Advertisement

Category: ಸಾಹಿತ್ಯ

ಒಂದು ಕೊನೇ ರೌಂಡು…: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಸ್ವಾಮಿಗೆ ದುಃಖ ತಡೆದುಕೊಳ್ಳಲು ಆಗಲಿಲ್ಲ. ಮಣಿ, “ಕಾರ್ ಚೆನ್ನಾಗಿದೆ. ತಿಂಡಿ ತಿಂದ ಮೇಲೆ ನನ್ನನ್ನು ಒಂದು ರೌಂಡ್ ಹಾಕಪ್ಪ ಸ್ವಾಮಿ” ಎಂದಿದ್ದು ಸ್ವಾಮಿ, “ಅದೇನು ದೊಡ್ಡ ವಿಷಯ. ಒಂದಲ್ಲ ಎರಡು ರೌಂಡ್ ಹಾಕೋಣ ಬಿಡು” ಎಂಬ ಮಾತುಗಳು ಜ್ಞಾಪಕಕ್ಕೆ ಬಂದವು. ಸ್ವಾಮಿ ಕೈಕೈ ಹಿಸುಕಿಕೊಂಡು ನನ್ನಿಂದ ಅಪಾರಾಧ ನಡೆದು ಹೋಯಿತಲ್ಲ ಎಂದುಕೊಳ್ಳುತ್ತ.. ಸ್ವಾಮಿ, “ದೇವರೆ ಈ ದಿನ ಬೆಳಿಗ್ಗೆ ನನ್ನನ್ನು ಯಾಕಪ್ಪ ಇಲ್ಲಿಗೆ ಕರೆದುಕೊಂಡು ಬಂದೆ?” ಎಂದು ಅಳತೊಡಗಿದರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಕೊನೆಯ ಕಂತು

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಉದ್ಯಾವರ ಮಾಧವ ಆಚಾರ್ಯ ಕತೆ

ಹಳ್ಳಿಕೊಂಪೆಯ ಮೂಲಮನೆಯ ಕಾಲ ಗರ್ಭದ ಹಿಂದಿನ ದಿನಗಳಲ್ಲಿ ಯಾರ‍್ಯಾರೋ ಹಿರಿಯರು ಕಾಲವಾದಾಗ ಹೇಳಿಸುತ್ತಿದ್ದ ಗರುಡಪುರಾಣದ ವಿವರಗಳೆಲ್ಲ ಇಲ್ಲಿ ಈಗ ಜೀವನದಲ್ಲಿ ಮೊದಲ ಅನುಭವವಾಗಿ ಬಾಲ್ಕನಿಯಲ್ಲಿ ನಿಂತು ಹೊಸ ಬದುಕಿನ ಹುಡುಕಾಟವನ್ನು ನಡೆಸುತ್ತಿದ್ದ ಗಂಗಮತ್ತೆಯ ನೆನಪಿಗೆ ಬಂದು ನಿಜವೆನಿಸತೊಡಗುತ್ತಿದ್ದಂತೆ ಒಂದು ದಿನ ಪಕ್ಕದ ಫ್ಲಾಟಿನ ವಿರಸ ದಾಂಪತ್ಯದ ಸಾಫ್ಟ್ವೇರ್ ಉದ್ಯೋಗದ ಎಳೆಯ ತರುಣಿ ತನ್ನ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿ ಅಂತ್ಯವನ್ನು ಕಂಡಾಗ….
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಉದ್ಯಾವರ ಮಾಧವ ಆಚಾರ್ಯ ಕತೆ “ಮಹಾಪ್ರಸ್ಥಾನ”

Read More

ಆನಂದ ಭೋವಿ ಬರೆದ ಈ ಭಾನುವಾರದ ಕತೆ

ಅದ್ಯಾವ ಪುಣ್ಯಾತಗಿತ್ತಿ ಅಬ್ಬರಿಸಿದಳೋ ಗೊತ್ತಿಲ್ಲ “ಯಲ್ಲವ್ವ ಬಂಗಾರದ ಮಳೆ ಹರಸಾಕತ್ತಾಳ ಯಾರಿಗೆ ಸಿಗತೈತಿ ಅವರ ಬಾಳು ಬಂಗಾರ ಆಗತೈತಿ” ಇದೊಂದು ಮಾತು ಬರಸಿಡಿಲು ಬಡಿದಂಗ ಆತು. ಸೀಟಿನ ಚಿಂತ್ಯಾಗ ಮುಕರಿಬಿದ್ದಿದ್ದ ಮಂದಿ ಹುಯ್ಯಂತ ಮ್ಯಾಲಕ್ಕೆತ್ತು. ಅವಳು ಇವಳು ಯಾರಿಗೂ ಯಾರು ಕಾಣಲಿಲ್ಲ. ಹಾರಾಡಿ ಬೀಳುತ್ತಿದ್ದ ಸರದ ಗುಂಡು ಆರಿಸಲಿಕ್ಕ ಮುಗಿಬಿದ್ದರು. ಅವರ ಮ್ಯಾಲ ಇವರು ಇವರ ಮ್ಯಾಲ ಅವರು ನೋಡ ನೋಡುವದ್ರೊಳಗ ಕಾಲ್ತುಳಿದ ಗದ್ದಲ ಬಸ್ಸನ್ನು ನುಂಗಿಕೊಂಡಿತು. ಬಿಸಲಿನ ಜಳದೊಳಗ ರಕ್ತದ ವಾಸನೆ ಬಡಿಯತೊಡಗಿತು.
ಆನಂದ ಭೋವಿ ಬರೆದ ಈ ಭಾನುವಾರದ ಕತೆ “ದೇವರಿಗೂ ಒಂದು ಟಿಕಿಟು”

Read More

ಗಣಿ ಇತಿಹಾಸದ ಪುಸ್ತಕ ಸೇರಿಕೊಂಡ ಮಣಿಯ ಸಿಲಿಕೋಸಿಸ್ ಸಾವು: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಮಣಿ, “ಸ್ವಾಮಿ ಇಲ್ಲೇ ಹುಟ್ಟಿದ್ದು. ಇಲ್ಲೇ ಸಾಯುವುದು. ಆ ಕಾಲದಲ್ಲಿ ನಾವು ಮೈನಿಂಗ್ ಕಾಲೋನಿಗಳನ್ನು ಬಿಟ್ಟು ಹೊರಕ್ಕೆ ಹೋಗ್ತಾ ಇರಲಿಲ್ಲ. ಈಗ ಆಗಲ್ಲವಲ್ಲ. ಕಾಲೋನಿಗಳಲ್ಲಿ ಇರುವವರೆಲ್ಲ ಕನ್ನಡ ಮಾತಾಡ್ತಾರೆ. ಕನ್ನಡ ಕಲಿತುಕೊಂಡಿದ್ದಾರೆ. ಸಾವಿರಾರು ಜನ ಬೆಂಗಳೂರಿನಲ್ಲಿ ಸೆಟ್ಲ್ ಆಗಿದ್ದಾರೆ. ಅದೇ ರೀತಿ ಸಾವಿರಾರು ಹೆಣ್ಣುಮಕ್ಕಳು ಗಂಡುಮಕ್ಕಳು ಕೆಜಿಎಫ್‌ನಿಂದ ಬೆಂಗಳೂರಿಗೆ ದಿನನಿತ್ಯ ರೈಲ್‌ಗಳಲ್ಲಿ ಕೆಲಸಕ್ಕೆ ಹೋಗಿಬರ್ತಾರೆ. ಕಾಲ ಬದಲಾಗಿದೆ ಸ್ವಾಮಿ” ಎಂದ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ತೇಳನೆಯ ಕಂತು ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಉಮಾ ರಾವ್‌ ಬರೆದ ಕತೆ

ಎಂಟುಗಂಟೆಗೆ ಕೆಲಸದವಳು ಬಂದಾಗಲೂ ಬಾಗಿಲು ತೆರೆದ ಕೂಡಲೇ ಅದೇ ದೃಶ್ಯ. ಜೊತೆಗೆ ಅವನ ಮನೆ ಬಾಗಿಲು ತೆಗೆದಾಗ ಹಾಲಿನಲ್ಲಿ ಕಣ್ಣಿಗೆ ಬೀಳುತ್ತಿದ್ದ ನೀರಿನ ಹೂಜಿ, ಹಾಸಿದ ಚಾಪೆ, ಮುಂದೆ ದೇವರಪಟ ಎಲ್ಲಾ ನಾಪತ್ತೆ. ಕೆಲಸದವಳನ್ನು ಮುಂದೆ ಮಾಡಿಕೊಂಡು ಒಂದೆರಡು ಹೆಜ್ಜೆ ಒಳಗೆ ಹೋದಾಗ ಮನೆ ಖಾಲಿಯಾಗಿರುವುದು ಅರಿವಾಯಿತು. ತಕ್ಷಣ ಇವರು ಇಂಟರ್‌ಕಾಮ್‌ನಲ್ಲಿ ಸೆಕ್ಯೂರಿಟಿಯವನಿಗೂ, ರಾಧಾಕೃಷ್ಣನ್‌ಗೂ ಹೇಳಿದರು. ಎಲ್ಲಾ ತಕ್ಷಣ ಓಡಿ ಬಂದರು.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಉಮಾ ರಾವ್‌ ಬರೆದ ಕತೆ “ಹಾವಾಡಿಗ”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ