Advertisement

Category: ಸಾಹಿತ್ಯ

ಆರಕ್ಕೇರದ ಮೂರಕ್ಕಿಳಿಯದ ಬಡವರ ಬದುಕು: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಪಕ್ಕದಲ್ಲಿದ್ದ ಮಣಿ, “ಸರ್ ಅವರೆಲ್ಲರ ಹೆಸರುಗಳು ಏನೇನು ಅಂತ ಗೊತ್ತ ಸರ್?” ಎಂದ. ಲೋಗನಾಥನ್, “ಗೊತ್ತಿಲ್ಲ” ಎಂದ. ಮಣಿ “ಕರ್ಣನ್, ಧರ್ಮರಾಯನ್, ಭೀಮನ್, ಅರ್ಜುನನ್, ನಖುಲನ್ ಮತ್ತು ಸಹದೇವನ್” ಎನ್ನುತ್ತಿದ್ದಂತೆ, ಲೋಗನಾಥನ್ “ಇನ್ನೂ ಮೂವರ ಹೆಸರು?” ಕೇಳಿದರು. ಗೋವಿಂದ, “ಮೊದಲ ಇಬ್ಬರು ಸತ್ತೋದರಂತೆ ಸರ್. ಐದು ಜನ ಗಂಡು ಮಕ್ಕಳಾದ ಮೇಲೆ ನಾನು ಹುಟ್ಟಿ, ನನಗೆ ಗೋವಿಂದಾ ಅಂತ ಹೆಸರು ಇಟ್ಟ ಮೇಲೆ ನಮ್ಮಮ್ಮನಿಗೆ ಮಕ್ಕಳಾಗುವುದು ನಿಂತೋಯಿತಂತೆ” ಎಂದ ಗೋವಿಂದನೆ ಬಿದ್ದೂಬಿದ್ದು ನಕ್ಕ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಹತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸುನೀತ ಕುಶಾಲನಗರ ಕತೆ

ನೀರು ಕುಡಿಯದಿದ್ದರೂ, ಆ ಅನಿರೀಕ್ಷಿತ ಘಟನೆಗೆ ಹೆದರಿ ನಾನು ಪ್ರಜ್ಞೆ ಕಳೆದುಕೊಂಡಿದ್ದೆ. ಯಾರಾದರೂ ನೋಡಿಬಿಡುತ್ತಾರೆಂದು ಹೆದರಿದ ಆತ ತನ್ನ ತೋಳಲ್ಲಿ ನನ್ನನ್ನು ಎತ್ತಿಕೊಂಡು ಮರದ ಮೇಲಿನ ಆತನ ಅಟ್ಟಳಿಗೆಯ ಒಳಗೆ ಮಲಗಿಸಿದ. ತನ್ನ ಟವೆಲ್‌ನಿಂದ ನನಗೆ ಗಾಳಿ ಬೀಸಿ, ಮುಖಕ್ಕೆ ನೀರೆರಚಿದಾಗ ನಿಧಾನಕ್ಕೆ ಕಣ್ಣು ಬಿಟ್ಟೆ. ನಾನಿರುವ ಜಾಗವನ್ನು ನೋಡಿ ಒಮ್ಮೆಲೆ ಬೆಚ್ಚಿದೆ. ಎದ್ದೇಳಲು ಪ್ರಯತ್ನಿಸುತ್ತಿದ್ದಂತೆಯೇ ಹತ್ತಿರ ಬಂದ ಆತ ಕೈಮುಗಿದು “ತಪ್ಪಾಯಿತು, ಇನ್ನೊಮ್ಮೆಯೂ ಹೀಗೆ ಮಾಡಲ್ಲ ಕ್ಷಮಿಸಿಬಿಡಿ” ಎಂದು ಮುಜುಗರದಿಂದ ಹೇಳಿ ಹೊರ ನಡೆದ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸುನೀತ ಕುಶಾಲನಗರ ಕತೆ

Read More

ಮಿಂಚಿಹೋದ ಕಾಲ….: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಸೆಲ್ವಿ ಗಣಿ ಕಾರ್ಮಿಕ ಮಣಿಯನ್ನು ಮದುವೆ ಮಾಡಿಕೊಂಡಿದ್ದು. ಮಣಿ ತಂದೆ ಸೆಲ್ವಮ್ ಅಪಘಾತದಲ್ಲಿ ಸತ್ತುಹೋಗಿದ್ದು. ಅವಳ ತಂದೆ ಅಯ್ಯಪ್ಪನಿಗೆ ಸಿಲಿಕೋಸಿಸ್ ಬಂದು ಸತ್ತುಹೋಗಿದ್ದು. ಮಣಿ ಮತ್ತು ಸೆಲ್ವಿಯ ಮಧ್ಯೆ ತೊಂದರೆಗಳು; ಹೀಗೆ ಸಾಲು ಸಾಲಾಗಿ ಅವಳನ್ನು ಕಾಡತೊಡಗಿದವು. ಇಪ್ಪತ್ತು ವರ್ಷಗಳ ಹಿಂದೆ ಸೆಲ್ವಿ ತಾನು ಬಸರಿಯಾದಾಗ ಅಪ್ಪ ಅಮ್ಮನಿಗೆ ಹೇಳಿ ಬಸರಿ ತೆಗೆಸಿ ಡಿಗ್ರಿ ಮುಗಿಸಿ ಒಂದು ಕೆಲಸಕ್ಕೆ ಸೇರಿಕೊಂಡು ಬೇರೆ ಯಾರನ್ನಾದರೂ ಮದುವೆ ಮಾಡಿಕೊಂಡಿದ್ದರೆ? ತನ್ನ ಬದುಕು ಈ ರೀತಿ ಇರುತ್ತಿರಲಿಲ್ಲ!
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿ

Read More

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

“ನಮ್ಮ ಅಸ್ತಿತ್ವ ಇರುವುದು ನಮ್ಮಿಂದ ಮಾತ್ರ ಅಲ್ಲ. ಸುತ್ತಲಿರುವವರ ಅಸ್ತಿತ್ವದಲ್ಲಿಯೂ ನಮ್ಮ ಅಸ್ತಿತ್ವ ಇದೆ. ಈಗ ನೋಡು, ನಾವು ಬದುಕಬೇಕಾದರೆ ಆಹಾರ ಸೇವಿಸಬೇಕು. ಆಹಾರ ಬೆಳೆಯುವ ರೈತನೇ ಇಲ್ಲದಿದ್ದರೆ ನಮಗೆ ಅಸ್ತಿತ್ವವೇ ಇಲ್ಲ. ನಾವೀಗ ತಿನ್ನುತ್ತಿರುವುದನ್ನು ಬೆಳೆದದ್ದು ಯಾರು ಎನ್ನುವುದು ನಮಗೆ ಗೊತ್ತಿಲ್ಲದಿರಬಹುದು. ಆದರೆ ಆ ಗೊತ್ತಿರದ ವ್ಯಕ್ತಿಯೇ ನಮ್ಮ ಅಸ್ತಿತ್ವಕ್ಕೆ ಕಾರಣವಾಗಿರುತ್ತಾನೆ. ಆ ರೈತನಿಗೂ ಕೂಡಾ ನಮ್ಮ ಅವಶ್ಯಕತೆ ಇರುತ್ತದೆ.”
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಎರಡು ಹೃದಯ ಒಂದು ಜೀವ” ನಿಮ್ಮ ಓದಿಗೆ

Read More

ಬದುಕೆಂದರೆ ಜಟಕಾ ಬಂಡಿಯೇ ಇನ್ನೇನೂ ಅಲ್ಲ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಪಕ್ಕದಲ್ಲಿ ಸ್ಟೂಲ್ ಮೇಲೆ ಕುಳಿತಿರುವ ವಿಜಯ ಕೂಡ ಸಣ್ಣಗೆ ಇಳಿದುಹೋಗಿದ್ದಾಳೆ. ಆದರೂ ಅವಳ ಮುಖದ ಮೇಲಿನ ಕಾಂತಿ ಇನ್ನೂ ಒಂದಷ್ಟು ಉಳಿದುಕೊಂಡಿದೆ. ಅವಳ ಗಂಡ ಚಿನ್ನದ ಗಣಿಗಳಲ್ಲಿ ಕೆಲಸ ಮಾಡುತ್ತಿರುವ ಜ್ಞಾಪಕದಂತೆ ಅವಳ ಕಿವಿಗಳಲ್ಲಿ ಚಿನ್ನದ ಓಲೆಗಳು ಕಾಣಿಸುತ್ತಿವೆ. ವಾರ್ಡ್‌ನ ಎರಡೂ ಕಡೆ ಗೋಡೆಗಳ ಪಕ್ಕ ಸಾಲಾಗಿ ಹಾಸಿರುವ ಹಾಸಿಗೆಗಳ ಮೇಲೆ ಗಣಿ ಕಾರ್ಮಿಕರು ಹಾಸಿಗೆಗಳಲ್ಲಿ ಕುಳಿತು ಮಲಗಿ ಮಾತನಾಡುತ್ತಿದ್ದಾರೆ. ಈ ವಾರ್ಡ್‌ನಲ್ಲಿ ಬರೀ ಗಣಿ ರೋಗಗಳಿಂದ ಬಳಲುತ್ತಿರುವ ಕಾರ್ಮಿಕರನ್ನು ಮಾತ್ರ ಸೇರಿಸಿಕೊಳ್ಳಲಾಗುತ್ತದೆ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಹದಿನೇಳನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ