Advertisement

Category: ದಿನದ ಕವಿತೆ

ಶ್ರೀನಿಧಿ ಎಚ್ ವಿ ಬರೆದ ಈ ದಿನದ ಕವಿತೆ

“ಮುಂದಾಗುವುದನು
ಇಂದೇ ಅರಿಯುವ
ತ್ರಿಕಾಲ ಜ್ಞಾನವು
ನನಗೊಲಿದಿಲ್ಲ

ಒಂದೇ ಬಣ್ಣದ
ಬಟ್ಟೆಯ ತೊಟ್ಟ
ಅವಳಿ ಮಕ್ಕಳು
ಸರಿ ತಪ್ಪುಗಳು”-ಶ್ರೀನಿಧಿ ಎಚ್ ವಿ ಬರೆದ ಈ ದಿನದ ಕವಿತೆ

Read More

ಪ್ರಸಾದ ಗುಡ್ಡೋಡಗಿ ಬರೆದ ಎರಡು ಕವಿತೆಗಳು

“ಗೆಳತಿ ನೀ ಕ್ಷೇಮದಿಂದಿರು,
ಬೆಡ್ ಮೇಲಿಂದ ಎದ್ದು ನಡೆಯುತಿರು,
ಮೆತ್ತನೆಯ ಅಡುಗೆ ತಿನ್ನುತ್ತಿರು,
ಕಾಯಿಸಿದ ನೀರು ಕುಡಿಯುತ್ತಿರು,
ಸರಿಯಾಗಿ ಮಾತ್ರೆ ನುಂಗುತ್ತಿರು,
ಬದಿ ಬದಲಿಸಿ ಮಲಗುತ್ತಿರು,
ನೀ ಗುಣಮುಖವಾಗುವವರೆಗೂ
ಕ್ಷಮೆ ಇರಲಿ ನನ್ನ ಬಾಧೆಗೂ
ಗೆಳತಿ ನೀ ಕ್ಷೇಮದಿಂದಿರು!” -ಪ್ರಸಾದ ಗುಡ್ಡೋಡಗಿ ಬರೆದ ಎರಡು ಕವಿತೆಗಳು

Read More

ಶರೀಫ್ ಕಾಡುಮಠ ಬರೆದ ಈ ದಿನದ ಕವಿತೆ

“ಗಡಿಯಾಗ ನಿಲ್ಲಂದ್ರ
ಒಲ್ಲೆ ಅಂತಾನ
ಕೈಕಾಲ ಬಡಿತಾನ
ಸ್ಟುಡಿಯೋನೆ‌
ರಣರಂಗ ಮಾಡ್ಯಾನ

ಟಿವಿ ಸ್ಕ್ರೀನೊಳಗ
ತೆಲಿ ಮ್ಯಾಲ ಕೈಹೊತ್ತ
ಆ್ಯಂಕರ ಓಡತಾಳ
ಮಿಸೈಲ್ ಹೊಡಿತದ
ಅಂತಾಳ” – ಶರೀಫ್ ಕಾಡುಮಠ ಬರೆದ ಈ ದಿನದ ಕವಿತೆ

Read More

ಡಾ. ಸಿ. ಬಿ. ಐನಳ್ಳಿ ಬರೆದ ಎರಡು ಕವಿತೆಗಳು

“ನಿನ್ನಂಥ ಮೋಕ್ಷದ ಹಕ್ಕಿಗೂ
ತಪ್ಪಲಿಲ್ಲ ಬೇಲಿಗಳ ಭಯ
ಕೊನೆಯದಾಗಿ ಕೇಳಬೇಕೆಂದಿದ್ದೇನೆ
ಕಾಯಬಹುದೇ ನೀನೂ
ಅಕ್ಕ ಚನ್ನನಿಗೆ ಕಾದಂತೆ….?” ಡಾ. ಸಿ. ಬಿ. ಐನಳ್ಳಿ ಬರೆದ ಎರಡು ಕವಿತೆಗಳು

Read More

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

“ಅರ್ಧ ಗದ್ದೆಯಲ್ಲಿ
ಮಾತ್ರವೇ ಎದ್ದುನಿಂತ
ಭತ್ತದ ಪೈರು
ಭಾಷಣದ ಮಧ್ಯೆ
ರಾಜಕಾರಣಿ
ಹರಿಸಿದ ಕಣ್ಣೀರು
ಮಕ್ಕಳು ಮೊಮ್ಮಕ್ಕಳು ನಗುನಗುತ್ತಾ
ಮನೆಗೆ ಮರಳಿದಂತೆ
ಏಕಾಂಗಿ ವೃದ್ಧನಿಗೆ
ಬಿದ್ದ ಕನಸು”-ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ