ಮನುಷ್ಯ ಬದುಕಿನೊಂದಿಗೆ ಮುಖಾಮುಖಿಯಾಗುವ ಪದ್ಯಗಳು: ಕಲ್ಲೇಶ್ ಕುಂಬಾರ್ ಬರಹ
ಕವಿಯಾಗಿ ಮಾಲತಿಯವರಿಗೆ ಕತ್ತಲು ಮತ್ತು ಬೆಳಕಿನ ಕುರಿತಾಗಿ ವಿಶಿಷ್ಟವಾದ ಆಕರ್ಷಣೆಯಿದೆ ಎನ್ನಬಹುದು. ಈ ಮಾತಿಗೆ ಸಾಕ್ಷಿಯಾಗಿ ಈ ಕವನಸಂಕಲನದಲ್ಲಿ ‘ಅಜ್ಜಿ ಮತ್ತು..’ ಎಂಬ ಪದ್ಯವೊಂದಿದೆ. ಇಲ್ಲಿ, ಕತ್ತಲು–ಬೆಳಕಿನ ಆಟವನ್ನು ಕೇಂದ್ರವಾಗಿರಿಸಿಕೊಂಡು ಮನುಷ್ಯ ಬದುಕಿನ ಕ್ರಿಯೆಗಳನ್ನು ಅವರು ಶೋಧಿಸಲು ಪ್ರಯತ್ನಿಸಿದ್ದಾರೆ. ಈ ಪದ್ಯದ ಶೀರ್ಷಿಕೆಯಲ್ಲಿರುವ ‘ಅಜ್ಜಿ’ ಬೇರಾರೂ ಆಗಿರದೇ ನಮ್ಮೊಳಗಿನ ಅರಿವಿನ ಕೇಡು ಕಳೆಯಲೆಂದು ನಮ್ಮ ಎದೆಯಂಗಳದಲ್ಲಿ ಮುಡಿಸಿಟ್ಟ ಅರಿವಿನ ದೀವಿಗೆಯೇ ಆಗಿದ್ದಾಳೆ!
ಮಾಲತಿ ಗೋರೆಬೈಲ್ ಬರೆದ “ಗುಬ್ಬಿ ಲಾಟೀನು” ಕವನ ಸಂಕಲನದ ಕುರಿತು ಕಲ್ಲೇಶ್ ಕುಂಬಾರ್ ಬರಹ
