Advertisement

Category: ಸಾಹಿತ್ಯ

ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ

ಸಂದರ್ಶನ ಚೆನ್ನಾಗಿ ಮೂಡಿ ಬಂತು. ಬಾಲಮುರಳಿ ಸಂಗೀತದ ಬಗ್ಗೆ, ತಮ್ಮ ಬಗ್ಗೆ ಮಾತ್ರವಲ್ಲ, ಉಳಿದ ಸಂಗೀತಗಾರರ ಬಗ್ಗೆ ಕೂಡ ಅದ್ಭುತ ಒಳನೋಟಗಳನ್ನು ನೀಡಿದರು. ಮಾತು ಮಾತಿಗೂ ಹಾಡುತ್ತಿದ್ದರು. ಕಣ್ಣುಗಳಲ್ಲಿ ಅದೇನು ತಲ್ಲೀನತೆ. ಮೈಮರೆತು ಇನ್ನೊಂದು ಲೋಕಕ್ಕೆ ಹೋಗಿ ಕೇಳುಗರನ್ನೂ, ವೀಕ್ಷಕರನ್ನೂ ಇನ್ನೊಂದು ಲೋಕಕ್ಕೆ ಕರೆದೊಯ್ಯುವ ಉತ್ಸುಕತೆ. ಮಾತುಕತೆಯ ಉದ್ದಕ್ಕೂ.
ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ “ಅಕಾಡೆಮಿ ಒಲ್ಲೆನೆಂದ ಬಾಲಮುರಳಿ ಕೃಷ್ಣ” ನಿಮ್ಮ ಓದಿಗೆ

Read More

ಪಾಥಾಳದಲ್ಲೊಂದು ಭಯಾನಕ ಅಪಘಾತ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

…ಆಗಿನ ಜಗತ್ತೇ ಬೇರೆ ಈಗಿನ ಜಗತ್ತೇ ಬೇರೆ. ನಮ್ಮ ಹಿಂದಿನ ಇತಿಹಾಸವನ್ನು ತಿಳಿದುಕೊಳ್ಳುವುದು ಅಂದರೆ ನನಗೆ ತುಂಬಾ ಇಷ್ಟ. ಇಲ್ಲಿಗೆ ಬರುವುದಕ್ಕೆ ನನಗೆ ಯೂನಿವರ್ಸಿಟಿಯಿಂದ ಸಹಾಯ ಕೂಡ ಸಿಕ್ಕಿದೆ. ಮನುಷ್ಯ ಹುಟ್ಟಿದ ಮೇಲೆ ಏನಾದರು ಒಂದು ಒಳ್ಳೆಯ ಕೆಲಸ ಮಾಡಬೇಕು. ಏನೂ ಮಾಡದೆ ಹಾಗೇ ಸತ್ತೋದರೆ ಮನುಷ್ಯನ ಬದುಕಿಗೆ ಅರ್ಥವೇ ಇರುವುದಿಲ್ಲ” ಎಂದಳು. ಎಂ.ಡಿ. “ಎಷ್ಟು ವಯಸ್ಸು ನಿಮಗೆ? ಓ! ಐ ಯಾಮ್ ಸಾರಿ ಹೆಣ್ಣುಮಕ್ಕಳ ವಯಸ್ಸು ಕೇಳಬಾರದಲ್ಲ?…”
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ತೊಂದನೆಯ ಕಂತು ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಶುಭಾ ಎ. ಆರ್. ಕತೆ

ಈ ಆಟೋ ಹೀಗೇ ಓಡುತ್ತಲೇ ಇರಲಿ, ಮನೆ ಬರುವುದೇ ಬೇಡ ಎಂದು ಪ್ರಾರ್ಥಿಸುತ್ತಾ ಕುಳಿತವನಿಗೆ ಅಲ್ಲೂ ನಿರಾಶೆಯೇ ಕಾದಿತ್ತು. ಮೀಟರ್ ನೋಡದೆ ನೂರರ ನೋಟು ಆಟೋದವನ ಕೈಗೆ ತುರುಕಿದವನಿಗೆ ಮನದ ಮೂಲೆಯಲ್ಲೆಲ್ಲೋ ಆಸೆಯ ಬೆಳಕು. ಮಗಳೀಗಾಗಲೇ ಬಂದಿರುತ್ತಾಳೆ. ತಾನು ಅವಳನ್ನಪ್ಪಿ ತನ್ನ ಪ್ರೀತಿಯ ಋಣ ತೀರಿಸಲು ಕೇಳಿಕೊಳ್ಳಬೇಕು. ಸರಿಯಾಗಿ ಅರ್ಥೈಸಿದರೆ ಖಂಡಿತಾ ಕೇಳುತ್ತಾಳೆ ಎಷ್ಟೆಂದರೂ ನನ್ನ ಪ್ರೀತಿಯ ಮಗಳಲ್ಲವೇ ನೋಡಿಯೇ ಬಿಡುತ್ತೇನೆ… ನನ್ನೆಲ್ಲಾ ವಾತ್ಸಲ್ಯ, ಪ್ರೀತಿಯನ್ನು ಪಣಕ್ಕಿಟ್ಟರೆ ಸೋಲುವವಳು ಅವಳೇ ಎಂದುಕೊಂಡೇ ಮನೆಯೊಳಗೆ ಬಂದ.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಶುಭಾ ಎ. ಆರ್. ಕತೆ “ಲಿರ್”‌

Read More

ಇನ್ನು ಮೇಲೆ ನಾವು ಮೂವರೇ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಕೋಮಲ ಮನೆಯಲ್ಲಿ ಇಲ್ಲದ ಸಮಯದಲ್ಲಿ ಸೆಲ್ವಿ ತನ್ನ ಅತ್ತೆ ಕನಕಳಿಗೆ ಎಲ್ಲವನ್ನೂ ವಿವರಿಸಿ ಹೇಳಿದಳು. ಕನಕ ತನ್ನ ತವರೂರಿಗೆ ತನ್ನ ಮೊಮ್ಮಗಳನ್ನು ಕೊಡುತ್ತಿರುವುದಕ್ಕೆ ಸಂತೋಷವಾಗಿ ಹುಡುಗ ಕೂಡ ಒಳ್ಳೆಯವನು ಎಂದು ಹೇಳಿದಳು. ಅದೇ ಮಾತುಗಳನ್ನು ಮತ್ತೆ ಸೆಲ್ವಿ, ಮಣಿ ಜೊತೆಗೆ ಕನಕಳ ಮುಂದೆ ಇನ್ನೊಂದೆರಡು ಸಲ ಮಾತನಾಡಿದ ಮೇಲೆ ಅಂತಿಮವಾಗಿ ಕೋಮಲಳನ್ನು ಆರ್ಮುಗಮ್ ಕರೆದುಕೊಂಡುಬಂದಿದ್ದ ಯುವಕ ಸಂತೋಷ್‌ಗೆ ಕೊಟ್ಟು ಮದುವೆ ಮಾಡುವುದಾಗಿ ತೀರ್ಮಾನ ತೆಗೆದುಕೊಂಡರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ತನೆಯ ಕಂತು ನಿಮ್ಮ ಓದಿಗೆ

Read More

ಎಂ.ವಿ. ಶಶಿಭೂಷಣ ರಾಜು ಬರೆದ ಈ ಭಾನುವಾರದ ಕತೆ

ಬತ್ತಿ ಹೋಗಿರುವ ನದಿಯ ದಡದಲ್ಲಿ ಕುಳಿತು ಹರಿಯುವ ನದಿಯನ್ನು ಕಲ್ಪಿಸಿಕೊಂಡು ಸುಖಪಡುತ್ತಿದ್ದ ಕುಮದ್ವತಿಗೆ, ಎಲ್ಲವೂ ವೇಗವಾಗಿ ಮನಸಿನಲಿ ಸುಳಿದುಹೋದವು. ಕೆಲವು ಸಲ ಊರಿನವರ ಮಾತುಗಳಿಗೆ ಬೇಸರವಾದರೂ, ಪ್ರೀತಿಸುವ ಗಂಡನಿಂದ ಎಲ್ಲವೂ ಮರೆಯುತ್ತಿದ್ದಳು. ಸೊಸೆಯ ಒಳ್ಳೆಯತನ ಕಂಡಮೇಲೆ ಅತ್ತೆ ಇನ್ನೂ ಹತ್ತಿರವಾಗಿದ್ದರು. ಸೊಸೆಗೆ ಯಾವುದೇ ತೊಂದರೆ ಆಗದಂತೆ, ತನ್ನ ಮಗನಿಂದ ಅವಳಿಗೆ ಅನ್ಯಾಯ ಆಯಿತಲ್ಲ ಎನ್ನುವ ಪಾಪ ಪ್ರಜ್ಞೆಯಿಂದ ಸೊಸೆಯನ್ನು ಇನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು.
ಎಂ.ವಿ. ಶಶಿಭೂಷಣ ರಾಜು ಬರೆದ ಈ ಭಾನುವಾರದ ಕತೆ “ಕುಮದ್ವತಿ”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ