Advertisement

Category: ಸಾಹಿತ್ಯ

ಕನಸಿನಲ್ಲೂ ಬಯಸದ ಒಂದು ಭೀಕರ ಅಪಘಾತ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಮೊದಲನೇ ಹಂತದಲ್ಲಿ ಅದಿರು ದೊರಕಲಿಲ್ಲವೆಂದರೆ ಎರಡನೇ ಹಂತಕ್ಕೆ ಅಂದರೆ ಮತ್ತೆ ನೂರು ಅಡಿಗಳ ಆಳಕ್ಕೆ ಇಳಿದು ಅಲ್ಲಿನ ಸುರಂಗಗಳಲ್ಲಿ ನಡೆದುಹೋಗಿ ಚಿನ್ನದ ಅದಿರಿನ ಕಲ್ಲುಗಳನ್ನು ಹುಡುಕಿ ಹೊಡೆದು ತರಬೇಕಾಗಿತ್ತು. ಸುರಂಗಗಳಲ್ಲಿ ಗಾಳಿ ತೀರಾ ಕಡಿಮೆ ಇದ್ದು ಸಂಪೂರ್ಣವಾಗಿ ಕತ್ತಲೇ ತುಂಬಿಕೊಂಡಿರುತ್ತದೆ. ಸುರಂಗಗಳಲ್ಲಿ ಹಳ್ಳ-ಕೊಳ್ಳ ಕೆಸರು ನೀರು ಕಲ್ಲು-ಮಣ್ಣು ಕಲ್ಲುಬಂಡೆಗಳು ಎಲ್ಲವನ್ನೂ ದಾಟಿ ಹೋಗಬೇಕಾಗುತ್ತದೆ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವನರಾಗ ಶರ್ಮಾ ಕತೆ

ಭೂಮಿ ಕಂಪಿಸುತ್ತಿದೆ. ಇಮಾರತುಗಳು, ಗಿಡಮರಗಳು ಅಲುಗಾಡುತ್ತಿವೆ. ಏನಾಗುತ್ತಿದೆ? ಎಂಬುದೇ ತಿಳಿಯದೇ ಎಲ್ಲರೂ ಒಂದು ಕ್ಷಣ ದಂಗಾದರು. ಮರುಕ್ಷಣದಲ್ಲಿಯೇ ತೀವ್ರ ಭೂಕಂಪದ ಅನುಭವ ಆಗುತ್ತಿದ್ದಂತೆ, ಕೆಲವರ ಮೊಬೈಲಿನಲ್ಲಿ ಕರಾವಳಿಯಲ್ಲಿ ತ್ಸುನಾಮಿ ಎರಗಿದ ಮೆಸೇಜ್ ಬರತೊಡಗಿದಾಗ ಎದೆ ಬಡಿತ ಜೋರಾಯಿತು. ಮಾತು ಹೊರಡುತ್ತಿಲ್ಲ. ಮುಕುಲ ಇಲ್ಲಿಂದ 35-40 ಕಿಮಿ ದೂರದ ತುಕುಶಿಕ ನಗರದ ಕಂಪನಿಯ ಆಫೀಸಿನಲ್ಲಿದ್ದಳು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವನರಾಗ ಶರ್ಮಾ ಕತೆ “ವಿಪ್ಲವ” ನಿಮ್ಮ ಓದಿಗೆ

Read More

ರೋಸೀ ಮತ್ತು ಪೂರ್ವಜರ ಸಮಾಧಿಗಳು…: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ರೋಸೀ ಇದ್ದ ವಾಹನ ನೇರವಾಗಿ ಮಾರಿಕುಪ್ಪಮ್ ದಾಟಿ ಅರ್ಧ ಕಿಲೋಮೀಟರ್ ದೂರ ದಕ್ಷಿಣಕ್ಕೆ ಸಾಗಿ ದೊಡ್ಡದಾದ ಮತ್ತು ಎತ್ತರವಾದ ಗಣಿ ತ್ಯಾಜ್ಯದ ಗುಡ್ಡವನ್ನು ಸುತ್ತಾಕಿಕೊಂಡು ಪೂರ್ವಕ್ಕೆ ತಿರುಗಿ ಲಕ್ಷ್ಮೀಸಾಗರ ರಸ್ತೆಯಲ್ಲಿ ಒಂದು ಕಿ.ಮೀಟರ್ ದೂರ ಸಾಗಿ ರಸ್ತೆಯಲ್ಲಿ ನಿಂತುಕೊಂಡಿತು. ರೋಸೀ ಜೊತೆಗಿದ್ದ ಮಣಿ ವಾಹನದಿಂದ ಕೆಳಕ್ಕಿಳಿದು ವಾಹನದ ಬಾಗಿಲು ತೆರೆದು ರೋಸೀಯನ್ನು ಕೆಳಕ್ಕೆ ಇಳಿಯಲು ಸಹಾಯ ಮಾಡಿದ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ಮೂರನೆಯ ಕಂತು ನಿಮ್ಮ ಓದಿಗೆ

Read More

ಮಂಜುನಾಥ್ ಕುಣಿಗಲ್ ಬರೆದ ಈ ಭಾನುವಾರದ ಕತೆ

ಅಮ್ಮನಿಗೆ ವಿಷಯ ತಿಳಿದರೆ ಎದೆಹೊಡೆದು ಕುಸಿದುಬಿದ್ದಾಳು! ಆಕೆ ತನ್ನ ಜೀವನ ಒತ್ತೆಯಿಟ್ಟು ಅದೂ-ಇದೂ ಚಾಕರಿ ಮಾಡುತ್ತಾ ನಮ್ಮನ್ನು ಸಾಕಿದ್ದು. ಆಕೆಗೆ ಏನು ಸುಖ ಕೊಟ್ಟಿದ್ದೆ? ಅದ್ಯಾವುದೋ ನನ್ನ ಕಂಪ್ಯೂಟರ್ ಕೋರ್ಸಿಗೆ ಹನ್ನೆರೆಡು ಸಾವಿರವನ್ನು ಹೊಂಚಲು ಎಲ್ಲೆಲ್ಲೋ ಹೊಟ್ಟೆಬಟ್ಟೆ ಕಟ್ಟಿ ಅದೆಷ್ಟು ಕಷ್ಟಪಟ್ಟಳು? ಆ ದುಡ್ಡನ್ನು ನಾನಿನ್ನೂ ವಾಪಸ್ ಕೊಟ್ಟಿಲ್ಲ! ಹೊಟ್ಟೆಯಲ್ಲಿ ಏನೋ ಕಟ್ಟಿಕೊಂಡ ಸಂಕಟ!
ಮಂಜುನಾಥ್ ಕುಣಿಗಲ್ ಹೊಸ ಕಥಾ ಸಂಕಲನ “ದೂರ ದೇಶದ ದೇವರು” ಕೃತಿಯ ಶೀರ್ಷಿಕೆ ಕತೆ

Read More

ರೋಸಿ ಮೇಡಂ ಕಂಡ ಕತ್ತಲ ಸಾಮ್ರಾಜ್ಯ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಶಿಲೆಗಳಲ್ಲಿ ಈ ರೀತಿಯಾಗಿ ಚಿನ್ನ ನೋಡಿದ ರೋಸೀ ಸ್ವಲ್ಪ ಹೊತ್ತು ಮಾತು ಬರದೇಹೋದಳು. ನಂತರ ಚೇತರಿಸಿಕೊಂಡು ಬ್ಯಾಟರಿಗಳನ್ನು ಆಫ್ ಮಾಡುವಂತೆ ತಿಳಿಸಿ ಕತ್ತಲಲ್ಲಿ ಕಣ್ಣುಗಳನ್ನು ಹಿಗ್ಗಿಸಿಕೊಂಡು, ಕುಗ್ಗಿಸಿಕೊಂಡು ಗೋಡೆಗಳಲ್ಲಿದ್ದ ಚಿನ್ನವನ್ನು ನೋಡಲು ಪ್ರಯತ್ನಿಸಿದಳು. ಸುಮಾರು ಹೊತ್ತು ರೋಸೀ ಅದೇ ರೀತಿಯಾಗಿ ನೋಡಿದಳು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ತೆರಡನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ