ಸಾತ್ವಿಕ ಆತ್ಮವಿಶ್ವಾಸದ ಪ್ರತೀಕ
ರಾಜೇಶ್ವರಿ ತೇಜಸ್ವಿ ಜೀವನೋತ್ಸಾಹದ, ಲವಲವಿಕೆಯ ಮಹಿಳೆ. ಒಬ್ಬರೇ ಇದ್ದಾಗಲೂ ಅಡಿಗೆ ಮಾಡಲು ಅವರಿಗೆ ಎಂದಿನ ಉತ್ಸಾಹವೇ ಇರುತ್ತಿತ್ತು. ಸಾಮಾನ್ಯ ವಾಗಿ ಅವರ ಮೆನು ವಿನಲ್ಲಿ ಮೂರು ತರಕಾರಿ ಐಟಂಗಳು. ಪಲ್ಯ ಚಟ್ನಿ , ಸಾರು ಅಥವಾ ಸಾಂಬಾರು. ಕೆಸುವಿನ ಸೊಪ್ಪನ್ನು ಗಂಟು ಕಟ್ಟಿ ಮಾಡುವ ಸಾಂಬಾರು, ಹೀರೆ ಸಿಪ್ಪೆಯ ಚಟ್ನಿ, ಪತ್ರೊಡೆ, ಪಕೋಡಗಳು ಹೀಗೆ. ಮಲೆನಾಡಿನ ವಿಶೇಷಗಳು. ಎಂಬತ್ನಾಲ್ಕರ ಪ್ರಾಯದಲ್ಲಿ ಸದೃಢವಾದ ಹಲ್ಲುಗಳನ್ನು ಹೊಂದಿದ್ದ ಅವರು ಎಂದೂ ಯಾರ ಬಗ್ಗೆಯೂ ಕಟಕಿಯಾಡಿದ್ದಿಲ್ಲ. ತುಂಬು ಬದುಕನ್ನು ಸವಿದು ಅವರೀಗ ಹೊರಟು ಹೋಗಿದ್ದಾರೆ.
Read More
