಿಗೆ ಹೂಮಾಲೆಗಳನ್ನು ಅರ್ಪಿಸಿದರು. ಹೂಮಾಲೆಗಳು ಎತ್ತಿನ ಬಂಡಿಗಳು ತುಂಬುವಷ್ಟು ಬಿದ್ದಿದ್ದವು. ಕೊನೆಗೆ ಐದೂ ಮೃತ ದೇಹಗಳನ್ನು ಮೂರು ವ್ಯಾನ್‌ಗಳಲ್ಲಿ ಹಾಕಿಕೊಂಡು ಕುಪ್ಪಂ ರಸ್ತೆಯಲ್ಲಿ ರೋಜರಸ್ ಕ್ಯಾಂಪ್ ಹತ್ತಿರ ಇರುವ ಗಣಿ ಕಾರ್ಮಿಕರ ಸಮಾಧಿ ಕಡೆಗೆ ಮೆರವಣಿಗೆಯಲ್ಲಿ ಹೋಗಿ ಗೌರವಪೂರ್ವಕವಾಗಿ ಅವರವರ ಕುಟುಂಬಗಳಿದ್ದ ಸಮಾಧಿಗಳ ಮಧ್ಯೆ ಸಮಾಧಿ ಮಾಡಲಾಯಿತು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಶ್ರೀನಾಥ್ ರಾಯಸಂ ಕತೆ

ಹಾಲುಸೇವೆ ಮುಗಿಸಿಕೊಂಡು ಗೋಪಾಲಿ ನಾಗೇನಹಳ್ಳಿಗೆ ಮರಳುತ್ತಾನೆ ಎಂದು ನಂಬಿಕೆಯೇ ಇಟ್ಟುಕೊಂಡಿರದ ಜನಕ್ಕೆ ಆಗಬಾರದಷ್ಟು ನಿರಾಶೆಯಾಯಿತು. ‘ಇಂಥ ಪಾಖಂಡಿಯೊಬ್ಬ ಹಾಲುಸೇವೆ ಮಾಡಿ ಮರಳಿಬರುತ್ತಾನೆ ಅಂದರೆ ಅದರರ್ಥ ಏನು?’ ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಏಕಕಾಲಕ್ಕೆ ಮೂಡಿತು. ಸತ್ಯವಂತದೇವರಾದ ನಾಗಲಿಂಗಸ್ವಾಮಿ ಗೋಪಾಲಿಯಂಥ ಅಪವಿತ್ರ ದೇಹಿಯಿಂದ ಸ್ಪರ್ಷಕ್ಕೆ ಒಳಗಾಗಿ ಅದ್ಹೇಗೆ ಪರಿಣಾಮ ತೋರಿಸಲಿಲ್ಲ? ಸಾಯುವ ಘಳಿಗೆಯಲ್ಲಿ ಗುರುಶಾಂತಯ್ಯನವರು ಹಾಗೇಕೆ ಎಚ್ಚರಿಸುವ ದನಿಯಲ್ಲಿ, ಶಾಪ ಹಾಕುವ ರೀತಿಯಲ್ಲಿ ನುಡಿದರು?
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಶ್ರೀನಾಥ್ ರಾಯಸಂ ಕತೆ “ಹಾಲುಸೇವೆ” ನಿಮ್ಮ ಓದಿಗೆ

Read More

ಮನುಷ್ಯನ ಪ್ರಸ್ತಾಪನೆ ದೇವರ ನಿರಾಕರಣೆ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಮಣಿ ಅವಳನ್ನು ತಬ್ಬಿಕೊಂಡು ಮಲಗೇ ಇದ್ದನು. ಸೆಲ್ವಿ, “ಇದಕ್ಕೆ ನಾನು, ನಿನ್ನನ್ನು ಹತ್ತಿರಕ್ಕೆ ಸೇರಿಸ್ತಾಇರಲಿಲ್ಲ” ಎಂದಳು. ಆದರೆ ಅವನು ಅವಳನ್ನು ಬಿಡಲಿಲ್ಲ. ಸೆಲ್ವಿ ಮಣಿಯಿಂದ ಬಿಡಿಸಿಕೊಳ್ಳಲು ಹರಸಾಹಸ ಮಾಡಬೇಕಾಯಿತು. ಸೆಲ್ವಿ ಮತ್ತೆ, “ನಿನ್ನನ್ನ ಮನೆಗೆ ಸೇರಿಸಿಕೊಂಡಿದ್ದೆ ತಪ್ಪಾಯಿತು” ಎಂದು ಅವನಿಂದ ಬಿಡಿಸಿಕೊಂಡು ಎದ್ದು ಬಾಗಿಲನ್ನು ನಿಧಾನವಾಗಿ ತೆರೆದು ಹೊರಕ್ಕೆ ನೋಡಿದಳು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ