“ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು”
“ರಾತ್ರಿ ಅಂಗಳದಲ್ಲಿ ಚಾಪೆ ಹಾಸಿಕೊಂಡು ನನ್ನನು ತಂಗಿಯನ್ನು ತನ್ನ ತೋಳ ದಿಂಬಿನ ಮೇಲೆ ಮಲಗಿಸಿಕೊಂಡು ಪಪ್ಪಾ ನಮಗೆ ಗೋವಿನ ಕಥೆಯನ್ನು ಹೇಳಿದ್ದು ಅದೆಷ್ಟು ಬಾರಿಯೋ! ಚಿಕ್ಕೆ ತಾರೆಗಳಿಂದ ತುಂಬಿದ್ದ ಆಕಾಶ ದಟ್ಟ ಅರಣ್ಯವಾಗಿ ಬಾನೇ ಬೆಳ್ಳಿತೆರೆಯಾಗಿ ಅಲ್ಲೇ ಎಲ್ಲ ಚಿತ್ತಾರಗಳು ಮೂಡಿದಂತೆ ಅನಿಸುತ್ತಿತ್ತು. ಪ್ರತಿಸಲ ಈ ಕಥೆ ಕೇಳುವಾಗ, ಕರುವನ್ನು ಬಿಟ್ಟು ಹೋಗುವ ಪುಣ್ಯಕೋಟಿಯನ್ನು ನೆನೆದು ಬಿಕ್ಕಿ ಅಳುವುದು, “ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು” ಎಂದು ಭಾವುಕರಾಗಿ ಪದೇ ಪದೇ ಹೇಳಿಕೊಳ್ಳುವ ಪರಿಪಾಠವೂ ಇತ್ತು. ಇದು ನನ್ನೊಬ್ಬಳ ಕಥೆಯಲ್ಲ ಕನ್ನಡದ ಪ್ರತಿ ಮಗುವೂ ಗೋವಿನ ಹಾಡಿನ ಗಂಧದಲ್ಲಿ ಮಿಂದೆದ್ದು ಬಂದಿದೆ.”
Read More
