Advertisement

Category: ದಿನದ ಪುಸ್ತಕ

ಕರ್ವಾಲೋ ಮರು ಓದು, ಒಂದು ಧ್ಯಾನ: ದೇವಿಕಾ ನಾಗೇಶ್‌ ಬರಹ

ಇರುವೆಯಿಂದ ರಕ್ಷಿಸಿಕೊಳ್ಳಲು ಆ ಪ್ರಾಣಿ ಇದ್ದಕ್ಕಿದ್ದಂತೆ ಪಕ್ಕದ ದೊಡ್ಡ ಮರಕ್ಕೆ ಹಾರಿ ಮರ ಕೂತು ತನ್ನ ದೇಹಕ್ಕೆ ಅಂಟಿಕೊಂಡಿದ್ದ ಕೆಂಪಿರುವೆಗಳನ್ನು ತಿನ್ನತೊಡಗಿತು. ಇದು ಕಂಡು ಆಶ್ಚರ್ಯ ಚಕಿತರಾದ ಲೇಖಕರು ಹಾರೋ ಓತಿಕ್ಯಾತ ಇದು ಎಂದು ಖಾತ್ರಿಯಾದ ಖುಷಿಯಲ್ಲಿ ತನ್ನ ತಂಡದವರನ್ನು ಕೂಗಿ ಕರೆದರು. ಆದರೆ ಹಾರುವ ಓತಿಕ್ಯಾತ ಇದ್ದಲ್ಲಿ ನಿಲ್ಲುತ್ತದೆಯೇ? ಲೇಖಕರು ಅದನ್ನೇ ತದೇಕ ಚಿತ್ತರಾಗಿ ಕಣ್ಣಲ್ಲೇ ಹಿಂಬಾಲಿಸುತ್ತ ತಾವು ಕಂಡ ಈ ಅದ್ಭುತ ಸರೀಸೃಪವನ್ನು ತನ್ನ ತಂಡದವರಿಗೆ ಪರಿಚಯಿಸುವ ಆತುರದಲ್ಲಿದ್ದರು…
ಪೂರ್ಣಚಂದ್ರ ತೇಜಸ್ವಿಯವರ ಪ್ರಮುಖ ಕಾದಂಬರಿ “ಕರ್ವಾಲೋ”ದ ಮರು ಓದು, ದೇವಿಕಾ ನಾಗೇಶ್ ಬರಹ

Read More

ಅರಳುವ ಭಾವಲೋಕ: ದೀಪಾ ಗೋನಾಳ ಕವನ ಸಂಕಲನಕ್ಕೆ ಓ.ಎಲ್. ನಾಗಭೂಷಣ ಸ್ವಾಮಿ ಮಾತುಗಳು

ಪ್ರೇಮವೇ ಗೆಲುವುದು ಅನ್ನುವ ಶೀರ್ಷಿಕೆಯನ್ನೇ ನೋಡಿ. ಪ್ರೇಮ ಗೆಲ್ಲುವುದು ʻನಾನುʼ ನೋತಾಗ ಅಲ್ಲವೇ!. ಪ್ರೇಮ ಗೆದ್ದಿತು ಅನ್ನುವುದು ಬರಿಯ ಒಬ್ಬರ, ಪುಣ್ಯವಿದ್ದರೆ ಪಾಲ್ಗೊಂಡ ಇಬ್ಬರ ಮೈಮನಸುಗಳಿಗೆ ಮಾತ್ರ ಗೊತ್ತಿರುವ ಸಂಗತಿಯಾಗಬಹುದು, ಭಾಷೆಯನ್ನು ಬಲ್ಲ ಎಲ್ಲರಿಗೂ ಇದನ್ನು ಮನದಟ್ಟು ಮಾಡಿಸುವುದು ಎಷ್ಟು ಕಷ್ಟ. ಪ್ರೀತಿ ಶೃಂಗಾರದ ಬಯಕೆ, ತವಕ, ನೆನಪು, ಅವನ್ನೆಲ್ಲ ನುಡಿಯಾಗಿ ಕಾಣುವ ಹಂಬಲ ಇವೆಲ್ಲವೂ ಓದುಗರಲ್ಲೂ ಇರಬೇಕು. ಅಂದರೆ ಪ್ರೇಮವನ್ನು ಬಯಸುವ ಓದುಗ ಮನಸೂ ಬೇಕು.
ದೀಪಾ ಗೋನಾಳ ಕವನ ಸಂಕಲನ “ನಿನ್ನ ನೆನಪ ಕುಡಿದವಳು” ಕುರಿತು ಓ.ಎಲ್.‌ ನಾಗಭೂಷಣ ಸ್ವಾಮಿ ಬರಹ

Read More

ನಾಯಿಕುರ್ಕನ ನೆರಳಿನಲ್ಲಿ: ವಿಜಯಶ್ರೀ ಹಾಲಾಡಿ ಕೃತಿಯ ಒಂದು ಪ್ರಬಂಧ

ಎಲ್ಲರೂ ಒಟ್ಟಾಗಿ ಅನ್ನ, ತಿಂಡಿ ತಿನ್ನುವಾಗ ಕರಿಯನ ಗಲಾಟೆಯೇ ಗಲಾಟೆ. ಯಾರಿಗೂ ತಿನ್ನಲು ಬಿಡದೆ ತಾನೇ ಎಲ್ಲವನ್ನೂ ಮುಕ್ಕಬೇಕೆನ್ನುವುದು ಅವಳ ಆಸೆ. ಎಂಥಾ ಬೊಬ್ಬೆ! ನನಗೆ ಏನು ಮಾಡಬೇಕೆಂಬುದೇ ತಿಳಿಯುತ್ತಿರಲಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಕಡೆ ಊಟ ಹಾಕುವ ವ್ಯವಸ್ಥೆ ಮಾಡಿಕೊಂಡೆ. ಆದರೆ ಎಲ್ಲ ಕಡೆಯೂ ಹೋಗಿ ತಾನೇ ಬಾಯಿಹಾಕಿ ಯಾರಿಗೂ ಸರಿಯಾಗಿ ತಿನ್ನಲು ಬಿಡದೆ, ಕರಿಯ ಅವಸ್ಥೆ ಕೊಡುತ್ತಿದ್ದಳು. ಕೊನೆಕೊನೆಗೆ ಕೋಲು ಹಿಡಿದು ಊಟ ಹಾಕುವ ಪರಿಸ್ಥಿತಿ ಬಂದಿತು. ಈ ನಡುವೆ ಪಾಪದ್ದು ದಾಸುಮರಿ ತುಂಬಾ ಕಷ್ಟ ಅನುಭವಿಸಿತು. ಅದಕ್ಕೆ ಬೇಗ ಬೇಗ ತಿನ್ನಲು ಆಗುತ್ತಿರಲಿಲ್ಲ. ಎಲ್ಲವನ್ನೂ ಕರಿಯನೇ ತಿಂದುಹಾಕುತ್ತಿತ್ತು. ಇಷ್ಟೇ ಆಗಿದ್ದರೆ ಹೋಗಲಿ ಅನ್ನಬಹುದಿತ್ತು.
ವಿಜಯಶ್ರೀ ಹಾಲಾಡಿ ಪ್ರಬಂಧಗಳ ಸಂಕಲನ “ಕಾಡಿನ ಸಂಗೀತ” ಕೃತಿಯ ಒಂದು ಪ್ರಬಂಧ ನಿಮ್ಮ ಓದಿಗೆ

Read More

ಮಧು ವೈ.ಎನ್.‌ ಹೊಸ ಕಾದಂಬರಿ “ಇಂತಿ, ಪೂರ್ವಿ”ಯ ಕೆಲವು ಪುಟಗಳು

ಆ ಪದ ಕಿವಿಗೆ ಬೀಳುತ್ತಿದ್ದಂತೆ ಸೈಫೈ ಸಿನಿಮಾಗಳಲ್ಲಿ ರೋಬೋಗಳು ಬ್ಯಾಟರಿ ಡೌನಾಗಿ ತಾನಾಗೆ ಕುಸಿದಂತೆ ಶರತ್ ಕುಸಿದ. ಅವಳು ಹಂಗೇ, ಹಿಂದೆ ಮುಂದೆ ನೋಡದೇ ಅಂದುಬಿಡ್ತಿದ್ದಳು. ಜ್ಯಾಮಿಟ್ರಿ ಬಾಕ್ಸ್‌ ಮುಚ್ಚಳವನ್ನು ಹಲ್ಲುಗಳನ್ನೆಟ್ಟಿ ತೆಗೆಯುತ್ತಿದ್ದಳು. ಅಸೆಂಬ್ಲಿನಲ್ಲಿ ಆಕಳಿಸುವಾಗ ತುಟಿ ಹರಿಯುವಷ್ಟು ಅಗಲ ಬಾಯಿ ತೆರೆಯುತ್ತಿದ್ದಳು. ಕಿರುನಾಲಗೆಯಿಂದ ಎಂಜಲನ್ನು ಮೋಟಾರಿನಂತೆ ಹಾರಿಸುತ್ತಿದ್ದಳು. ಇಡೀ ಕ್ಲಾಸಿಗೆ ರಾಣಿ, ರೌಡಿ ಎರಡೂ ಆಗಿದ್ದಳು. ಶರತ್‌ಗೆ ಆಳದಲ್ಲಿ ಅವಳೆಂದರೆ ಭಯ. ತಾನು ಸುಮ್ಮನಿದ್ದರೂ ಆಗಿತ್ತು; ಇಂಥಾ ಬಜಾರ್‌ಗಿತ್ತಿಯನ್ನು ಕೆಣಕಿ ʼಕಳ್ಳʼ ಅನ್ನಿಸ್ಕೊಳಂಗಾಯ್ತಲ್ಲ ಎಂದು ಕೈಹಿಸುಕಿಕೊಂಡ.
ಮಧು ವೈ.ಎನ್.‌ ಹೊಸ ಕಾದಂಬರಿ “ಇಂತಿ, ಪೂರ್ವಿ”ಯ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಅಮ್ಮಮ್ಮನಾದ ಹೊತ್ತು…: ಡಾ. ಎಚ್.ಎಸ್.‌ ಅನುಪಮಾ ಮಾತುಗಳು

ಅಲ್ಲಿಂದ ಇಲ್ಲಿಯವರೆಗೆ ಅನುದಿನ ಪುಟ್ಟನ ಸುದ್ದಿ, ನೆನಪುಗಳಿಂದಲೇ ಬೆಳಕು ಹರಿಯುತ್ತದೆ, ಕತ್ತಲಾಗುತ್ತದೆ. ಅವ ಮಗುಚಿದ, ಕೂತ, ತೊದಲು ಮಾತನಾಡಿದ, ಎದ್ದ, ನಿಂತ ಎನ್ನುವುದೆಲ್ಲ ನಮ್ಮದೇ ಸಾಧನೆ ಎಂಬಂತಾಗಿದೆ. ಹಲ್ಲು ಕಡಿದು ಮುದ್ದು ಮಾಡುತ್ತ ಮಾಡುತ್ತ ಮುಂದಿನ ಹಲ್ಲು ಸವೆದೇ ಹೋದಂತಿದೆ! ಸಣ್ಣ ಅವಕಾಶ, ಪುರುಸೊತ್ತು ಸಿಕ್ಕರೂ ಬೆಂಗಳೂರಿಗೆ ಹೋಗಿ ಪುಟ್ಟನ ಕಂಡುಬರುವಾ ಅನಿಸುತ್ತದೆ. ಈ ಅಮ್ಮ ತಮ್ಮನ್ನಿಷ್ಟು ಪ್ರೀತಿಸಿದ್ದಳೋ ಇಲ್ಲವೋ ಎಂದು ನಮ್ಮ ಮಕ್ಕಳು ಶಂಕಿಸಬಹುದಾದಷ್ಟು ಬದುಕು ಸೂರ್ಯಮಯವಾಗಿದೆ!
ಡಾ. ಎಚ್.ಎಸ್.‌ ಅನುಪಮಾ ಕವನ ಸಂಕಲನ “ಅಮ್ಮಮ್ಮನ ಕವಿತೆಗಳು” ಕೃತಿಯ ಕುರಿತು ಅವರ ಬರಹ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ