Advertisement

Category: ಸಾಹಿತ್ಯ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೆ.ಪಿ.ಸುರೇಶ ಕತೆ

ಒಂದು ದಿನ ಕ್ಯಾಂಪಸ್ಸಿಗೆ ಬಂದ ಚಂದ್ರಮೌಳಿ ಸಂಜೆ ಸುಧಾಳೊಂದಿಗೆ ಟೀ ಕುಡಿಯುತ್ತಾ “ನೋಡು, ನಾನು ಕಲ್ಕತ್ತಾಗೆ ಹೋಗ್ತಿದ್ದೀನಿ. ಈ ಹೋರಾಟ ಎಲ್ಲ ಶಕ್ತಿಗುಂದುತ್ತಾ ಇದೆ. ಇದ್ರಿಂದೆಲ್ಲ ಏನಾದ್ರೂ ಆಗುತ್ತೆ ಅನ್ನೋ ನಂಬಿಕೆನೂ ನನಗಿಲ್ಲ. ಒಂದು ಅಮೆರಿಕನ್ ಕಂಪೆನಿಯಿಂದ ಒಳ್ಳೆ ಆಫರ್ ಇದೆ. ಎರಡು ವರ್ಷದ ಮೇಲೆ ಸ್ಟೇಟ್ಸ್‌ಗೆ ಹೋಗೋ ಛಾನ್ಸೂ ಇದೆ. ನಿಂಗೆ ಇದು ದ್ರೋಹದ ಥರ ಕಾಣಿಸಬಹುದು, ಪರ್ಸನಲ್ ಲೆವೆಲ್‌ನಲ್ಲೂ…
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೆ.ಪಿ.ಸುರೇಶ ಕತೆ “ಯಾರಲ್ಲಿ, ಕಳೆದಿರುಳು….” ನಿಮ್ಮ ಈ ಭಾನುವಾರದ ಓದಿಗೆ

Read More

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ ಕತೆ

ಪಕ್ಕದ ಮನೆಯ ಹುಡುಗಿ ವಿಹಿತಾ ತರಗತಿಗೆ ಫಸ್ಟ್ ಬಂದಿದ್ದಳು. ಲಚ್ಚಿಗೆ ಎರಡನೇ ಸ್ಥಾನ. ಈ ವಿಷಯ ತಿಳಿದಾಗಲೇ ಸೀಮಾ ಅಪ್‌ಸೆಟ್ ಆಗಿದ್ದಳು. ವಿಹಿತಾಳ ತಾಯಿಯ ಜೊತೆಗೆ ಸರಿಯಾಗಿ ಮಾತನಾಡುವುದಕ್ಕೂ ಆಗಿರಲಿಲ್ಲ ಅವಳಿಗೆ. ಅಕ್ಕನ ಮಗಳು ನಾಲ್ಕು ವರ್ಷಗಳಿಂದಲೂ ತರಗತಿಗೆ ಫಸ್ಟ್ ಬರುತ್ತಲೇ ಇದ್ದಾಳೆ. ಸ್ನೇಹಿತೆಯ ಮಗ ವಿಹಾನ್ ಕೀಬೋರ್ಡ್ ತರಗತಿಗೆ ಹೋಗುತ್ತಲೇ ಕಲಿಕೆಯಲ್ಲೂ ಎರಡನೇ ಸ್ಥಾನ ಪಡೆಯುತ್ತಿದ್ದಾನೆ.
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಕತೆ “ಲಚ್ಚಿಯ ಒಂದು ದಿನ” ನಿಮ್ಮ ಓದಿಗೆ

Read More

ಬದುಕಿನ ತಿರುವುಗಳು….: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಬೀದಿಯಲ್ಲಿ ಬರುವವರು ಹೋಗುವವರು ಹುಡುಗಿಯರನ್ನು ನೋಡಿಕೊಂಡು ಹೋಗುತ್ತಿದ್ದರು. ಕೆಲವು ಹೆಣ್ಣುಮಕ್ಕಳು ಅವರಿಬ್ಬರ ಸುತ್ತಲೂ ನಿಂತುಕೊಂಡು ಹೂವಿನ ಜಡೆಗಳನ್ನು ಮತ್ತು ಅವರಿಬ್ಬರನ್ನೂ ನೋಡಿ ಒಳಗೊಳಗೆ ನಾವೂ ಇಂತಹ ಮಲ್ಲಿಗೆ ಮೊಗ್ಗಿನ ಜಡೆಗಳನ್ನ ಹಾಕಿಕೊಂಡರೆ ಹೇಗಿರುತ್ತದೆ ಎನ್ನುವ ಕನಸಿನಲ್ಲಿ ನಿಂತಕಡೆಯೇ ತೇಲಾಡುತ್ತಿದ್ದರು. ಪಕ್ಕದ ಮನೆಗಳ ಕೆಲವು ಮಹಿಳೆಯರು ಬಂದು “ಯಾರು ಈ ಮೊಗ್ಗಿನ ಜಡೆಗಳನ್ನು ಹಾಕಿದ್ದು?” ಎಂದಾಗ ಪಕ್ಕದಲ್ಲಿದ್ದ ಮಹಿಳೆಯೊಬ್ಬರು “ಇನ್ಯಾರು ಅಲಮೇಲು. ವೆಲ್ಲೂರು ಕಡೆಯವರು ಹೂಕಟ್ಟುವುದರಲ್ಲಿ ತುಂಬಾ ಫೇಮಸ್ ಅಲ್ಲವೇ?” ಎಂದಳು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಹತ್ತನೆಯ ಕಂತು ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಎಂ.ಎಸ್‌. ಶ್ರೀರಾಮ್‌ ಕತೆ

ಅಪ್ಪ- ಮಗ ಮತ್ತೆ ಎಂದಿನಂತೆ ಕೂದಲು ಕತ್ತರಿಸಿಕೊಳ್ಳಲು ಹೋದರು. ಅಲ್ಲಿಗೆ ಹೋದಾಗ ಪ್ರಭಾತ ಅವಾಕ್ಕಾದ. ಯಾವಾಗಲೂ ಕಚಾಕಚ್‌ ತುಂಬಿರುತ್ತಿದ್ದ ಮನಿಷಾ ಹೇರ್‌ ಆರ್ಟ್‌ ಖಾಲಿಯಾಗಿತ್ತು. ಅದರ ಗಾಜುಗಳೆಲ್ಲ ಛಿದ್ರವಾಗಿ ಅವಶೇಷಗಳು ಮಾತ್ರ ಕಾಣುತ್ತಿದ್ದವು. ಒಂದೇಒಂದು ಕನ್ನಡಿ, ಒಂದು ಎತ್ತರದ ಕುರ್ಚಿ ಹಾಗೂ ನೆಲದ ಮೇಲೆ ಕುಕ್ಕರಗಾಲಿನಲ್ಲಿ ಕೂತಿದ್ದ ಕಳಾಹೀನ ಮುಖದ ಒಂಟಿ ವ್ಯಕ್ತಿ. ಅವನ ಮುಖ ನೋಡಿದಾಗ ಪ್ರಭಾತನಿಗೆ ನೆನಪಾಯಿತು – ಅಷ್ಟೂ ದಿನ ತಮ್ಮಿಂದ ಹಣ ಪಡೆಯುತ್ತಿದ್ದ ವ್ಯಕ್ತಿ ಈತನೇ. ಮೊದಲು ಮಗ, ನಂತರ ಅಪ್ಪ ಹೀಗೆ ಇಬ್ಬರೂ ಒಬ್ಬರಾದ ನಂತರ ಒಬ್ಬರು ಕತ್ತರಿಗೆ ತಲೆಯನ್ನೊಡ್ಡಿದರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಎಂ.ಎಸ್‌. ಶ್ರೀರಾಮ್‌ ಕತೆ “ತೇಲ್ ಮಾಲಿಶ್”

Read More

ಕಲ್ಲುಬಂಡೆ ಮೇಲೆ ಕುಳಿತಿದ್ದ ಸೆಲ್ವಂ, ಸತ್ತುಹೋದನು: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಮಣಿಗೂ ಅವರು ಹೇಳುವುದು ಸರಿ ಎನಿಸಿತು. ತಾಯಿ ಮತ್ತು ತಂಗಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಒಂದೇ ದಿನದಲ್ಲಿ ಮಣಿಯ ಹೆಗಲಿಗೆ ಜಾರಿಬಿದ್ದಿತ್ತು. ಸುಮತಿಯ ಮದುವೆಯನ್ನೂ ಮಾಡಬೇಕಾಗಿತ್ತು. ಕಾರ್ಮಿಕ ಮುಖಂಡರು, ಮಣಿ ಮತ್ತು ಕನಕಳಿಗೆ ಸಾಂತ್ವನ ಹೇಳಿ ಮಣಿಗೆ ಕೆಲಸಕ್ಕೆ ಅರ್ಜಿ ಹಾಕಲು ಎಲ್ಲ ಕಾಗದ ಪತ್ರಗಳನ್ನು ಬೇಗನೆ ತಯಾರುಮಾಡಿ ಕೊಡುವಂತೆ ಹೇಳಿ ಹೊರಟುಹೋದರು. ಆರ್ಮುಗಮ್, ಮಣಿಗೆ ಆದಷ್ಟು ಬೇಗನೆ ಕೆಲಸ ಮಾಡಿಕೊಡುವಂತೆ ಅಯ್ಯಪ್ಪನಿಗೆ ಹೋಗುವ ಮುಂಚೆ ಕೇಳಿಕೊಂಡರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಒಂಭತ್ತನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ