Advertisement

ರಾಜ್ಕುಮಾರ್ ಅಂದ್ರ ಏನಂದ್ಕಂಡೆ?: ಎಂ. ಜವರಾಜ್‌ ಹೊಸ ಕಾದಂಬರಿಯ ಆಯ್ದ ಭಾಗ

ಪಂಚಾಯ್ತಿ ಆಫೀಸ್ ಮಗ್ಗುಲು ಬೀದಿಲಿದ್ದ ಕುಂಟ ಸಿದ್ದಪ್ಪನ ಮನೆಯ ಅಂಗಳದಲ್ಲಿ ಒಂದಷ್ಟು ಜನ ಮಾತಾಡ್ತ ನಿಂತಿದ್ದರು. ಅಲ್ಲಿಗೆ ನಾಕಾರು ಪೇಪರು ಬರುತ್ತಿದ್ದವು. ಕುಂಟ ಸಿದ್ದಪ್ಪ ಬಿಳಿಪಂಚೆ ಬಿಳಿ ಶರ್ಟು ಹಾಕೊಂಡು ಕ್ರಾಪ್ ತಲೆ ಬಾಚ್ಕೊಂಡು ಕಾಲಿನ ಮೇಲೆ ಕಾಲು ಹಾಕಿಕೊಂಡು “ಇದು ಗೋಕಾಕ್ ಚಳುವಳಿ ಅಂತ. ಅವ್ರೊಬ್ಬ ದೊಡ್ ಕವಿ. ಅವ್ರು ಸರ್ಕಾರಕ್ಕೆ ಬರ್ದ ಪತ್ರನ ಇಟ್ಕೊಂಡು ನಡಿತಿರ ಹೋರಾಟ ಇದು. ಏಯ್‌ ನೋಡ್ರಪ್ಪ, ಬಾಯಿಲ್ಲಿ” ಅಂತ ಕರೆದು, “ನೀನು ಐದ್ನೆ ಕ್ಲಾಸಾ? ನಾಕ್ನೆ ಕ್ಲಾಸಾ?” ಅಂದ. ನಾನು, ʼಹುʼ” ಎನ್ನುವವನಂತೆ ತಲೆದೂಗಿದೆ. “ಹೌದಾ? ಹೋಗು, ಇನ್ಮೇಲ ಇಂಗ್ಲಿಸ್ ಗಿಂಗ್ಲಿಸ್ ಓದಂಗಿಲ್ಲ, ಬರೀ ಕನ್ನಡ. ನಿನ್ತವು ಇಂಗ್ಲಿಸ್ ಬುಕ್ಸ್ ಇದ್ರ ತೂದು ಬಿಸಾಕಿ ಕನ್ನಡ ಇಟ್ಗ” ಅಂದ. ಅಲ್ಲೊಬ್ಬ ಕೇಳ್ತಿದ್ದವನು “ಇದ್ಕ ರಾಜ್ಕುಮಾರ್ ಯಾಕ್ ಮದ್ಯಕ್ ಬಂದ?” ಅಂತ ಕೇಳಿದ.
ಎಂ. ಜವರಾಜ್‌ ಹೊಸ ಕಾದಂಬರಿ “ಪೋಸ್ಟ್‌ಮ್ಯಾನ್‌ ಗಂಗಣ್ಣ” ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ

Loading

ಅಂಕಣ

Latest

ಆಧ್ಯಾತ್ಮಿಕ ಶಿಬಿರ-ಮಹಿಳೆಯರಿಗೆ: ಸುಕನ್ಯಾ ಕನಾರಳ್ಳಿ ಅಂಕಣ

ನಾನು ನೋಡಿದ್ದ ಒಂದು ಅದ್ಭುತ ತಾಳಮದ್ದಳೆ ನೆನಪಿಗೆ ಬಂತು. ಕೃಷ್ಣ ತಾನು ಸಂಧಾನಕ್ಕೆ ಹೋಗುವ ಮುನ್ನ ದ್ರೌಪದಿಯನ್ನು ಭೇಟಿ ಮಾಡುತ್ತಾನೆ. ತುಂಬಿದ ಸಭೆಯಲ್ಲಿ ತನಗೆ ಆದ ಅವಮಾನದ ಗತಿ ಏನು? ಬಿಚ್ಚಿದ ಮುಡಿಯ ಗತಿಯೇನು? ಈಗ ಆ ಗಂಡ ಧರ್ಮರಾಜ ನಿನ್ನನ್ನ ಸಂಧಾನಕ್ಕೆ ಕಳುಹಿಸುತ್ತಿದ್ದಾನೆ. ಯಾಕೆಂದರೆ ಅದು ಕೇವಲ ಹೆಣ್ಣಿಗಾದ ಅವಮಾನ ಅಲ್ಲವಾ ಕೃಷ್ಣ? ನೀನೂ ಆರಾಣೆ ಗಂಡಸಾಗಿಬಿಟ್ಟೆಯಾ? ಎಂದು ಚುಚ್ಚಿ ಕೇಳುತ್ತಾಳೆ. ಸುಮಾರು ಒಂದು ಗಂಟೆ ಅವರ ನಡುವೆ ಸಂವಾದ ನಡೆಯುತ್ತದೆ. ಅವರ ನಡುವಿನ ಆತ್ಮೀಯ ಸಲಿಗೆ, ಒಬ್ಬರಿಗೊಬ್ಬರು ಸ್ಪಂದಿಸುವ ರೀತಿ, ಚತುರ ಸಂಭಾಷಣೆಗಳನ್ನು ಬಿಟ್ಟ ಬಾಯಿ ಬಿಟ್ಟಂತೆಯೇ ನೋಡಿದ್ದೆ. ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

ಸಾಹಿತ್ಯ

ಎಸ್.ಎಲ್. ಭೈರಪ್ಪನವರ ಕಾದಂಬರಿಗಳಲ್ಲಿನ ರಾಚನಿಕತೆಯ ಪ್ರಶ್ನೆ: ಎನ್.ಎಸ್.ಶ್ರೀಧರ ಮೂರ್ತಿ ಬರಹ

ಭೈರಪ್ಪನವರ ಎರಡನೆಯ ಸಾಧ್ಯತೆಯ ಕಾದಂಬರಿಗಳಲ್ಲಿ ವೈಚಾರಿಕತೆ ಬಹುಮುಖಿಯಾಗಿದೆ. ಅದರ ಕೇಂದ್ರವನ್ನು ಕೃತಿಯ ಸಂರಚನೆ ಹಿಡಿದಿಡುತ್ತದೆ. ಇಲ್ಲಿನ ಓದು ಕೂಡ ಬಹುಮುಖಿಯಾಗ ಬೇಕಾಗಿದ್ದು. ‘ತಂತುʼ ಕಾದಂಬರಿಯನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಇದು ತುರ್ತು ಪರಿಸ್ಥಿತಿಯ ರಾಜಕೀಯ ಕಥನ ಎನ್ನುವುದು ನಿಜ. ಅದರ ಜೊತೆಗೆ ಕೌಟಂಬಿಕ ಪ್ರಶ್ನೆಗಳಿವೆ. ತಾಯಿ-ಮಗನ ಸಂಬಂಧದ ಪರಿಶೀಲನೆ ಇದೆ. ದಾಂಪತ್ಯದಾಚೆಗೆ ಸೆಳೆಯುವ ಸಂಬಂಧವಿದೆ. ಸಂಗೀತದ ನೆಲೆ ಕೂಡ ಇದೆ. ಇದನ್ನು ಗಹನತೆಯ ಜೊತೆಗೆ ಅಲ್ಲಲ್ಲಿ ಕಾಣುವ ಜನಪ್ರಿಯ ವಿವರಗಳ ಜೊತೆಗೇ ಗ್ರಹಿಸಿಕೊಳ್ಳಬೇಕು. ಎಸ್.ಎಲ್. ಭೈರಪ್ಪನವರ ಕಾದಂಬರಿಗಳ ಕುರಿತು ಎನ್.ಎಸ್.‌ ಶ್ರೀಧರಮೂರ್ತಿ ಬರಹ

ಸರಣಿ

ಜರ್ಮನಿ ದೇಶದ ಕವಿ ಮೈಕಲ್ ಕ್ರೂಗರ್ ಕಾವ್ಯ ಕಥನ: ಎಸ್ ಜಯಶ್ರೀನಿವಾಸ ರಾವ್ ಸರಣಿ

ಕ್ರೂಗರ್ ಅವರು ಜೀವನಪ್ರೀತಿಯ ಖಾಸಗಿ ದುಃಖ ಮತ್ತು ಅಸಾಧ್ಯತೆಗಳ ಹಾಡುಗಳನ್ನು ರಚಿಸುವ ಕವಿ. ಈ ಕವಿಯು ವಿವಿಧ ಸಂಸ್ಕೃತಿಗಳ ಒಬ್ಬ ಸ್ವಯಂ ನಿರ್ಮಿತ ದೈವವಾಣಿಯಂತೆ. ಅವರ ಕಾವ್ಯ ಒಂದು ಗಂಭೀರ ಆಲೂಗಡ್ಡೆ ಕೃಷಿಯ ಹಾಗೆ. ರಾತ್ರಿಯಲ್ಲಿ ಹೇಗೆ ನಡೆಯಬೇಕು, ಕತ್ತಲೆಯಲ್ಲಿ ನಾವು ತಲುಪುವ ಯಾವುದೇ ಗಮ್ಯಸ್ಥಾನವನ್ನು ಹೇಗೆ ಹೊಂದಬೇಕು, ನಾವು ನಂಬಬಹುದಾದ ಅಥವಾ ನಂಬದಿರುವ ಬೆಳಕಿಗೆ ಅಂತಿಮವಾಗಿ ನಮ್ಮನ್ನು ಒಪ್ಪಿಸಿಕೊಳ್ಳುವುದು ಹೇಗೆ ಎಂದು ಕ್ರೂಗರ್ ನಮಗೆ ಕಲಿಸುತ್ತಾರೆ. ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಜರ್ಮನಿ ದೇಶದ ಕವಿ ಮೈಕಲ್ ಕ್ರೂಗರ್-ರವರ (Michael Krüger) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು

ಪ್ರವಾಸ

ಅಂಡಮಾನ್ ಪ್ರವೇಶ ಬಿಂದು ಪೋರ್ಟ್ ಬ್ಲೇರ್ ದ್ವೀಪದಲ್ಲಿ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ಸಣ್ಣಗೆ ಕುಲುಕಾಡುತ್ತಿರುವ ಸಮುದ್ರ ಆಕಾಶದ ಕೆಳಗೆ ಇನ್ನೊಂದು ಅಂಚಿನಲ್ಲಿ ನಾನು ನಿಂತಿರುವ ಮಟ್ಟಕ್ಕಿಂತ ಎತ್ತರದಲ್ಲಿರುವಂತೆ ತೋರುತ್ತಿತ್ತು. ಕಣ್ಣುಗಳ ತುಂಬಾ ತುಂಬಿಹೋದ ಸಮುದ್ರ ನನ್ನ ದೇಹವನ್ನು ತುಸು ಅಲ್ಲಾಡಿಸಿದಂತಾಗಿ ಸ್ವಲ್ಪ ಪ್ರಜ್ಞೆ ಕಳೆದುಕೊಂಡಂತಾಯಿತು. ಮನುಷ್ಯನ ದೇಹದಲ್ಲಿರುವುದು ಶೇಕಡ 65% ನೀರೆ ತಾನೆ. ಪಕ್ಕದಲ್ಲಿ ನಿಂತಿದ್ದ ಸುಶೀಲ ನನ್ನ ಮುಖವನ್ನು ಪ್ರಶ್ನಾರ್ಥಕವಾಗಿ ನೋಡಿದಳು. ಅಂಡಮಾನ್-ನಿಕೋಬಾರ್‌ ದ್ವೀಪಗಳ ಪ್ರವಾಸದ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ

ವ್ಯಕ್ತಿ ವಿಶೇಷ

ನಾನೊಬ್ಬಳು ಚಾಣಾಕ್ಷ ಹುಡುಗಿಯೇ ಆಗಿದ್ದೆ!: ಜುಲೇಖಾ ಬೇಗಂ ಜೀವನ ವೃತ್ತಾಂತ

“ಕಲಾವಿದರ ಮಾತಂತಿರಲಿ, ಊರೂರಿಗೆ ಬರುತ್ತಿದ್ದ ನಾಟಕವನ್ನೂ ನೋಡದ ಮನೆತನ ಎನ್ನಬಹುದೇನೊ. ಕಾಳಮ್ಮನಿಂದ ಮಲ್ಲಮ್ಮನಾಗಿ, ಮಲ್ಲಮ್ಮನಿಂದ ಸರಸ್ವತಿಯಾಗಿ, ಕೊನೆಗೆ ಸರಸ್ವತಿಯಿಂದ ಜುಲೇಖಾ ಬೇಗಂ ಆದೆ. ಕಲೆಯ ಹಿನ್ನೆಲೆಯಿಲ್ಲದೆ ಬೆಳೆದ ನನಗೆ ಅದ್ಹೇಗೆ ಈ ಅಭಿನಯ ಕಲೆ ಒದಗಿಬಂತೋ!” ಕನ್ನಡ ರಾಜ್ಯೋತ್ಸವದ ಶುಭ ದಿನದಂದು ಹಿರಿಯ ರಂಗ ಕಲಾವಿದೆ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಜುಲೈಕಾ ಬೇಗಂ ಅವರ ಜೀವನ ವೃತ್ತಾಂತ "ಒಂದು ಜೀವ ಮೂರು ಜನ್ಮ". ನಿರೂಪಿಸುತ್ತಾರೆ ಕೀರ್ತಿ ಬೈಂದೂರು.

ಸಂಪಿಗೆ ಸ್ಪೆಷಲ್

ರಾಜ್ಕುಮಾರ್ ಅಂದ್ರ ಏನಂದ್ಕಂಡೆ?: ಎಂ. ಜವರಾಜ್‌ ಹೊಸ ಕಾದಂಬರಿಯ ಆಯ್ದ ಭಾಗ

ಪಂಚಾಯ್ತಿ ಆಫೀಸ್ ಮಗ್ಗುಲು ಬೀದಿಲಿದ್ದ ಕುಂಟ ಸಿದ್ದಪ್ಪನ ಮನೆಯ ಅಂಗಳದಲ್ಲಿ ಒಂದಷ್ಟು ಜನ ಮಾತಾಡ್ತ ನಿಂತಿದ್ದರು. ಅಲ್ಲಿಗೆ ನಾಕಾರು ಪೇಪರು ಬರುತ್ತಿದ್ದವು. ಕುಂಟ ಸಿದ್ದಪ್ಪ ಬಿಳಿಪಂಚೆ ಬಿಳಿ ಶರ್ಟು ಹಾಕೊಂಡು ಕ್ರಾಪ್ ತಲೆ ಬಾಚ್ಕೊಂಡು ಕಾಲಿನ ಮೇಲೆ ಕಾಲು ಹಾಕಿಕೊಂಡು “ಇದು ಗೋಕಾಕ್ ಚಳುವಳಿ ಅಂತ. ಅವ್ರೊಬ್ಬ ದೊಡ್ ಕವಿ. ಅವ್ರು ಸರ್ಕಾರಕ್ಕೆ ಬರ್ದ ಪತ್ರನ ಇಟ್ಕೊಂಡು ನಡಿತಿರ ಹೋರಾಟ ಇದು. ಏಯ್‌ ನೋಡ್ರಪ್ಪ, ಬಾಯಿಲ್ಲಿ” ಅಂತ ಕರೆದು, “ನೀನು ಐದ್ನೆ ಕ್ಲಾಸಾ? ನಾಕ್ನೆ ಕ್ಲಾಸಾ?” ಅಂದ. ನಾನು, ʼಹುʼ” ಎನ್ನುವವನಂತೆ ತಲೆದೂಗಿದೆ. “ಹೌದಾ? ಹೋಗು, ಇನ್ಮೇಲ ಇಂಗ್ಲಿಸ್ ಗಿಂಗ್ಲಿಸ್ ಓದಂಗಿಲ್ಲ, ಬರೀ ಕನ್ನಡ. ನಿನ್ತವು ಇಂಗ್ಲಿಸ್ ಬುಕ್ಸ್ ಇದ್ರ ತೂದು ಬಿಸಾಕಿ ಕನ್ನಡ ಇಟ್ಗ” ಅಂದ. ಅಲ್ಲೊಬ್ಬ ಕೇಳ್ತಿದ್ದವನು “ಇದ್ಕ ರಾಜ್ಕುಮಾರ್ ಯಾಕ್ ಮದ್ಯಕ್ ಬಂದ?” ಅಂತ ಕೇಳಿದ. ಎಂ. ಜವರಾಜ್‌ ಹೊಸ ಕಾದಂಬರಿ “ಪೋಸ್ಟ್‌ಮ್ಯಾನ್‌ ಗಂಗಣ್ಣ” ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ

ಈ ದಿನದ ಚಿತ್ರ

ಸ್ವಾತಂತ್ರ್ಯ ಪೂರ್ವೋತ್ತರದ ಸಂಘರ್ಷ: ಬಿ. ಕೆ. ಮೀನಾಕ್ಷಿ ಬರಹ

ಒಂದು ಸ್ಥಳದಿಂದ ನಿರ್ಗತಿಕರಾಗಿ ಓಡಿಬಂದವರಿಗೆ ಅನ್ನ ಆಶ್ರಯ ನೀಡಿ ಬದುಕು ಕೊಟ್ಟವರ, ಬದುಕನ್ನೇ ಬುಡಮೇಲು ಮಾಡುವ ಕೆಲಸಗಾರರ ಚಿತ್ರಣ, ಅದಕ್ಕೆ ಕುಮ್ಮಕ್ಕು ನೀಡಿ ಜಮೀನನ್ನೆಲ್ಲ ತಮ್ಮ ವಶ ಮಾಡಿಕೊಳ್ಳುವ ಕೆಲಸಗಾರರ ದಬ್ಬಾಳಿಕೆ, ನಿಯತ್ತಿಗೆ ಹೊರತಾದ ಅವರ ಕಾರ್ಯಭಾರವೆಲ್ಲದರ ಚಿತ್ರಣ ಗಮನಿಸಿದರೆ, ದ್ರೋಹವೆಂಬುದು ಸಾರ್ವಕಾಲಿಕವಾದದ್ದು, ಮನುಷ್ಯನ ಕುಟಿಲತೆ, ನೀಚ ಪ್ರವೃತ್ತಿ ಸಾವಿರ ವರ್ಷ ಕಳೆದರೂ ಬದಲಾಗದಂತಹುದು ಎಂಬುದು ಕಠೋರ ಸತ್ಯವಾಗಿ ಮನಸ್ಸನ್ನು ಆವರಿಸುತ್ತದೆ. ಶಶಿಧರ ಹಾಲಾಡಿ ಕಾದಂಬರಿ “ನದಿ ದಾಟಿ ಬಂದವರು” ಕುರಿತು ಬಿ.ಕೆ. ಮೀನಾಕ್ಷಿ ಬರಹ

  • ದಿನದ ಕವಿತೆ
  • ವಾರದ ಕಥೆ
  • ಮಿನಿಕಾಯ್ ಫೋಟೋ ಕಥನ
  • ದಿನದ ಕಾರ್ಟೂನ್

ದೇವರಾಜ್ ಹುಣಸಿಕಟ್ಟಿ ಬರೆದ ಈ ದಿನದ ಕವಿತೆ

"ಆ ಶಿವನು ವಿಲ ವಿಲನೇ ಒದ್ದಾಡಿ.. ಅವ್ವನ ನಂಬಿಕೆಯ ಜೊತೆಗೆ ಗುದ್ದಾಡಿ..  ಸೋತ ಶಿವ ನಾನು ಚೇತರಿಸಿ ಕೊಂಡಂತೆಯೂ... ಮಾಡಿಬಿಡುತ್ತಾನೆ..."- ದೇವರಾಜ್ ಹುಣಸಿಕಟ್ಟಿ ಬರೆದ ಈ ದಿನದ ಕವಿತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಎಂ.ಎನ್. ವ್ಯಾಸರಾವ್ ಬರೆದ ಕತೆ

ಕಾಲ ಕೈಕೊಡುತ್ತದೆ ಎಂದು ಸದಾ ಯೋಚಿಸುತ್ತಿದ್ದ ಹರಿಶ್ಚಂದ್ರನಿಗೆ ತನ್ನ ಮಗಳ ಹೆಸರು ‘ಸಮಯ’ವೆಂದು ತಿಳಿದಾಗ ಆಶ್ಚರ್ಯವಾಯಿತು. ಅಮೃತಾ ನೆನಪಾದಳು. ಎಲ್ಲಿದ್ದಾಳೆ? ಸಮಯಳ ಜೊತೆ ಇದ್ದಾಳೆಯೆ? ಸಮಯಳಿಗೆ ಹೇಗೆ ಗೊತ್ತಾಯಿತು ತನ್ನ ವಿಳಾಸ ಫೋನ್ ನಂಬರ್? ಅಮೃತಾ ಹೇಳಿರಬಹುದೆ? ತನ್ನಿಂದ ವಂಚಿತಳಾದವಳು. ಅವಳು ಹೇಳಿರುವುದು ಅಸಾಧ್ಯ ಎಂಬುದು ಖಾತ್ರಿ. ಒಂದುಕ್ಷಣ ಹರಿಶ್ಚಂದ್ರನ ಮುಖ ಕಪ್ಪಿಟ್ಟಿತು. ಮುಸ್ಸಂಜೆಯ ಕೆಂಪು ಬೆಳಕು ಕಿಟಕಿ ಪ್ರವೇಶಿಸಿತು. ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಎಂ.ಎನ್. ವ್ಯಾಸರಾವ್ ಬರೆದ ಕತೆ “ಟಿಕ್ ಟಿಕ್ ಟಿಕ್ ಟಿಕ್ ಕೈಕೊಟ್ಟ ಗಡಿಯಾರ”

ಮಿನಿಕಾಯ್ ಎಂಬ ಮಾಯಾದ್ವೀಪ: ಅಬ್ದುಲ್ ರಶೀದ್ ಬರೆಯುವ ಫೋಟೋ ಕಥಾನಕ

ನಾನು ಹೊರಟಿದ್ದುದು ಒಬ್ಬ ನೆಂಟನಂತೆ. ಒಂದು ಔತಣಕೂಟಕ್ಕೆ. ಆ ಔತಣಕೂಟವೂ ವಿಶೇಷವಾಗಿತ್ತು. ಆ ಹಳ್ಳಿ ಈ ಸಲದ ದೋಣಿ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದಿತ್ತು. ನಾನಾದರೋ ಹದಿನೆಂಟು ಗಂಟೆಗಳ ಕಾಲ ಕಡಲಲ್ಲಿ ಚಲಿಸುವ ಹಡಗೊಂದನ್ನು ಹತ್ತಿ, ಸೈಕಲನ್ನೂ ಹತ್ತಿಸಿ ಹೊರಟು ನಿಂತಿದ್ದೆ. ಜೊತೆಗೆ ಕಳೆದ ಕಾಲು ಶತಮಾನದಿಂದ ನನ್ನ ಜೀವನದ ವ್ಯಸನಗಳಾಗಿ ಹೋಗಿರುವ ಕ್ಯಾಮರಾ ಮತ್ತು ಮಸೂರಗಳು.

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ