ಬರಡು ಎದೆಯಲ್ಲಿ ಪ್ರೀತಿ ಹುಡುಕಿದ್ದು ನನ್ನ ತಪ್ಪು
ಬಂಜರು ನೆಲದಲ್ಲಿ ಕಾಳು ಬಿತ್ತಿದ್ದು ನನ್ನ ತಪ್ಪು
ಯಾವತ್ತೂ ತಲೆಯೆತ್ತಿ ಆಕಾಶ ನೋಡದವನು
ಅಮಾವಾಸ್ಯೆಯಲ್ಲಿ ಚಂದ್ರನ ಹುಡುಕಿದ್ದು ನನ್ನ ತಪ್ಪು
ಸುಲಭವಾಗಿ ಗಳಿಸುವ ಭ್ರಮೆಯಲ್ಲಿ ಬದುಕಿದ್ದೆ
ಮೀನು ಇರದ ಕೊಳಕ್ಕೆ ಬಲೆ ಬೀಸಿದ್ದು ನನ್ನ ತಪ್ಪು
ಸಂಗೀತ ಕಲಿಯಲು ಸಂಸ್ಕಾರ ಅರ್ಹತೆ ಇರಬೇಕು
ನಿನ್ನ ದನಿಗೆ ನನ್ನ ದನಿ ಬೆರೆಸಿದ್ದು ನನ್ನ ತಪ್ಪು
ನೀನು ಪ್ರೀತಿ ಪ್ರೇಮದ ಬೆಲೆ ತಿಳಿಯದ ಹೆಬ್ಬಂಡೆ
“ಕಾಂತ”ನಿನ್ನ ಕೇಳದೆ ಪ್ರೀತಿಸಿದ್ದು ನನ್ನ ತಪ್ಪು
ಲಕ್ಷ್ಮಿಕಾಂತ ಮಿರಜಕರ ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾಂವದವರು.
ʼಚಿಲುಮೆʼ ಇವರ ಪ್ರಕಟಿತ ಕೃತಿ.. “ಬಯಲೊಳಗೆ ಬಯಲಾಗಿ”ಗಜಲ್ ಸಂಕಲನ ಅಚ್ಚಿನಲ್ಲಿದೆ.
ಸದ್ಯ ಮೊಳಕಾಲ್ಮೂರು ತಾಲೂಕಿನ ದೇವಸಮುದ್ರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

