ಮುದಿರಾಜ್ ಬಾಣದ್ ಕಾದಂಬರಿ “ಸಿಕ್ಕು” ಕೃತಿಯ ಆಯ್ದ ಭಾಗ
ಅಡಿಗೆಮನೆಯಲ್ಲಿ ಇದ್ದ ಕಾಶಿಬಾಯಿ ಒಮ್ಮೆ ಸೂಕ್ಷ್ಮವಾಗಿ ಲಂಕ್ಯಾನನ್ನು ದಿಟ್ಟಿಸಿದಳು. ಆ ನೋಟಕ್ಕೆ ವಶೀಕರಣಗೊಂಡವನಂತೆ ಎದ್ದವನೇ ಮಗ ಹಾಗೂ ಮಗಳನ್ನು ಎಳೆದೆಳೆದು ಸಿಕ್ಕಸಿಕ್ಕಲ್ಲಿ ಮೈಮೇಲೆ ದೆವ್ವ ಬಂದವನಂತೆ ಬಡಿಯತೊಡಗಿದ. ಆ ಇಬ್ಬರೂ ಮಕ್ಕಳು ಬೆನ್ನನ್ನು ಸವರಿಕೊಳ್ಳುತ್ತ ತನ್ನ ತಂದೆ ಯಾಕೆ ಹೊಡೆಯುತ್ತಿದ್ದಾನೆ ಅನ್ನುವ ಅರಿವಿಲ್ಲದೆ ಅಳುತ್ತ ದಿಕ್ಕಿಗೊಂದು ಓಡತೊಡಗಿದರೆ ಹಿಂದೆ ಹಿಂದೆ ಹೋಗಿ ಮನಸ್ಸೋ ಇಚ್ಛೆ ಬೈಯುತ್ತ ಹೊಡೆಯತೊಡಗಿದ. ತಮ್ಮ ಅಜ್ಜಿಯಾಗಲಿ ಇಲ್ಲ ತಮ್ಮ ತಾಯಿಯಾಗಲಿ ಆ ಮಕ್ಕಳ ಸಹಾಯಕ್ಕೆ ಬರದೆ ಸುಮ್ಮನೆ ತಮ್ಮ ಪಾಡಿಗೆ ತಾವಿದ್ದದು, ತಂದೆಯ ಕೈಯಲ್ಲಿ ಅನಾಮತ್ತಾಗಿ ಸಿಕ್ಕಿ ಹೊಡೆಸಿಕೊಂಡಿದ್ದು ನೆನೆಸಿಕೊಂಡು ದುಃಖಿಸುತ್ತ ಮತ್ತಷ್ಟೂ ಅಳತೊಡಗಿದವು.
ಮುದಿರಾಜ್ ಬಾಣದ್ ಕಾದಂಬರಿ “ಸಿಕ್ಕು” ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ
