Advertisement

Category: ದಿನದ ಪುಸ್ತಕ

ಸ್ವಾತಂತ್ರ್ಯ ಪೂರ್ವೋತ್ತರದ ಸಂಘರ್ಷ: ಬಿ. ಕೆ. ಮೀನಾಕ್ಷಿ ಬರಹ

ಒಂದು ಸ್ಥಳದಿಂದ ನಿರ್ಗತಿಕರಾಗಿ ಓಡಿಬಂದವರಿಗೆ ಅನ್ನ ಆಶ್ರಯ ನೀಡಿ ಬದುಕು ಕೊಟ್ಟವರ, ಬದುಕನ್ನೇ ಬುಡಮೇಲು ಮಾಡುವ ಕೆಲಸಗಾರರ ಚಿತ್ರಣ, ಅದಕ್ಕೆ ಕುಮ್ಮಕ್ಕು ನೀಡಿ ಜಮೀನನ್ನೆಲ್ಲ ತಮ್ಮ ವಶ ಮಾಡಿಕೊಳ್ಳುವ ಕೆಲಸಗಾರರ ದಬ್ಬಾಳಿಕೆ, ನಿಯತ್ತಿಗೆ ಹೊರತಾದ ಅವರ ಕಾರ್ಯಭಾರವೆಲ್ಲದರ ಚಿತ್ರಣ ಗಮನಿಸಿದರೆ, ದ್ರೋಹವೆಂಬುದು ಸಾರ್ವಕಾಲಿಕವಾದದ್ದು, ಮನುಷ್ಯನ ಕುಟಿಲತೆ, ನೀಚ ಪ್ರವೃತ್ತಿ ಸಾವಿರ ವರ್ಷ ಕಳೆದರೂ ಬದಲಾಗದಂತಹುದು ಎಂಬುದು ಕಠೋರ ಸತ್ಯವಾಗಿ ಮನಸ್ಸನ್ನು ಆವರಿಸುತ್ತದೆ.
ಶಶಿಧರ ಹಾಲಾಡಿ ಕಾದಂಬರಿ “ನದಿ ದಾಟಿ ಬಂದವರು” ಕುರಿತು ಬಿ.ಕೆ. ಮೀನಾಕ್ಷಿ ಬರಹ

Read More

 ರೂಪಿಸಿದ ಮುಂಬೈ, ರೂಪುಗೊಂಡ ಮುಂಬೈ: ಕೆ. ಸತ್ಯನಾರಾಯಣ ಕೃತಿಯ ಪುಟಗಳು

ನವರೋಜಿ ಶಾಲೆಗೆ ಸೇರಿದ ಕಾಲಾವಧಿ ಎಂತಹುದೆಂದರೆ, ಮುಂಬೈ, ನಗರವಾಗಿ, ಪ್ರಾಂತ್ಯವಾಗಿ, ಶಿಕ್ಷಣ ಕ್ಷೇತ್ರದಲ್ಲಿ ನಾನಾ ರೀತಿಯ ಪ್ರಯೋಗ, ಪರಿವರ್ತನೆಗಳನ್ನು ಕಾಣುತ್ತಿದ್ದ ದಿನಗಳವು. ನೂರಾರು ಕನಸಿಗರು, ಪ್ರಯೋಗಶೀಲರು, ವಿಶಾಲ ಹೃದಯದ ಪಾಶ್ಚಿಮಾತ್ಯರು, ಎಲ್ಲರಿಗೂ ಶಿಕ್ಷಣದ ಬಗ್ಗೆ ಆಸಕ್ತಿ. ಭಾರತೀಯರನ್ನು ಹೊಸ ವಿಚಾರಗಳಿಗೆ, ಕಲಿಯುವ ಪದ್ಧತಿಗಳಿಗೆ ತೆರೆಯುವ ಹುಮ್ಮಸ್ಸು. ನವರೋಜಿ ಈ ಎಲ್ಲ ಕನಸು, ಪ್ರಯೋಗಗಳ ಫಲಾನುಭವಿ. ಮೊದಲನೆಯ ತಲೆಮಾರಿನ ಫಲಾನುಭವಿ.
ಕೆ. ಸತ್ಯನಾರಾಯಣ ಹೊಸ ಕೃತಿ “ದಾದಾಭಾಯಿ ನವರೋಜಿ” ಕೆಲವು ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಇಂದು ನವರೋಜಿ ಅವರ ೨೦೦ನೇ ಹುಟ್ಟುಹಬ್ಬ, ಅದರ ಪ್ರಯುಕ್ತ ಈ ಕೃತಿಯ ಒಂದು ಬರಹ ನಿಮ್ಮ ಓದಿಗೆ

Read More

ಮಹಾದೇವಿಯಕ್ಕನೆಂಬ ಬೆಳಕು…: ಸುಭದ್ರಾ ಹೆಗಡೆ ಬರಹ

ಅಕ್ಕನ ವಚನಗಳನ್ನು ಉದಾರಿಸುತ್ತ, ಆ ಘಟನೆಗಳಿಗೆ ಪೂರಕವಾಗುವಂತೆ ಕತೆಗಳನ್ನು ಹೇಳುವುದು ಈ ಕೃತಿಯ ಮತ್ತೊಂದು ವಿಶೇಷತೆ. ರಾಜ ಮನೆತನದ ರೀತಿ-ರಿವಾಜುಗಳನ್ನು ಸ್ವತಂತ್ರ ಮನೋಭಾವದ ಅಕ್ಕನಿಗೆ ಸಹಿಸುವುದು ಸಹಜವಾಗಿಯೇ ಕಷ್ಟವಾಗಿ, ಆ ರಾಜ ವೈಭೋಗವನ್ನೆಲ್ಲ ಧಿಕ್ಕರಿಸಿ ಹೊರ ನಡೆಯುತ್ತಾಳೆ. ಅಲ್ಲಿಂದ ಅಕ್ಕನ ಅಪರಿಮಿತ ಹುಡುಕಾಟ ನಿರಂತರವಾಗಿ ಸಾಗುತ್ತದೆ. ಒಂಟಿ ಹೆಣ್ಣು ಅರೆವಸ್ತ್ರ ಧರಿಸಿ ನಡೆವ ದಾರಿಯಲ್ಲಿ ಬರುವ ಅನೇಕ ಸಂಕಷ್ಟಗಳನ್ನು ಮೆಟ್ಟಿ ನಿಲ್ಲುವ ಧೀರೋದ್ಧಾತ ಮನಸ್ಸುಳ್ಳ ಛಲಗಾತಿ ಅಕ್ಕನ ಮೇರು ವ್ಯಕ್ತಿತ್ವವನ್ನು ಅದ್ಭುತವಾಗಿ ಕೆತ್ತಿದ್ದಾರೆ ಲೇಖಕಿಯವರು. ಅಕ್ಕನ ವ್ಯಕ್ತಿತ್ವದ ಅನಾವರಣವಾದ ರೀತಿ ಅಸದೃಶ್ಯವಾಗಿದೆ.
ಡಾ. ಎಚ್.ಎಸ್. ಅನುಪಮಾ ಅವರ “ಬೆಳಗಿನೊಳಗು ಮಹಾದೇವಿಯಕ್ಕ” ಕಾದಂಬರಿಯ ಕುರಿತು ಸುಭದ್ರಾ ಹೆಗಡೆ ಬರಹ

Read More

ಕನಸಾಗೇ ಉಳಿದ ಕನಸು: ಫಾತಿಮಾ ರಲಿಯಾ ಅನುಭವ ಕಥನದ ಕೆಲವು ಪುಟಗಳು

ನನ್ನ ಮಾತಲ್ಲಿ ಆತ್ಮವಿಶ್ವಾಸ, ಸತ್ಯ ಇಲ್ಲ ಅನ್ನುವುದು ತುಂಬಾ ಸ್ಪಷ್ಟವಾಗಿ ನನಗೇ ಗೊತ್ತಾಗುತ್ತಿತ್ತು, ಬಹುಶಃ ಅಮ್ಮನಿಗೂ ಗೊತ್ತಾಗಿದೆ. ನಾನು ಮಾತು ಮುಂದುವರೆಸಲಿಲ್ಲ, ಅಮ್ಮನೂ ಮುಂದುವರೆಸಲಿಲ್ಲ. ಇಬ್ಬರ ಮನದೊಳಗೂ ದುಃಖವೊಂದು ಹೊಯ್ದಾಡುತ್ತಿತ್ತು.‌ ಅಲ್ಲಿ ನೆಲೆ ನಿಂತಿದ್ದ ಮೌನ ನಮ್ಮಬ್ಬರಲ್ಲೂ ಉಸಿರುಗಟ್ಟಿಸುವ ಭಾವ ಹುಟ್ಟಿಸುತ್ತಿತ್ತು. ಅಮ್ಮನ ಕಣ್ಣು ತುಂಬಿಕೊಳ್ಳುತ್ತಿತ್ತು. ನಾನು ತೀರಾ ನಿರ್ಭಾವುಕಳಂತೆ ಅಲ್ಲಿಂದ ಎದ್ದು ಹೋದೆ, ನನಗೆ ಹಾಗೆ ಹೋಗದೆ ಬೇರೆ ದಾರಿಯೇ ಇರಲಿಲ್ಲ. ಯಾಕೆಂದರೆ ಇನ್ನೆರಡೇ ಎರಡು ನಿಮಿಷ ನಾನಲ್ಲಿ ನಿಂತಿದ್ದರೂ ಅಳು ಭೋರ್ಗರೆಯುತ್ತಿತ್ತು.
ಫಾತಿಮಾ ರಲಿಯಾ ಅನುಭವ ಕಥನ “ಕೀಮೋ” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ನೇತಾಜಿ ಸುಭಾಷರ ಲೋಕದಲ್ಲಿ ನಮ್ಮದೊಂದು ಹೆಜ್ಜೆ: ನಾರಾಯಣ ಯಾಜಿ ಬರಹ

ರಾಮಾಯಣವನ್ನು ಹೊಸ ಇತಿಹಾಸದೊಂದಿಗೆ ನೇತಾಜಿ ಸುಭಾಶ್‌ಚಂದ್ರ ಬೋಸ್ ಅವರು ಇಂಗ್ಲೀಷಿನಲ್ಲಿ ಬರೆದ ಆತ್ಮಕಥೆಯನ್ನು “ಭಾರತೀಯ ಹೋರಾಟ” ಎನ್ನುವ ಹೆಸರಿನಲ್ಲಿ ಹೊರತಂದಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂ, ಗಾಂಧಿ ಒಂದು ಕಡೆ, ಅದಕ್ಕೆ ಪ್ರತಿಯಾಗಿ ನೇತಾಜಿ ಸುಭಾಶ್ ಬಾಬು ಎನ್ನುವ ಸುದ್ದಿ ಯಾವತ್ತಿನಿಂದಲೂ ಕೇಳುತ್ತಲೇ ಇದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ 1915 ರಿಂದ 1921ರ ತನಕ ಮಹತ್ವದ ತಿರುವು ಕಂಡ ದಿನಗಳು.
ಪ್ರೊ. ಕೆ.ಇ. ರಾಧಾಕೃಷ್ಣ ಅನುವಾದಿಸಿರುವ ಸುಭಾಶ್‌ಚಂದ್ರ ಬೋಸರ ಕೃತಿ “ಭಾರತೀಯ ಹೋರಾಟ”ದ ಕುರಿತು ನಾರಾಯಣ ಯಾಜಿ ಬರಹ, ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ